Health Benefits: ಕಟಿ ಚಕ್ರಾಸನ ಮಾಡುವುದು ಹೇಗೆ? ಹೊಟ್ಟೆಯಲ್ಲಿನ ಕೊಬ್ಬು ಕರಗಿಸಲು 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ

ಯೋಗಾಸನದಲ್ಲಿ ಹಲವು ಭಂಗಿಗಳಿವೆ. ಅದರಲ್ಲಿ ಕಟಿ ಚಕ್ರಾಸನ ಕೂಡ ಒಂದು. ಕಟಿ ಎಂದರೆ ಸೊಂಟ. ಚಕ್ರಾಸನ ಎಂದರೆ ಸೊಂಟವನ್ನು ತಿರುಗುವ ಆಸನ ಎಂದು ಕರೆಯಲಾಗುತ್ತದೆ. ಈ ಭಂಗಿಯು ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಯೋಗಾಸನವನ್ನು ಮಾಡುವುದು ತುಂಬಾ ಮುಖ್ಯ.

Health Benefits: ಕಟಿ ಚಕ್ರಾಸನ ಮಾಡುವುದು ಹೇಗೆ? ಹೊಟ್ಟೆಯಲ್ಲಿನ ಕೊಬ್ಬು ಕರಗಿಸಲು 15 ನಿಮಿಷಗಳ ಕಾಲ ಈ ಯೋಗಾಸನ ಮಾಡಿ
ಪ್ರಾತಿನಿಧಿಕ ಚಿತ್ರ
Follow us
| Updated By: preethi shettigar

Updated on: Jul 13, 2021 | 8:19 AM

ಕೊರೊನಾ ಪ್ರಾರಂಭವಾದ ದಿನದಿಂದಲೂ ಬಹುತೇಕ ಎಲ್ಲಾ ಕಂಪನಿಗಳು ವರ್ಕ್​ ಫ್ರಮ್​ ಹೋಮ್​ ನೀಡಿವೆ. ಇದರಿಂದಾಗಿ ದಿನದಲ್ಲಿ ಹೆಚ್ಚಿನ ಸಮಯವನ್ನು ಲ್ಯಾಪ್​ಟಾಪ್​ ಮುಂದೆಯೇ ಕಳೆಯುವಂತಾಗಿದೆ. ಹೊರಗಿನ ಪ್ರಪಂಚದ ಅರಿವಿರದಂತೆ ವರ್ತಿಸುವುದು, ಕೆಲಸದ ಒತ್ತಡ, ಖಿನ್ನತೆ, ಮಲಗುವ ಸಮಯದಲ್ಲಿನ ಬದಲಾವಣೆ, ಮಾನಸಿಕವಾಗಿ ಹೆಚ್ಚು ನೋವಿಗೀಡಾಗುವುದು ಸಾಮಾನ್ಯವಾಗಿದೆ. ಇನ್ನು ಕೊವಿಡ್​ ಸೋಂಕು ಹರಡುವ ಭಯಕ್ಕೆ ಕೆಲವರು ಹೊರ ಹೋಗುವುದನ್ನೇ ನಿಲ್ಲಿಸಿದ್ದಾರೆ. ಈ ರೀತಿಯ ಜೀವನಶೈಲಿಯಲ್ಲಿನ ಬದಲಾವಣೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಪ್ರತಿದಿನ ಕನಿಷ್ಠ 15 ನಿಮಿಷಗಳ ಕಾಲ ನಿಯಮಿತವಾಗಿ ಯೋಗಾಸನ ಮಾಡಿ. ಯೋಗಾಸನವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಡರಾಗಿರುವಂತೆ ಮಾಡುತ್ತದೆ. ಅಲ್ಲದೆ ಅನಾರೋಗ್ಯ ಮತ್ತು ಚಿಂತೆಗಳು ನಮ್ಮನ್ನು ಕಾಡುವುದರಿಂದ ಮುಕ್ತಿ ನೀಡುತ್ತದೆ. ಬೊಜ್ಜು ಮತ್ತು ಸಂಧಿವಾತವು ಕೂಡ ಯೋಗಾಸನದಿಂದ ದೂರವಾಗುತ್ತದೆ.

ಯೋಗಾಸನದಲ್ಲಿ ಹಲವು ಭಂಗಿಗಳಿವೆ. ಅದರಲ್ಲಿ ಕಟಿ ಚಕ್ರಾಸನ ಕೂಡ ಒಂದು. ಕಟಿ ಎಂದರೆ ಸೊಂಟ. ಚಕ್ರಾಸನ ಎಂದರೆ ಸೊಂಟವನ್ನು ತಿರುಗುವ ಆಸನ ಎಂದು ಕರೆಯಲಾಗುತ್ತದೆ. ಈ ಭಂಗಿಯು ದೇಹಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಯೋಗಾಸನವನ್ನು ಮಾಡುವುದು ತುಂಬಾ ಮುಖ್ಯ.

ಕಟಿ ಚಕ್ರಾಸನ ಮಾಡುವುದು ಹೇಗೆ? ಮೊದಲು ಎರಡು ಪಾದಗಳನ್ನು ಒಟ್ಟಿಗೆ ತಂದು ನೇರವಾಗಿ ನಿಂತುಕೊಳ್ಳಿ. ನಂತರ ಎರಡು ಪಾದಗಳನ್ನು ಒಂದೂವರೆ ಅಡಿ ಅಂತರದಲ್ಲಿ ಇರಿಸಿಕೊಳ್ಳಿ. ಬಳಿಕ ಎರಡೂ ತೋಳುಗಳನ್ನು ಮುಂದಕ್ಕೆ ಚಾಚಿ, ಕೈಗಳನ್ನು ಪರಸ್ಪರ ಸಮಾನಾಂತರವಾಗಿ ಇಡಬೇಕು. ನಂತರ ದೀರ್ಘವಾಗಿ ಉಸಿರಾಡಬೇಕು (ಗಾಳಿಯನ್ನು ಒಳಗೆ ತೆಗೆದುಕೊಂಡು ಹೊರ ಬಿಡಿ) ಬಳಿಕ ಕಾಲುಗಳನ್ನು ಚಲಿಸದೆ ಅದನ್ನು ಸಾಧ್ಯವಾದಷ್ಟು ಬಲಕ್ಕೆ ತಿರುಗಿಸಿ. ಹೀಗೆ ತಿರುಗಿಸುವಾಗ ಸೊಂಟದವರೆಗೆ ಮಾತ್ರ ತಿರುಗಿಸಲು ಮರೆಯದಿರಿ. ಹಿಂದಕ್ಕೆ ತಿರುಗುವಾಗಲೂ ತೋಳುಗಳನ್ನು ಪರಸ್ಪರ ಸಮಾನಾಂತರವಾಗಿ ಇಡಬೇಕು. ಹೀಗೆ 4ರಿಂದ 6 ಸೆಕೆಂಡುಗಳ ಕಾಲ ಹಿಡಿದು ಉಸಿರಾಡಿ ಮತ್ತು ಮುಂದೆ ತಿರುಗಿ. ಇದನ್ನು ಬಲಭಾಗದಲ್ಲಿ 5 ಬಾರಿ ಮತ್ತು ಎಡಭಾಗದಲ್ಲಿ 5 ಬಾರಿ ಮಾಡಿ.

ಕಟಿ ಚಕ್ರಾಸನ ಮಾಡುವುದರಿಂದಾಗುವ ಉಪಯೋಗಗಳು * ಸೊಂಟದ ಬಳಿಯ ಕೊಬ್ಬನ್ನು ಕರಗಿಸುತ್ತದೆ. * ಸಂಧಿವಾತ ಇರುವವರಿಗೆ ಕಟಿ ಚಕ್ರಾಸನ ತುಂಬಾ ಒಳ್ಳೆಯದು. * ಬೆನ್ನು ಮೂಳೆಯನ್ನು ಬಲಗೊಳಿಸುತ್ತದೆ. * ಕುತ್ತಿಗೆ ಮತ್ತು ಹೆಗಲು ಬಲಗೊಳ್ಳುತ್ತದೆ. * ಮಾನಸಿಕ ಒತ್ತಡ ಮತ್ತು ಖಿನ್ನತೆಯನ್ನು ದೂರ ಮಾಡುತ್ತದೆ

ಕಟಿ ಚಕ್ರಾಸನ ಮಾಡುವ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಸ್ಪಾಂಡಿಲೈಟಿಸ್ ಇರುವವರು ಕುತ್ತಿಗೆಯನ್ನು ಸ್ವಲ್ಪ ತಿರುಗಿಸಬೇಕು. ಭುಜ ಮತ್ತು ಸೊಂಟದ ನೋವಿನಿಂದ ತೀವ್ರವಾಗಿ ಬಳಲುತ್ತಿರುವವರು ಈ ಆಸನವನ್ನು ಮಾಡಬಾರದು. ಈ ಆಸನ ಮಾಡುವಾಗ ಮೊಣಕಾಲನ್ನು ಬಾಗಿಸಬಾರದು. ಇದನ್ನೂ ಓದಿ:

ಋತುಚಕ್ರ ಸಮಸ್ಯೆಯಿಂದ ಹೊರಬರಲು ಈ 5 ಯೋಗಾಸನಗಳು ಸಹಕಾರಿ

Women Health: ಬಂಜೆತನ ಸಮಸ್ಯೆಗೆ ಪರಿಹಾರವೇನು? ಗಮನಿಸಬೇಕಾದ ಅಂಶಗಳು ಇಲ್ಲಿದೆ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ