Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್​ 19 2ನೇ ಅಲೆ ಸಂದರ್ಭದಲ್ಲ..!

Amigosblink ಸ್ಟುಡಿಯೋದ ಫೇಸ್​ಬುಕ್​ ಪೇಜ್​ನ ಅಡ್ಮಿನಿಸ್ಟ್ರೇಟರ್ ಆಗಿರುವ ಅಜಯ್​ ಕುಮಾರ್​ ಅವರನ್ನು ಬೂಮ್​ ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡಿದೆ. ಈ ಫೋಟೋವನ್ನು ತೆಗೆದಿದ್ದು 2020ರ ಡಿಸೆಂಬರ್​ನಲ್ಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

Fact Check: ಈ ಫೋಟೋ ಹಿಮಾಚಲ ಪ್ರದೇಶದ ಮನಾಲಿಯದ್ದೇ ಆದರೂ..ಕೊವಿಡ್​ 19 2ನೇ ಅಲೆ ಸಂದರ್ಭದಲ್ಲ..!
ವೈರಲ್​ ಆದ ಫೋಟ)
Follow us
TV9 Web
| Updated By: Lakshmi Hegde

Updated on: Jul 13, 2021 | 6:43 PM

ಇತ್ತೀಚೆಗೆ ಅಂದರೆ ಜುಲೈ ಪ್ರಾರಂಭದಲ್ಲಿ ಮನಾಲಿ(Manali) ಯ ಮಾಲ್​ ರಸ್ತೆಯ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗಿತ್ತು. ವಿಪರೀತ ಜನಸಂದಣಿ ಇರುವ ಫೋಟೋವನ್ನು ಶೇರ್​ ಮಾಡಿಕೊಂಡಿದ್ದ ಕೆಲವು ಫೇಸ್​ಬುಕ್​, ಟ್ವಿಟರ್​ ಬಳಕೆದಾರರು ಕೊವಿಡ್​ 2ನೇ ಅಲೆಯ ಹೊತ್ತಲ್ಲಿ, ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಇಷ್ಟೊಂದು ಪ್ರವಾಸಿಗರು ನೆರೆದಿದ್ದಾರೆ. ಇಲ್ಲಿ ಯಾವುದೇ ಸಾಮಾಜಿಕ ಅಂತರ ನಿಯಮ ಪಾಲನೆಯಾಗುತ್ತಿಲ್ಲ ಎಂದು ಕ್ಯಾಪ್ಷನ್​ಗಳನ್ನು ಬರೆದಿದ್ದರು. ಅಲ್ಲಿ ಪ್ರವಾಸಿಗರು ನೆರೆದಿದ್ದನ್ನು ನೋಡಿದವರೆಲ್ಲ ಹುಬ್ಬೇರಿಸಿದ್ದರು.

ಆದರೆ ಈ ಫೋಟೋ ಹಳೇಯದಾಗಿದ್ದು, ಕೊವಿಡ್​ 19 ಎರಡನೇ ಅಲೆ ಬರುವುದಕ್ಕೂ ಮೊದಲೇ Amigosblink ಎಂಬ ಸ್ಟುಡಿಯೋ ತೆಗೆದಿದ್ದು ಎಂಬುದು ಫ್ಯಾಕ್ಟ್​ಚೆಕ್ (FactCheck) ​ನಿಂದ ಗೊತ್ತಾಗಿದೆ. ಆಲ್ಟ್​ ನ್ಯೂಸ್​ ಈ ಫೋಟೋವನ್ನು ರಿವರ್ಸ್​ ಸರ್ಚ್​ ಇಮೇಜ್​​ಗೆ ಹಾಕಿತ್ತು. ಆಗ ಇದೇ ಫೋಟೋ 2021ರ ಜನವರಿ 24ರಂದೂ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈ ಫೋಟೋ ತೆಗೆಯಲ್ಪಟ್ಟಿದೆ ಎಂದೂ ಗೊತ್ತಾಗಿದೆ. ಹಾಗೇ, ಇದು ಹಿಮಾಚಲ ಪ್ರದೇಶ ಮನಾಲಿಯದ್ದೇ ಫೋಟೋ ಆದರೂ 2020ರ ಡಿಸೆಂಬರ್​​ 31ರಂದೇ ಕ್ಲಿಕ್ಕಿಸಿದ್ದು ಎಂದು ಬೂಮ್​ ಫ್ಯಾಕ್ಟ್​ಚೆಕ್​ ಕೂಡ ಸ್ಪಷ್ಟಪಡಿಸಿದೆ.

ಹಳೇ ಫೋಟೋವನ್ನು ಜುಲೈ 4ರಂದು ಅಮರ್​ಪ್ರೀತ್​ ಸಿಂಗ್​ ಎಂಬುವರು ಶೇರ್​ ಮಾಡಿಕೊಂಡಿದ್ದರು. ಈ ಫೋಟೋ ಮಾತನಾಡುತ್ತದೆ. ಆಸ್ಪತ್ರೆಯಲ್ಲಿ ರೂಂ ಇಲ್ಲ..ಹಾಗೇ ಮನಾಲಿಯ ಹೋಟೆಲ್​ಗಳಲ್ಲೂ ರೂಂ ಇಲ್ಲ ಎಂದು ಕ್ಯಾಪ್ಷನ್​ ಬರೆದಿದ್ದರು.

Amigosblink ಸ್ಟುಡಿಯೋದ ಫೇಸ್​ಬುಕ್​ ಪೇಜ್​ನ ಅಡ್ಮಿನಿಸ್ಟ್ರೇಟರ್ ಆಗಿರುವ ಅಜಯ್​ ಕುಮಾರ್​ ಅವರನ್ನು ಬೂಮ್​ ಸಂಪರ್ಕಿಸಿ ಈ ಬಗ್ಗೆ ಪ್ರಶ್ನೆ ಮಾಡಿದೆ. ಈ ಫೋಟೋವನ್ನು ತೆಗೆದಿದ್ದು 2020ರ ಡಿಸೆಂಬರ್​ನಲ್ಲಿ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಅದರ ಫೇಸ್​ಬುಕ್ ಪೇಜ್​​ನಲ್ಲಿ ಕಳೆದ ಡಿಸೆಂಬರ್​​ನಲ್ಲಿ ನೀಡಲಾದ ಲೈವ್​​ನಲ್ಲಿಯೂ ಈ ಸನ್ನಿವೇಶ ಕಂಡುಬಂದಿದೆ. ಹಾಗಾಗಿ ಇತ್ತೀಚೆಗೆ ತೆಗೆಯಲಾದ ಫೋಟೋ ಇದಲ್ಲ ಎಂದು ಆಲ್ಟ್​ ಮತ್ತು ಬೂಮ್​ ಮಾದ್ಯಮಗಳು ವರದಿ ಮಾಡಿವೆ.

ಆರು ತಿಂಗಳ ಹಿಂದೆಯೇ ವೈರಲ್​ ಆಗಿತ್ತು ಈ ಫೋಟೋ

ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್

ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ