Health Tips: ಎಲ್ಲರಿಗೂ ಇಷ್ಟವಾಗುವ ಜೋಳದಲ್ಲಿದೆ ಹೆಚ್ಚು ಪ್ರಯೋಜನಗಳು

ಹೆಚ್ಚು ರುಚಿ ಹೊಂದಿರುವ ಜೋಳವನ್ನು ತಿನ್ನಲು ಎಲ್ಲರಿಗೂ ಇಷ್ಟವಾಗುತ್ತೆ. ಹೆಚ್ಚು ಪೋಷಕಾಂಶ ಹೊಂದಿರುವ ಜೋಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೇವಲ ಮಳೆಗಾಲ ಮಾತ್ರವಲ್ಲ ಬೇರೆ ಸಮಯದಲ್ಲೂ ತಿನ್ನಬಹುದು.

Health Tips: ಎಲ್ಲರಿಗೂ ಇಷ್ಟವಾಗುವ ಜೋಳದಲ್ಲಿದೆ ಹೆಚ್ಚು ಪ್ರಯೋಜನಗಳು
ಜೋಳ
Follow us
TV9 Web
| Updated By: sandhya thejappa

Updated on: Jul 13, 2021 | 9:13 AM

ಮಳೆಗಾಲ ಶುರುವಾಗಿದೆ. ಬಿಸಿ ಬಿಸಿ ಏನಾದರೂ ತಿನ್ನಬೇಕು ಅಂತ ಅನಿಸುತ್ತೆ. ಹೀಗಾಗಿ ಜೋಳವನ್ನು ಬೇಯಿಸಿ ತಿನ್ನಬಹುದು. ಹೆಚ್ಚು ರುಚಿ ಹೊಂದಿರುವ ಜೋಳವನ್ನು ತಿನ್ನಲು ಎಲ್ಲರಿಗೂ ಇಷ್ಟವಾಗುತ್ತೆ. ಹೆಚ್ಚು ಪೋಷಕಾಂಶ ಹೊಂದಿರುವ ಜೋಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೇವಲ ಮಳೆಗಾಲ ಮಾತ್ರವಲ್ಲ ಬೇರೆ ಸಮಯದಲ್ಲೂ ತಿನ್ನಬಹುದು. ಮಳೆಗಾಲದಲ್ಲಿ ಮಳೆಯೊಂದಿಗೆ ಬಿಸಿ ಬಿಸಿ ಜೋಳ ತಿಂದರೆ ಒಂದು ರೀತಿ ಖುಷಿ ಸಿಗುತ್ತದೆ. ಹೆಚ್ಚು ಪೋಷಕಾಂಶದಿಂದ ಕೂಡಿರುವ ಜೋಳ ಎಷ್ಟು ಪ್ರಯೋಜನಕ ಎಂದು ನೀವೇ ನೋಡಿ.

ಜೀವಸತ್ವಗಳು ಸಮೃದ್ಧವಾಗಿವೆ ಜೋಳದಲ್ಲಿ ಜೀವಸತ್ವಗಳು ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಜೊತೆಗೆ ಇದು ವಿಟಮಿನ್ ಬಿಯನ್ನು ಹೊಂದಿದೆ. ಇದರಿಂದ ದೈಹಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಹೊಲಗಳಲ್ಲಿ ಕೆಲಸ ಮಾಡುವವರು ಜೋಳವನ್ನು ತಿಂದರೆ ಕೆಲಸ ಮಾಡಲು ದೈಹಿಕ ಶಕ್ತಿ ವೃದ್ಧಿಯಾಗುತ್ತದೆ. ಮೂಳೆಗಳನ್ನು ಬಲಿಷ್ಠಗೊಳಿಸುವ ಜೊತೆಗೆ ಕೂದಲಿನ ಆರೋಗ್ಯವನ್ನು ಇದು ಕಾಪಾಡುತ್ತದೆ. ಕೊರೊನಾ ಈ ಕಾಲದಲ್ಲಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ವಿಟಮಿನ್ ಎ ಅನ್ನು ಹೊಂದಿರುವ ಜೋಳವನ್ನು ತಿನ್ನಬೇಕು.

ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಜೋಳ ತಿನ್ನುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಕೊಲೆಸ್ಟ್ರಾಲ್​ನಿಂದ ಮುಕ್ತಿ ಪಡೆಯಲು ಹೆಚ್ಚು ಹೆಚ್ಚು ಜೋಳವನ್ನು ತಿನ್ನಬೇಕು. ಸಕ್ಕರೆ ಕಾಯಿಲೆ ಇರುವರಿಗೆ ಜೋಳ ಇನ್ನಲು ವೈದ್ಯರು ಸೂಚಿಸಿತ್ತಾರೆ. ವಿಟಮಿನ್ ಬಿ1 , ವಿಟಮಿನ್ ಬಿ5 ಮತ್ತು ವಿಟಮಿನ್ ಸಿ ಅಂಶಗಳು ಇದರಲ್ಲಿ ಇರುವುದರಿಂದ ರೋಗದ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ತೂಕ ಇಳಿಸಲು ಸಹಾಯಕ ಹಸಿವಾದಾಗೆಲ್ಲ ಮೂರು ಹೊತ್ತಿನ ಊಟ ಹೊರತು ಪಡಿಸಿ ಮಧ್ಯ ಮಧ್ಯ ಏನಾದರೂ ತಿನ್ನುತ್ತಾರೆ. ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಆದರೆ ಜೋಳ ತಿನ್ನುವುದರಿಂದ ಬೇಗ ಹಸಿವಾಗಲ್ಲ. ಹೀಗಾಗಿ ಮಧ್ಯೆ ಬೇರೆ ಆಹಾರವನ್ನು ತಿನ್ನುವ ಅನಿವಾರ್ಯತೆ ಇರಲ್ಲ. ಗುಣಮಟ್ಟವಲ್ಲದ ಆಹಾರವನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವುದು ಸಹಜ. ಅದರ ಬದಲಿಗೆ ಜೋಳವನ್ನು ತಿಂದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಗರ್ಭಿಣಿಯರಿಗೆ ಪ್ರಯೋಜನಕಾರಿ ಗರ್ಭಿಣಿಯರು ತಾವು ತಿನ್ನುವ ಆಹಾರಕ್ಕೆ ಜೋಳವನ್ನು ಸೇರಿಸಿಕೊಳ್ಳಬಹುದು. ಇದು ತಾಯಿ ಮತ್ತು ಮಗುವಿಗೆ ಆರೋಗ್ಯ ಕಾಪಾಡುತ್ತದೆ. ಜೋಳ ಫೋಲಿಕ್ ಆಮ್ಲವನ್ನು ಹೊಂದಿರುತ್ತದೆ. ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ದೂರ ಮಾಡಲು ಜೋಳವನ್ನು ಸೇವಿಸಬೇಕು.

ಇದನ್ನೂ ಓದಿ

Health Tips: ಹಲ್ಲುಜ್ಜುವಾಗ ನೀವು ಮಾಡುವ ಈ ತಪ್ಪುಗಳು ನಿಮ್ಮನ್ನು ಅಪಾಯಕ್ಕೆ ಸಿಲುಕುವಂತೆ ಮಾಡುತ್ತದೆ; ಆರೋಗ್ಯದ ಬಗ್ಗೆ ಕಾಳಜಿ ಇರಲಿ

Health Benefits: ಕಟಿ ಚಕ್ರಾಸನ ಮಾಡುವುದು ಹೇಗೆ? ಹೊಟ್ಟೆಯಲ್ಲಿನ ಕೊಬ್ಬು ಕರಗಿಸಲು 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ

(Benefits of Corn for good health)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ