Pathrode: ಮಳೆಗಾಲದಲ್ಲಿ ಪತ್ರೊಡೆ ಮಾಡಿ ಸವಿಯಿರಿ; ಮಾಡುವ ವಿಧಾನ ಇಲ್ಲಿದೆ
Pathrode Recipe: ಬಹುತೇಕರಿಗೆ ಪತ್ರೊಡೆ ಬಗ್ಗೆ ಗೊತ್ತಿಲ್ಲ. ಸಾಮಾನ್ಯವಾಗಿ ನಗರ ವಾಸಿಗಳಿಗೆ ಇದರ ರುಚಿ ಇನ್ನು ತಿಳಿದಿಲ್ಲ. ಒಮ್ಮೆ ಇದನ್ನು ತಿಂದರೆ ಯಾವಾಗಲು ತಿನ್ನಬೇಕು ಅಂತ ಅನಿಸದೆ ಇರದು. ಇತ್ತೀಚೆಗೆ ಪತ್ರೊಡೆ ಮಾಡುವ ಕೆಸುವಿನ ಎಲೆ ನಗರದಲ್ಲೂ ಸಿಗುತ್ತದೆ. ಮಾಡುವ ವಿಧಾನ ಗೊತ್ತಿಲ್ಲ ಅಂತ ಸುಮ್ಮನಾಗುತ್ತಾರೆ.
ಮಳೆಗಾಲ ಬಂದಾಗ ನೆನಪಾಗುವ ತಿಂಡಿ ಎಂದರೆ ಅದು ಪತ್ರೊಡೆ. ಹೊರಗಡೆ ಮಳೆ ಸುರಿಯುವಾಗ ಬಿಸಿ ಬಿಸಿ ಪತ್ರೊಡೆ (Pathrode) ತಿನ್ನುವುದೇ ಒಂದು ರೀತಿಯ ಮಜಾ. ಪತ್ರೊಡೆಯನ್ನು ತಯಾರಿಸುವುದು ಸ್ವಲ್ಪ ಕಷ್ಟವಾದರೂ, ಬಹಳ ರುಚಿಯಿರುವ ಕಾರಣ ಬಹುತೇಕರು ಇದನ್ನು ಮನೆಯಲ್ಲಿ ಸಿದ್ಧಪಡಿಸುತ್ತಾರೆ. ಕೆಸುವಿನ ಎಲೆಯಿಂದ ಈ ತಿಂಡಿಯನ್ನು ರೆಡಿ ಮಾಡಲಾಗುತ್ತದೆ. ಮಲೆನಾಡು, ಕರಾವಳಿಯಲ್ಲಿ ವರ್ಷಕ್ಕೆ ಒಮ್ಮೆಯಾದರೂ ಈ ತಿಂಡಿಯನ್ನು ಮಾಡುತ್ತಾರೆ. ಮಾನ್ಸೂನ್ ವೇಳೆ ಪತ್ರೊಡೆ ಮಾಡುವ ಕೆಸುವಿನ ಎಲೆ ಹೆಚ್ಚು ಸಿಗುವುದರಿಂದ ಮಳೆಗಾಲ ಬಂದಾಗ ಈ ತಿಂಡಿ ನೆನಪಾಗುತ್ತೆ.
ಬಹುತೇಕರಿಗೆ ಪತ್ರೊಡೆ ಬಗ್ಗೆ ಗೊತ್ತಿಲ್ಲ. ಸಾಮಾನ್ಯವಾಗಿ ನಗರ ವಾಸಿಗಳಿಗೆ ಇದರ ರುಚಿ ಇನ್ನು ತಿಳಿದಿಲ್ಲ. ಒಮ್ಮೆ ಇದನ್ನು ತಿಂದರೆ ಯಾವಾಗಲು ತಿನ್ನಬೇಕು ಅಂತ ಅನಿಸದೆ ಇರದು. ಇತ್ತೀಚೆಗೆ ಪತ್ರೊಡೆ ಮಾಡುವ ಕೆಸುವಿನ ಎಲೆ ನಗರದಲ್ಲೂ ಸಿಗುತ್ತದೆ. ಮಾಡುವ ವಿಧಾನ ಗೊತ್ತಿಲ್ಲ ಅಂತ ಸುಮ್ಮನಾಗುತ್ತಾರೆ. ಆದರೆ ಚಿಂತೆ ಇದೀಗ ಬೇಡ.. ನಾವು ಹೇಳಿದ ಸಾಮಾಗ್ರಿಗಳನ್ನು ಬಳಸಿ ನೀವೂ ಕೂಡಾ ರುಚಿ ರುಚಿಯಾದ ಪತ್ರೊಡೆಯನ್ನು ಮಾಡಿ.
ಪತ್ರೊಡೆಗೆ ಬೇಕಾಗುವ ಸಾಮಾಗ್ರಿಗಳು ಕೆಸುವಿನ ಎಲೆ ( 30 ರಿಂದ 35) ಒಂದು ಕಪ್ ಅಕ್ಕಿ ಮುಕ್ಕಾಲು ಕಪ್ ತೊಗರಿಬೇಳೆ ಅರ್ಧ ಕಪ್ ಕಡಲೆಬೇಳೆ ಒಣಮೆಣಸು ( 20 ಬೇಕಾಗುತ್ತದೆ) ಸ್ವಲ್ಪ ಹುಣಸೆ ಹಣ್ಣು ಒಣಮೆಣಸು (20 ಬೇಕಾಗುತ್ತದೆ) ಒಂದು ಚಮಚ ಜೀರಿಗೆ ಕೊತ್ತಂಬರಿ ಕಾಳು ಮೂರು ಚಮಚ ಒಂದು ಚಮಚ ಜೀರಿಗೆ ಇಂಗು( ಒಂದು ಚಿಟಕಿ) ಸ್ವಲ್ಪ ಬೆಲ್ಲ (ಅರ್ಧ ಉಂಡೆಗಿಂತ ಕಡಿಮೆ)
ಪತ್ರೊಡೆ ಮಾಡುವ ವಿಧಾನ ಮೊದಲು ಅಕ್ಕಿ, ತೊಗರಿಬೇಳೆ, ಕಡಲೆಬೇಳೆ, ಜೀರಿಗೆ ಮತ್ತು ಕೊತ್ತಂಬರಿಯನ್ನು ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ ನೆನಸಿಡಿ. ಇದು ಮೂರು ಗಂಟೆ ನೆನೆಯಬೇಕು. ನೀರಿನಲ್ಲಿ ನೆನದ ಬಳಿಕ ಇದನ್ನು ಚೆನ್ನಾಗಿ ರುಬ್ಬಬೇಕು. ರುಬ್ಬಿದ ಹಿಟ್ಟು ದಪ್ಪವಾಗಿರಬೇಕು (ದೋಸೆ ಹಿಟ್ಟಿನಂತಿರಬೇಕು). ನಂತರ 10 ನಿಮಿಷ ನೀರಿನಲ್ಲಿ ನೆನೆಸಿದ ಹುಣಸೆಹಣ್ಣು, ಒಣಮೆಣಸು ಮತ್ತು ಬೆಲ್ಲವನ್ನು ರುಬ್ಬಿ.
ರುಬ್ಬಿದ ಹಿಟ್ಟಿಗೆ ಹುಣಸೆಹಣ್ಣು, ಒಣಮೆಣಸು ಮತ್ತು ಬೆಲ್ಲದ ಪೇಸ್ಟ್ನ ಹಾಕಿ ಚೆನ್ನಾಗಿ ಮಿಶ್ರಣಗೊಳಿಸಿ. ಇದಕ್ಕೆ ಉಪ್ಪು ಮತ್ತು ಇಂಗನ್ನು ಸೇರಿಸಿ ಚೆನ್ನಾಗಿ ಕಲಸಿ.
ತೊಳೆದ ಎಲೆಗಳನ್ನು ಒಂದೊಂದಾಗಿ ತೆಗೆದುಕೊಂಡು ಎರಡು ಕಡೆ (ಎಲೆಯ ಮುಂಭಾಗ ಮತ್ತು ಹಿಂಭಾಗ) ಸಿದ್ಧವಾಗಿರುವ ಮಿಶ್ರಣವನ್ನು ಹಚ್ಚಿ. ಮೊದಲು ಹೀಗೆ 5 ರಿಂದ 6 ಎಲೆಗಳಿಗೆ ಹಚ್ಚಿ. ಹಚ್ಚಿದ ದೊಡ್ಡ ಎಲೆಯ ಮೇಲೆ ಒಂದೊಂದಾಗಿ ಸಣ್ಣ ಎಲೆಗಳನ್ನು ಇಟ್ಟು, ರೋಲ್ ರೀತಿ ಸುತ್ತಿ. ಸುತ್ತಿದ ಬಳಿಕ ಆ ರೋಲ್ಗೆ ಮತ್ತೆ ಸ್ವಲ್ಪ ಹಿಣ್ಣಿನ ಮಿಶ್ರಣವನ್ನು ಹಚ್ಚಿ. ಹೀಗೆ ಎಲ್ಲ ಎಲೆಗಳಿಗೂ ಹಿಟ್ಟನ್ನು ಹಚ್ಚಿ ರೋಲ್ ರೀತಿ ಮಾಡಿ.
ಎಲ್ಲಾ ಎಲೆಗಳ ಮೇಲೆ ಹಿಟ್ಟನ್ನು ಹಚ್ಚಿ, ರೋಲ್ ಮಾಡಿದ ನಂತರ ಇಡ್ಲಿ ಬೇಯಿಸುವಂತೆ ರೋಲ್ಗಳನ್ನ ಹಬೆಯಲ್ಲಿ ಬೇಯಿಸಬೇಕು. ಇದು ಬೇಯಲು ಅರ್ಧ ಗಂಟೆ ಬೇಕಾಗುತ್ತದೆ. ಬೆಂದ ನಂತರ ತಣ್ಣಗಾಗಲು ಬಿಡಿ. ಒಂದು ಚಾಕುವಿನಿಂದ ರೋಲ್ನ ತೆಳುವಾಗಿ ಕಟ್ ಮಾಡಿ. ಕಟ್ ಮಾಡಿದ ಪೀಸ್ಗಳನ್ನ ತವಾದಲ್ಲಿ ಎಣ್ಣೆ ಹಾಕಿ ಕರಿದರೆ ಪತ್ರೊಡೆ ಸವಿಯಲು ಸಿದ್ಧ.
ಇದನ್ನೂ ಓದಿ
Health Tips: ಎಲ್ಲರಿಗೂ ಇಷ್ಟವಾಗುವ ಜೋಳದಲ್ಲಿದೆ ಹೆಚ್ಚು ಪ್ರಯೋಜನಗಳು
Health Tips: ಕಾಂಟ್ಯಾಕ್ಟ್ ಲೆನ್ಸ್ ಧರಿಸುವ ಅಭ್ಯಾಸ ಇದ್ದರೆ, ಕಣ್ಣಿಗಾಗುವ ಅಪಾಯದ ಬಗ್ಗೆ ಗಮನಹರಿಸಿ
(How to make Pathrode in simple at home)