ಮೀರಾಬಾಯಿ ಚಾನು ಬಗ್ಗೆ ಭಾರತೀಯರು ಈಗ ಖಂಡಿತಾ ತಿಳಿದಿರುತ್ತೀರಿ. ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಹೆಮ್ಮೆಯ ಕ್ರೀಡಾಳು ಈಕೆ. 49 ಕೆಜಿ ವೈಟ್ ಲಿಫ್ಟಿಂಗ್ ಕ್ಯಾಟಗರಿಯಲ್ಲಿ ಬೆಳ್ಳಿ ಪದಕ ಪಡೆದ ಅವರು, ಭಾರತಕ್ಕೆ ವೈಟ್ ಲಿಫ್ಟಿಂಗ್ನಲ್ಲಿ ಮೊದಲ ಪದಕ ತಂದುಕೊಟ್ಟವರೂ ಆಗಿದ್ದಾರೆ. ಮೀರಾಬಾಯಿ ಚಾನು ಭಾರತಕ್ಕೆ ಬಂದಾಗ ಅವರಿಗೆ ಅದ್ಧೂರಿ ಸ್ವಾಗತ ದೊರಕಿತು. ಕೇಂದ್ರ ಸಚಿವರು, ಸರ್ಕಾರ ಮತ್ತು ಇತರ ಹಲವರು ಗೌರವ, ಸನ್ಮಾನ, ಶುಭಾಶಯ ಕೋರಿದರು.
ಈ ಸನ್ಮಾನ ಸಮಾರಂಭಗಳಲ್ಲಿ ಒಂದು ಕಾರ್ಯಕ್ರಮದ್ದು ಎಂದು ಹೇಳಲ್ಪಡುವ ಫೋಟೊ ಒಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಪೋಸ್ಟ್ ಬ್ಯಾನರ್ನಲ್ಲಿ ಇರುವಂತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಧನ್ಯವಾದಗಳು ಎಂದು ಮೀರಾಬಾಯಿ ಚಾನು ಹೇಳುವಂತೆ ಬರೆಯಲಾಗಿತ್ತು. ಅದರಲ್ಲಿ ಪ್ರಧಾನಿ ಮೋದಿ ಹಾಗೂ ಮೀರಾಬಾಯಿ ಚಾನು ಚಿತ್ರವೂ ಕಂಡುಬಂದಿತ್ತು.
ಬ್ಯಾನರ್ನ ಹಿಂದಿ ಭಾಷೆಯ ಸಾಲು ಹೇಳುವಂತೆ ‘ಮೀರಾಬಾಯಿ ಚಾನುಗೆ ಮೆಡಲ್ ನೀಡಿದ್ದಕ್ಕೆ ಧನ್ಯವಾದಗಳು ಮೋದಿಜಿ’ ಎಂದು ಹೇಳಲಾಗಿದೆ. ಇದನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೀರಾಬಾಯಿ ಚಾನು ಸ್ವಪ್ರಯತ್ನದಿಂದ ಪದಕ ಪಡೆದದ್ದಲ್ಲವೇ? ಮೋದಿ ಕೊಟ್ಟದ್ದಾ? ಎಂದು ಕೇಳಿದ್ದಾರೆ.
ಈ ಚಿತ್ರದ ಸತ್ಯಾಸತ್ಯತೆ ಏನು?
ಹಾಗಾದರೆ, ಈ ಚಿತ್ರ ಸತ್ಯವಾದುದೇ? ಬ್ಯಾನರ್ನಲ್ಲಿ ಹೀಗೆ ಬರೆಯಲಾಗಿತ್ತೇ? ಈ ಬಗ್ಗೆ ಇಂಡಿಯಾ ಟುಡೇ ಫೇಕ್ ನ್ಯೂಸ್ ವಿರೋಧಿ ವಾರ್ ರೂಮ್ ಫ್ಯಾಕ್ಟ್ ಚೆಕ್ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗಿರುವ ಫೋಟೊ ಸತ್ಯಾಸತ್ಯತೆ ತಿಳಿಯಲಾಗಿದೆ. ಆ ವಿವರ ಇಲ್ಲಿದೆ.
ನಿಜವಾಗಿ, ಆ ಫೋಟೊವನ್ನು ಜುಲೈ 27ರಂದು ಯುವಜನ ಮತ್ತು ಕ್ರೀಡಾ ಇಲಾಖೆಯ ಮಾಧ್ಯಮ ಪ್ರಕಟಣೆಯಲ್ಲಿ ಹಂಚಿಕೊಳ್ಳಲಾಗಿದೆ. ಇಲಾಖೆ ಹಂಚಿಕೊಂಡಿರುವ ಆ ಚಿತ್ರದಲ್ಲಿ ಮೇಲೆ ಹೇಳಿರುವ ಮೋದಿಜಿಗೆ ಧನ್ಯವಾದಗಳು ಎಂಬ ಸಾಲು ಇಲ್ಲ. ಅಂದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಚಿತ್ರ ಎಡಿಟ್ ಮಾಡಿರುವುದಾಗಿದೆ.
A historic decision taken to establish National Sports University in Manipur was another big achievement for the northeast region.
I congratulate @mirabai_chanu on behalf of 135 crore Indians and the Parliament, for her achievement – Union Minister @ianuragthakur pic.twitter.com/r8fGNbheE5
— PIB India (@PIB_India) July 26, 2021
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕುರ್ ನಿವಾಸದಲ್ಲಿ, ಮೀರಾಬಾಯಿ ಚಾನು ಹಾಗೂ ಕೋಚ್ ವಿಜಯ್ ಶರ್ಮಾ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಕೇಂದ್ರ ಸಚಿವ ಕಿರೆನ್ ರಿಜಿಜು, ಕಿಶನ್ ರೆಡ್ಡಿ ಮತ್ತು ಸರ್ಬಾನಂದ ಕೂಡ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಕೂಡ ಆ ದಿನ ಕಾರ್ಯಕ್ರಮದ ವಿಡಿಯೋ ತುಣುಕನ್ನು ಹಂಚಿಕೊಂಡಿತ್ತು. ಅದರಲ್ಲಿ ಕೂಡ ನಾವು ನಿಜವಾದ ಬ್ಯಾನರ್ ಚಿತ್ರ ಗಮನಿಸಬಹುದು. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರವು ಎಡಿಟ್ ಮಾಡಿರುವುದು ಎಂದು ಖಚಿತವಾಗಿದೆ.
ಇದನ್ನೂ ಓದಿ: Fact Check: ಅನಾಥ ಬಾಲಕಿಗೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಸಹಾಯ ಹಸ್ತ, ವೈರಲ್ ಚಿತ್ರದ ಸತ್ಯಾಸತ್ಯತೆ ಏನು?
Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್ 19 2ನೇ ಅಲೆ ಸಂದರ್ಭದಲ್ಲ..!
(Fact Check on Mirabai Chanu thanking PM Narendra Modi banner)