AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women Health: ಬಂಜೆತನ ಸಮಸ್ಯೆಗೆ ಪರಿಹಾರವೇನು? ಗಮನಿಸಬೇಕಾದ ಅಂಶಗಳು ಇಲ್ಲಿದೆ

ಇತ್ತೀಚಿಗಿನ ಮಹಿಳೆಯರು ಧೂಮಪಾನ, ಮದ್ಯಪಾನ ಸೇವನೆಗೆ ಮುಂದಾಗುತ್ತಿದ್ದಾರೆ. ದಿನ ಸಾಗುತ್ತಿದ್ದಂತೆಯೇ ಡ್ರಿಂಕ್ಸ್​ ಮಾಡುವುದು ಸ್ಟೈಲ್ ಆಗಿ ಬದಲಾವಣೆ ಹೊಂದುತ್ತಿದೆ. ಇದು ಯುವತಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

Women Health: ಬಂಜೆತನ ಸಮಸ್ಯೆಗೆ ಪರಿಹಾರವೇನು? ಗಮನಿಸಬೇಕಾದ ಅಂಶಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
TV9 Web
| Updated By: ganapathi bhat|

Updated on:Jul 11, 2021 | 8:22 PM

Share

ಇತ್ತೀಚಿಗಿನ ಮಹಿಳೆಯರಲ್ಲಿ ಬಂಜೆತನ ಸಮಸ್ಯೆ ಕಾಡುತ್ತಿದೆ. ಇದರಿಂದ ಹೊರಬರಲು ಜೀವನ ಶೈಲಿಯಲ್ಲಿ ಬದಲಾವಣೆ ಆಗಲೇಬೇಕು. ಈಗೀಗ ಮಹಿಳೆಯರಿಗೆ ಬೊಜ್ಜು ಮತ್ತು ಹಾರ್ಮೋನ್​ ತೊಂದರೆ ಚಿಕ್ಕ ವಯಸ್ಸಿನಿಂದಲೇ ಕಾಡಲು ಪ್ರಾರಂಭಿಸುತ್ತಿದೆ. ಇದಕ್ಕೆಲ್ಲಾ ಕಾರಣ ಸೇವಿಸುತ್ತಿರುವ ಆಹಾರ ಮತ್ತು ಜೀವನಶೈಲಿ. ಮಹಿಳೆಯರು ಹೆಚ್ಚು ಒತ್ತಡಕ್ಕೆ ಸಿಲುಕುವುದು, ಅತಿಯಾದ ಕೆಲಸ, ಗರ್ಭಕೋಶ ತೊಂದರೆಯಿಂದಾಗಿ ಬಂಜೆತನದ ಸಮಸ್ಯೆ ಕಾಡುತ್ತಿದೆ.

ಇತ್ತೀಚಿಗಿನ ಮಹಿಳೆಯರು ಧೂಮಪಾನ, ಮದ್ಯಪಾನ ಸೇವನೆಗೆ ಮುಂದಾಗುತ್ತಿದ್ದಾರೆ. ದಿನ ಸಾಗುತ್ತಿದ್ದಂತೆಯೇ ಡ್ರಿಂಕ್ಸ್​ ಮಾಡುವುದು ಸ್ಟೈಲ್ ಆಗಿ ಬದಲಾವಣೆ ಹೊಂದುತ್ತಿದೆ. ಇದು ಯುವತಿಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಜಂಕ್​ಫುಡ್​ಗಳ ಸೇವನೆ ಆರೋಗ್ಯ ಸ್ಥಿತಿಯನ್ನು ಕೆಡಿಸುತ್ತಿದೆ. ಜತೆಗೆ ಕಡಿಮೆ ಊಟ ಮಾಡುವುದು,ಆಹಾರದಲ್ಲಿ ಪೋಷಕಾಂಶದ ಕೊರತೆ ಬೊಜ್ಜಿನ ಹೆಚ್ಚಳ, ಥೈರಾಯಿಡ್​ ಸಮಸ್ಯೆ, ಪಿಸಿಒಡಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಾಗಿರುವಾಗ ತಮ್ಮ ಆರೋಗ್ಯದ ಕುರಿತಾಗಿ ಯುವತಿರು ಗಮನವಹಿಸಲೇಬೇಕಾಗಿದೆ.

ಮಹಿಳೆಯರು ಈ ಸಮಸ್ಯೆಯಿಂದ ಹೊರಬರಲು ಕಠಿಣ ಪರಿಶ್ರಮ ಪಡಲೇಬೇಕು. ಜೀವನ ಶೈಲಿಯಲ್ಲಿನ ಬದಲಾವಣೆ ಖಂಡಿತವಾಗಿಯೂ ತೊಂದರೆಯನ್ನು ದೂರಪಡಿಸುತ್ತದೆ. ಹೀಗಿರುವಾಗ ಜೀವನದಲ್ಲಿ ಅಳವಡಿಕೊಳ್ಳಬೇಕಾದ ಮುಖ್ಯವಾದ ಕೆಲವೊಂದಿಷ್ಟು ಸಲಹೆಗಳು ಈ ಕೆಳಗಿನಂತಿವೆ.

ಗಮನವಹಿಸಲೇಬೇಕಾದ ಕೆಲವು ಸಲಹೆಗಳು * ನಿಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಬೇಕು. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಪ್ರಾಣಾಯಾಮ ಮತ್ತು ಧ್ಯಾನ ಮಾಡಿ. ಇದು ನಿಮ್ಮ ದೇಹದ ಒತ್ತಡವನ್ನು ನಿಯಂತ್ರಿಸುತ್ತದೆ. ಜತೆಗೆ ಇತರ ಆರೋಗ್ಯ ಸಮಸ್ಯೆಯಿಂದಲೂ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುತ್ತದೆ.

* ವ್ಯಾಯಾಮ ಅಥವಾ ಯೋಗಾಸನ ಮಾಡುವುದು ಮುಖ್ಯ. ಸರ್ವಾಂಗಾಸನ, ಪಶ್ಚಿಮೋತ್ತಾನಾಸನ, ಭುಜಂಗಾಸನ, ಸೇತುಬಂಧಾಸನ ಹೀಗೆ ಪ್ರತಿನಿತ್ಯ ಯೋಗ ಅಭ್ಯಾಸದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ

* ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಕಾಳಜಿಯಿರಲಿ. ಹೆಚ್ಚು ಹೆಚ್ಚು ಹಣ್ಣುಗಳನ್ನು, ತರಕಾರಿಗಳನ್ನು ಜತೆಗೆ ಡ್ರೈಫ್ರುಟ್ಸ್​ಗಳು, ಮೊಳಕೆಯೊಡೆದ ಕಾಳುಗಳನ್ನು ಸೇವಿಸಿ. ಆದಷ್ಟು ಜಂಕ್​ಫುಡ್​ಗಳ ಸೇವನೆಯನ್ನು ತಪ್ಪಿಸಿ

* ಸಮಯಕ್ಕೆ ಸರಿಯಾಗಿ ಮಲಗುವುದು ಮತ್ತು ಏಳುವ ಅಭ್ಯಾಸ ರೂಢಿಯಲ್ಲಿರಲಿ. ಧೂಮಪಾನ ಮತ್ತು ಮದ್ಯಪಾನ ಸೇವನೆಯಿಂದ ದೂರವಿರಿ ಗರ್ಭಧಾರಣೆಯನ್ನು ಯೋಜಿಸಲು ಹೆಚ್ಚು ಸಮಯ ತೆಗೆದುಕೊಳ್ಳಬೇಡಿ. ವಿಳಂಬವು ಬಂಜೆಯನಕ್ಕೆ ಕಾರಣವಾಗುವುದಲ್ಲದೇ ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ

ಇದನ್ನೂ ಓದಿ:

Women Health: ಗರ್ಭಾವಸ್ಥೆಯಲ್ಲಿ ಜ್ವರ ಕಾಣಿಸಿಕೊಳ್ಳುವುದು ಗರ್ಭಪಾತಕ್ಕೆ ಕಾರಣವಾಗಬಹುದು! ತಡೆಗಟ್ಟುವ ಕ್ರಮ ತಿಳಿಯಿರಿ

Women Health: ಮುಟ್ಟೆಂದರೆ ಮುಜುಗರದ ಪ್ರಶ್ನೆಯೇ ಇಲ್ಲ! ಆರೋಗ್ಯದ ಸಮಸ್ಯೆಗಳನ್ನು ವೈದ್ಯರಲ್ಲಿ ಮನಬಿಚ್ಚಿ ಹೇಳಲು ಕಲಿಯಬೇಕಾಗಿದೆ ಯುವತಿಯರು

Published On - 8:20 pm, Sun, 11 July 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ