Safe Driving Tips: ಮಳೆಗಾಲದಲ್ಲಿ ವಾಹನ ಚಲಾಯಿಸುವುದು ಅಷ್ಟು ಸುಲಭವಲ್ಲ; ಸಂಚರಿಸುವಾಗ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ

ರಸ್ತೆಗಳಲ್ಲಿ ವಾಹನದ ಟೈರ್‌ಗಳು ಜಾರುವ ಸಾಧ್ಯತೆ ಇದ್ದು, ಬ್ರೇಕ್‌ ಹಾಕಿದರು ಬೈಕ್‌ ಮತ್ತು ಕಾರು ಕೆಲವು ಸಂದರ್ಭಗಳಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಸಂಚರಿಸುವ ಮುನ್ನ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯ.

Safe Driving Tips: ಮಳೆಗಾಲದಲ್ಲಿ ವಾಹನ ಚಲಾಯಿಸುವುದು ಅಷ್ಟು ಸುಲಭವಲ್ಲ; ಸಂಚರಿಸುವಾಗ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on:Jul 14, 2021 | 8:49 AM

ಕರ್ನಾಟಕದ ಮಲೆನಾಡು, ಕರಾವಳಿ ಸೇರಿದಂತೆ ಕೆಲ ಭಾಗಗಳಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಜತೆಗೆ ಅನೇಕ ಕಡೆಗಳಲ್ಲಿ ರಸ್ತೆಗಳು, ಗುಡ್ಡ ಕುಸಿತ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ನಾವು ಸಂಚರಿಸುವಾಗ ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಅದರಲ್ಲೂ ವೇಗವಾಗಿ ವಾಹನ ಚಲಾಯಿಸುವ ಅಭ್ಯಾಸ ಇರುವವರು, ಈಗತಾನೆ ಡ್ರೈವಿಂಗ್ (Driving) ಕಲಿತವರು ಹೆಚ್ಚು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಮಳೆಗಾಲದಲ್ಲಿ ಓಡಾಡುವುದನ್ನೇ ನಿಲ್ಲಿಸಬೇಕು ಎನ್ನುವುದು ಇದರ ಅರ್ಥ ಅಲ್ಲ. ಬದಲಾಗಿ ಜೋರಾಗಿ ಬರುವ ಮಳೆಯ ನಡುವೆ ಎಚ್ಚರಿಕೆಯಿಂದ ಸಂಚರಿಸುವುದು ಸೂಕ್ತ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ಮಳೆಗಾಲದಲ್ಲಿ(Monsoon) ರಸ್ತೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ರಸ್ತೆಗಳ ಗುಂಡಿ, ಪ್ರವಾಹ, ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗುತ್ತದೆ. ಇನ್ನು ರಸ್ತೆಗಳಲ್ಲಿ ವಾಹನದ ಟೈರ್‌ಗಳು ಜಾರುವ ಸಾಧ್ಯತೆ ಇದ್ದು, ಬ್ರೇಕ್‌ ಹಾಕಿದರು ಬೈಕ್‌ ಮತ್ತು ಕಾರು ಕೆಲವು ಸಂದರ್ಭಗಳಲ್ಲಿ ನಿಲ್ಲುವುದಿಲ್ಲ. ಹೀಗಾಗಿ ಮಳೆಗಾಲದಲ್ಲಿ ಸಂಚರಿಸುವ ಮುನ್ನ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅಗತ್ಯ.

1. ವೇಗವಾಗಿ ಸಂಚರಿಸುವುದನ್ನು ಬಿಟ್ಟು ಬಿಡಿ ವೇಗವಾಗಿ ಸಂಚರಿಸುವುದು ಮಳೆಗಾಲದಲ್ಲಿ ಮಾತ್ರವಲ್ಲ ಯಾವಾಗಲೂ ಒಳ್ಳೆಯದಲ್ಲ. ಅದರಲ್ಲೂ ಮಳೆಗಾಲದಲ್ಲಿ ರಸ್ತೆಗಳು ಜಲಾವೃತವಾಗಿದ್ದಾಗ ಎಲ್ಲಿ ಗುಂಡಿಗಳಿದೆ ಅಥವಾ ಎಲ್ಲಿ ಮ್ಯಾನ್​ ಹೋಲ್​ಗಳಿದೆ ಎಂದು ತಿಳಿಯುವುದಿಲ್ಲ. ಈ ಸಂದರ್ಭದಲ್ಲಿ ವೇಗವಾಗಿ ವಾಹನ ಚಲಾಯಿಸಿದರೆ, ಅಪಘಾತ ಸಂಭವಿಸಬಹುದು. ಅಲ್ಲದೆ ರಸ್ತೆಯಲ್ಲಿ ಟೈರ್‌ಗಳು ಸ್ಕಿಡ್ ಆಗುವ ಅಥವಾ ಜಾರುವ ಸಾಧ್ಯತೆಯೂ ಇದೆ. ಆದ್ದರಿಂದ ಮಳೆಗಾಲದಲ್ಲಿ ಅತಿಯಾದ ವೇಗ ಒಳ್ಳೆಯದಲ್ಲ.

2. ವಾಹನಗಳ ನಡುವಿನ ಅಂತರದ ಬಗ್ಗೆ ಗಮನಹರಿಸಿ ರಸ್ತೆಯಲ್ಲಿ ಪ್ರಯಾಣಿಸುವಾಗ, ಮುಂದೆ ಇರುವ ವಾಹನಗಳ ನಡುವಿನ ಅಂತರವನ್ನು ಗಮನಿಸಬೇಕು. ಅದರಲ್ಲೂ ಮಳೆ ಬರುವಾಗ ತೀತ ಹತ್ತಿರಕ್ಕೆ ಸಾಗುವುದು ಒಳ್ಳೆಯದಲ್ಲ. ಕಾರಣ ಮಳೆ ಜೋರಾಗಿದ್ದಾಗ ಬ್ರೇಕ್​ ಸರಿಯಾಗಿ ಕೆಲಸ ಮಾಡದೆ ಇರಬಹುದು. ಹೀಗಾಗಿ ಅಂತರ ಕಾಯ್ದುಕೊಳ್ಳುವುದು ಮುಂದಾಗುವ ಅನಾಹುತದಿಂದ ರಕ್ಷಿಸುತ್ತದೆ.

3. ವೈಪರ್ ಸರಿಯಾಗಿ ಬಳಸಿ ಮಳೆಗಾಲದಲ್ಲಿ ವಾಹನಗಳ ವಿಂಡ್‌ಸ್ಕ್ರೀನ್ ಮೇಲೆ ಬೀಳುವ ನೀರನ್ನು ಆಗಾಗೆ ತೆಗೆಯಬೇಕು. ಇಲ್ಲವಾದಲ್ಲಿ ಮುಂದಿನ ರಸ್ತೆ ಮಂಜಾಗಿ ಕಾಣುವುದು ಅಥವಾ ಸರಿಯಾಗಿ ರಸ್ತೆ ಗೋಚರಿಸದಿರುವ ಸಾಧ್ಯತೆ ಇದೆ. ಹೀಗಾಗಿ ಗ್ಲಾಸ್​ನ ಮೇಲೆ ಬೀಳುವ ನೀರನ್ನು ಆಗಾಗೆ ತೆಗೆಯಿರಿ. ಮುಖ್ಯವಾಗಿ ವೈಪರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲಿಸಿ.

4. ಬೆಳಕಿನ ಬಗ್ಗೆ ಗಮನ ಹರಿಸಿ ಮಳೆಗಾಲದಲ್ಲಿ ಬೇಗನೆ ಕತ್ತಲೆಯಾಗುತ್ತದೆ. ಆದ್ದರಿಂದ ವಾಹನದ ಬೆಳಕಿನ ಬಗ್ಗೆ ಗಮನಹರಿಸಿ. ಇದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪ್ರಯಾಣಿಸುವ ಮುನ್ನ ಪರಿಶೀಲಿಸುವುದು ಸೂಕ್ತ. ವಾಹನದಲ್ಲಿನ ಬಲ್ಬ್​ ಹಾಳಾದಾಗ ಅಪಘಾತವಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ವಾಹನದ ಸ್ಥಿತಿಯನ್ನು ಪರಿಶೀಲಿಸಬೇಕು.

ಹೈದರಾಬಾದ್ ಪೊಲೀಸರು ಮಳೆಗಾಲದಲ್ಲಿ ವಾಹನ ಚಾಲಕರಿಗೆ ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಮಳೆಯಿಂದಾಗಿ ವಾಹನಗಳು ಅಪಘಾತದಲ್ಲಿ ಸಿಲುಕುವ ವಿಡಿಯೋವನ್ನು ಸೈಬರಾಬಾದ್ ಟ್ರಾಫಿಕ್ ಪೊಲೀಸರು ಇತ್ತೀಚೆಗೆ ಟ್ವೀಟ್ ಮಾಡಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ

Health Tips: ನಾಲಿಗೆಯ ಮೇಲಿನ ಈ ಲಕ್ಷಣಗಳು, ದೇಹದ ಆರೋಗ್ಯ ಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ನೀಡುತ್ತವೆ

Published On - 8:40 am, Wed, 14 July 21