ತಾಲೀಬಾನ್​ ಜೊತೆಗೆ ಮಾತುಕತೆ ಮುರಿದುಬಿದ್ದರೆ ಭಾರತದ ಸೇನಾ ಸಹಾಯ ಕೋರುತ್ತೇವೆ: ಅಫ್ಗನ್ ಸರ್ಕಾರ

ನಮಗೆ ಭಾರತ ಸೇನಾಪಡೆಯನ್ನು ಕಳಿಸಬೇಕಿಲ್ಲ. ತರಬೇತಿ ಮತ್ತು ತಾಂತ್ರಿಕ ಸಹಕಾರ ನೀಡಿದರೆ ಸಾಕು ಎಂದು ಅಫ್ಗನ್ ಸರ್ಕಾರದ ಚಿಂತನೆಯನ್ನು ಬಹಿರಂಗಪಡಿಸಿದ್ದಾರೆ.

ತಾಲೀಬಾನ್​ ಜೊತೆಗೆ ಮಾತುಕತೆ ಮುರಿದುಬಿದ್ದರೆ ಭಾರತದ ಸೇನಾ ಸಹಾಯ ಕೋರುತ್ತೇವೆ: ಅಫ್ಗನ್ ಸರ್ಕಾರ
ಅಫ್ಗನ್ ಸರ್ಕಾರ ಮತ್ತು ತಾಲೀಬಾನ್ ನಡುವಣ ಮಾತುಕತೆ ಫಲಪ್ರದವಾಗುವ ಸಾಧ್ಯತೆ ಕಡಿಮೆಯಾಗುತ್ತಿದೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 13, 2021 | 11:29 PM

ದೆಹಲಿ: ಅಮೆರಿಕದ ಸೇನಾಪಡೆಗಳು ಅಫ್ಗಾನಿಸ್ತಾನದಿಂದ ಹಿಂದೆ ಸರಿದ ನಂತರ ತಾಲೀಬಾನ್​ ಮತ್ತೆ ಪ್ರಬಲವಾಗಿದೆ. ತಾಲೀಬಾನ್​ ಜೊತೆಗೆ ಶಾಂತಿ ಮಾತುಕತೆ ನಡೆಸಲು ಅಫ್ಗನ್ ಸರ್ಕಾರ ಯತ್ನಿಸುತ್ತಿದೆ. ಒಂದು ವೇಳೆ ಶಾಂತಿ ಮಾತುಕತೆ ವಿಫಲವಾದರೆ ಭಾರತದ ಮಿಲಿಟರಿ ಸಹಾಯ ಯಾಚಿಸಬೇಕಾಗುತ್ತದೆ ಎಂದು ಅಫ್ಗಾನಿಸ್ತಾನ ಸರ್ಕಾರದ ಭಾರತದ ರಾಯಭಾರಿ ತಿಳಿಸಿದ್ದಾರೆ. ನಮಗೆ ಭಾರತ ಸೇನಾಪಡೆಯನ್ನು ಕಳಿಸಬೇಕಿಲ್ಲ. ತರಬೇತಿ ಮತ್ತು ತಾಂತ್ರಿಕ ಸಹಕಾರ ನೀಡಿದರೆ ಸಾಕು ಎಂದು ಅಫ್ಗನ್ ಸರ್ಕಾರದ ಚಿಂತನೆಯನ್ನು ಬಹಿರಂಗಪಡಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಸುಮಾರು 20 ವರ್ಷ ನೆಲೆ ನಿಂತಿದ್ದ ಅಮೆರಿಕ ಸೇನಾ ಪಡೆಗಳು ಸ್ವದೇಶಕ್ಕೆ ಮರಳು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ತಾಲೀಬಾನ್ ಅಲ್ಲೀಗ ಪ್ರಬಲವಾಗುತ್ತಿದೆ. ದೇಶದ ಹಲವು ಪ್ರದೇಶಗಳನ್ನು ತಾಲೀಬಾನ್ ಈಗಾಗಲೇ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ಮತ್ತೊಂದೆಡೆ ತಾಲೀಬಾನ್​ ಜೊತೆಗೆ ಅಫ್ಗನ್ ಸರ್ಕಾರ ಮಾತುಕತೆಯನ್ನೂ ನಡೆಸುತ್ತಿದೆ. ಈ ಸಂಕೀರ್ಣ ಸಂದರ್ಭದಲ್ಲಿ ಭಾರತದ ಸಹಾಯ ಯಾಚಿಸುವ ಕುರಿತು ಅಫ್ಗನ್ ರಾಯಭಾರಿ ತಮ್ಮ ಸರ್ಕಾರದ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದೋಹಾದಲ್ಲಿ ನಡೆಯುತ್ತಿವೆ ಎನ್ನಲಾದ ಶಾಂತಿಮಾತುಕತೆಗಳು ಬಹುಮಟ್ಟಿಗೆ ನಿರಾಶೆ ಮೂಡಿಸಿವೆ. ಅಫ್ಗನ್ ಸರ್ಕಾರದ ವಿರುದ್ಧ ತಾಲೀಬಾನ್ ಮಿಲಿಟರಿ ಜಯ ಘೋಷಿಸುವ ಸಿದ್ಧತೆಯಲ್ಲಿದೆ. ‘ತಾಲೀಬಾನ್​ನೊಂದಿಗಿನ ಮಾತುಕತೆಯಲ್ಲಿ ಪ್ರಗತಿ ಕಂಡುಬರದಿದ್ದರೆ ಭಾರತದ ಸೇನಾ ಸಹಾಯ ಕೇಳುವ ಪರಿಸ್ಥಿತಿ ಬರಬಹುದು ಎಂದು ಭಾರತದಲ್ಲಿರುವ ಅಫ್ಗನ್ ಸರ್ಕಾರದ ರಾಯಭಾರಿ ಫಾರಿದ್ ಮಮುಂಡ್ಜೆ ಹೇಳಿದ್ದಾರೆ. ನಾವು ಭಾರತದ ಸೇನಾಪಡೆಗಳನ್ನು ಅಫ್ಗನ್​ಗೆ ಕಳಿಸಬೇಕೆಂದು ಕೋರುವುದಿಲ್ಲ. ಅದು ಈ ಸಂದರ್ಭದಲ್ಲಿ ಅಗತ್ಯವೂ ಇಲ್ಲ. ನಮ್ಮ ಯುದ್ಧವನ್ನು ನಾವೇ ಹೋರಾಡುತ್ತೇವೆ. ಯುದ್ಧ ವಿಮಾನಗಳ ಪೈಲಟ್​ಗಳಿಗೆ ತರಬೇತಿ ನೀಡುವುದೂ ಸೇರಿದಂತೆ ಅಫ್ಗನ್ ಸೇನಾ ಸಿಬ್ಬಂದಿಗೆ ತಾಂತ್ರಿಕ ನೆರವು ಒದಗಿಸಲು ಭಾರತದ ನೆರವು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಮ್ಮ ಸೇನಾ ಸಿಬ್ಬಂದಿಗೆ ಭಾರತವು ಈಗಾಗಲೇ ಸೇನಾ ತರಬೇತಿ ಮತ್ತು ಸ್ಕಾಲರ್​ಶಿಪ್ ರೂಪದಲ್ಲಿ ನೆರವಾಗುತ್ತಿವೆ. ನಾಗರಿಕ ಸಹಕಾರ ರೂಪದಲ್ಲಿ ವರ್ಷಕ್ಕೆ 1000 ಅಫ್ಗನ್ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಓದುವ ಅವಕಾಶ ಸಿಗುತ್ತದೆ. ಭಾರತದಲ್ಲಿ ಈಗ ಸುಮಾರು 20 ಸಾವಿರ ಅಫ್ಗನ್ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅಫ್ಗಾನಿಸ್ತಾನದಲ್ಲಿ ಹೊಸ ಸಂಸತ್​ ಭವನ ಕಟ್ಟಡ ಮತ್ತು ಜಲಾಶಯಗಳ ನಿರ್ಮಾಣ ಭಾರತ ನೆರವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅಫ್ಗಾನಿಸ್ತಾನದ 376 ಜಿಲ್ಲೆಗಳ ಪೈಕಿ 150 ಜಿಲ್ಲೆಗಳಲ್ಲಿ ಸರ್ಕಾರಿ ಪಡೆಗಳು ತಾಲೀಬಾನ್ ವಿರುದ್ಧ ಹೋರಾಡುತ್ತಿವೆ. ದೇಶದ ಮೂರನೇ ಒಂದು ಭಾಗದಷ್ಟು ಪ್ರದೇಶದಲ್ಲಿ ಯುದ್ಧ ನಡೆಯುತ್ತಿದೆ. ಸುಮಾರು 2 ಲಕ್ಷ ಜನರು ದೇಶದೊಳಗೆ ನಿರಾಶ್ರಿತರಾಗಿದ್ದಾರೆ. ಸುಮಾರು 4000 ಮಂದಿ ಹತರಾಗಿದ್ದಾರೆ.

ಕಳೆದ ಕೆಲ ವಾರಗಳಿಂದ ದೇಶದ ಉತ್ತರ ಭಾಗದಲ್ಲಿ ಪರಿಸ್ಥಿತಿ ವಿಷಮಿಸಿದೆ. ಪ್ರಾಂತೀಯ ರಾಜಧಾನಿಗಳನ್ನು ಹೊರತುಪಡಿಸಿದರೆ ಸುತ್ತಮುತ್ತಲ ಬಹುತೇಕ ಪ್ರದೇಶಗಳ ಸ್ವಾಧೀನವನ್ನು ಸರ್ಕಾರ ಕಳೆದುಕೊಂಡಿವೆ. ಪ್ರಾಂತೀಯ ರಾಜಧಾನಿಗಳನ್ನು ಕಾಪಾಡಿಕೊಳ್ಳಲು ಭದ್ರತಾ ಸಿಬ್ಬಂದಿ ಮತ್ತು ಅಗತ್ಯ ಸಾಮಾನು ಸರಂಜಾಮುಗಳನ್ನು ವಾಯುಮಾರ್ಗದಲ್ಲಿ ತಲುಪಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ನಗರಗಳ ಒಳಗೆ ಸರ್ಕಾರಿ ಪಡೆಗಳೊಂದಿಗೆ ಯುದ್ಧ ಮಾಡಲು ನಮಗೆ ಇಷ್ಟವಿಲ್ಲ ಎಂದು ತಾಲೀಬಾನ್ ಹೇಳಿದೆ.

ಫರ್ಯಾಬ್ ಪ್ರಾಂತ್ಯದಲ್ಲಿ ಶರಣಾಗಿದ್ದ 22 ಸರ್ಕಾರಿ ಭದ್ರತಾ ಸಿಬ್ಬಂದಿಯನ್ನು ತಾಲೀಬಾನ್ ಉಗ್ರರು ಕೊಂದಿದ್ದಾರೆ. ಒಂದೆಡೆ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾಗಿರುವ ತಾಲೀಬಾನ್, ಮತ್ತೊಂದೆಡೆ ಹೀಗೆ ಹತ್ಯೆಗಳ ಸರಣಿ ಮುಂದುವರಿಸಿದೆ ಎಂದು ಅವರು ಅಲ್ಲಿನ ಪರಿಸ್ಥಿತಿ ವಿವರಿಸಿದರು.

(Afghanistan Ambassador in India Says his country May Seek India Military Assistance If Taliban Talks Fail)

ಇದನ್ನೂ ಓದಿ: ಅಫ್ಗನ್ ಅಶಾಂತಿ: ತಾಲೀಬಾನ್ ವಶಕ್ಕೆ ಕಂದಹಾರ್ ಜಿಲ್ಲೆ, ತಜಕಿಸ್ತಾನಕ್ಕೆ ಓಡಿಹೋದ ಅಫ್ಗಾನಿಸ್ತಾನದ ಸೇನಾಪಡೆ

ಇದನ್ನೂ ಓದಿ: ಅಫ್ಗಾನಿಸ್ತಾನ | ಮಕ್ಕಳನ್ನು ಗುರಿಯಾಗಿಸಿ ಬಾಂಬ್​ ದಾಳಿ; 11 ಚಿಣ್ಣರು ಬಲಿ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ

ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ