ರಾಜಸ್ಥಾನದಲ್ಲಿ 11 ಮಂದಿಯಲ್ಲಿ ಕಪ್ಪಾ ರೂಪಾಂತರಿ ವೈರಸ್​; ನಿರ್ಲಕ್ಷ್ಯ ಮಾಡುವ ವಿಚಾರವಲ್ಲವೆಂದ ಆರೋಗ್ಯ ಸಚಿವ

ಕಪ್ಪಾ ರೂಪಾಂತರಿ ವೈರಸ್​ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು 2020ರ ಅಕ್ಟೋಬರ್​​ನಲ್ಲಿ. ಇದು ಕೊರೊನಾದ ಎರಡು ಬಾರಿ ರೂಪಾಂತರಗೊಂಡ ತಳಿಯಾಗಿದೆ. ಡೆಲ್ಟಾದಷ್ಟು ಅಪಾಯಕಾರಿ ಅಲ್ಲದಿದ್ದರೂ ನಿರ್ಲಕ್ಷ್ಯ ಮಾಡುವಂಥದ್ದಲ್ಲ.

ರಾಜಸ್ಥಾನದಲ್ಲಿ 11 ಮಂದಿಯಲ್ಲಿ ಕಪ್ಪಾ ರೂಪಾಂತರಿ ವೈರಸ್​; ನಿರ್ಲಕ್ಷ್ಯ ಮಾಡುವ ವಿಚಾರವಲ್ಲವೆಂದ ಆರೋಗ್ಯ ಸಚಿವ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jul 14, 2021 | 8:59 AM

ಜೈಪುರ: ಕೊವಿಡ್-19 (Covid 19) ಸೋಂಕಿನ ಒಂದೊಂದೇ ರೂಪಾಂತರಿ ವೈರಸ್​ಗಳು ಹೊರಬರುತ್ತಲೇ ಇದ್ದು, ಆತಂಕ ಸೃಷ್ಟಿಸುತ್ತಿವೆ. ಕೊವಿಡ್​ 19 ರೂಪಾಂತರಿಗಳಲ್ಲಿ ಒಂದಾದ ಕಪ್ಪಾ ಹಾವಳಿ ಶುರುವಾಗಿದ್ದು, ರಾಜಸ್ಥಾನದಲ್ಲಿ 11 ಜನರಲ್ಲಿ ಈ ಕಪ್ಪಾ ವೈರಸ್​ (Kappa Variant) ಕಾಣಿಸಿಕೊಂಡಿದೆ. ಈ ವಿಚಾರವನ್ನು ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ.

11 ಜನರಲ್ಲಿ ಕಪ್ಪಾ ಸೋಂಕು ಕಾಣಿಸಿಕೊಂಡಿದೆ, ಅವರಲ್ಲಿ ಇಬ್ಬರು ಅಳ್ವಾರ್​ನವರು, ಇಬ್ಬರು ಜೈಪುರದವರು, ಇಬ್ಬರು ಬಾರ್ಮರ್​ ಮತ್ತು ಒಬ್ಬ ಭಿಲ್ವಾರಾದವರು ಎಂದು ರಘು ಶರ್ಮಾ ತಿಳಿಸಿದ್ದಾರೆ. ಈ ಹನ್ನೊಂದು ಮಂದಿಯಲ್ಲಿ 9 ಮಂದಿಯ ಮಾದರಿಯನ್ನು ದೆಹಲಿಯ ಐಜಿಐಬಿ ಪ್ರಯೋಗಾಲಯ ತಪಾಸಣೆ ಮಾಡಿ, ಕಪ್ಪಾ ಸೋಂಕು ತಗುಲಿದ್ದನ್ನು ದೃಢಪಡಿಸಿತ್ತು. ಹಾಗೇ ಇನ್ನಿಬ್ಬರ ಮಾದರಿಗಳನ್ನು ಜೈಪುರದ ಎಸ್​ಎಂಎಸ್​ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ. ಕಪ್ಪಾ ರೂಪಾಂತರಿ ವೈರಸ್​ ಡೆಲ್ಟಾಕ್ಕೆ ಹೋಲಿಸಿದರೆ ಸ್ವಲ್ಪ ಸೌಮ್ಯವಾಗಿದೆ. ಆದರೆ ನಿರ್ಲಕ್ಷಿಸುವಂತಿಲ್ಲ. ಸಾರ್ವಜನಿಕರು ಕೊವಿಡ್​ 19 ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ರಘು ಶರ್ಮಾ ಹೇಳಿದ್ದಾರೆ.

ಕಪ್ಪಾ ರೂಪಾಂತರಿ ವೈರಸ್​ ಭಾರತದಲ್ಲಿ ಮೊದಲು ಪತ್ತೆಯಾಗಿದ್ದು 2020ರ ಅಕ್ಟೋಬರ್​​ನಲ್ಲಿ. ಇದು ಕೊರೊನಾದ ಎರಡು ಬಾರಿ ರೂಪಾಂತರಗೊಂಡ ತಳಿಯಾಗಿದೆ. ಡೆಲ್ಟಾದಷ್ಟು ಅಪಾಯಕಾರಿ ಅಲ್ಲದಿದ್ದರೂ ನಿರ್ಲಕ್ಷ್ಯ ಮಾಡುವಂಥದ್ದಲ್ಲ. ಲಸಿಕೆ ತೆಗೆದುಕೊಂಡವರಿಗೆ ಇದು ಅಷ್ಟಾಗಿ ಬಾಧಿಸಲಾರದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾಜಸ್ಥಾನದಲ್ಲಿ 107 ಮಂದಿಯಲ್ಲಿ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್ ಪತ್ತೆಯಾಗಿದೆ.

ಇದನ್ನೂ ಓದಿ: Safe Driving Tips: ಮಳೆಗಾಲದಲ್ಲಿ ವಾಹನ ಚಲಾಯಿಸುವುದು ಅಷ್ಟು ಸುಲಭವಲ್ಲ; ಸಂಚರಿಸುವಾಗ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

(Rajasthan Records 11 Cases Of Kappa Variant)