ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ಹೊಗಳಿ, ಸಹಾಯ ಕೋರಿದ ಆಸ್ಟ್ರೇಲಿಯಾ ಸಂಸದ ಕ್ರೇಗ್ ಕೆಲ್ಲಿ
ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಯೋಗಿ ಆದಿತ್ಯನಾಥ್ ಪ್ರಾರಂಭಿಸಿದ ಆರೋಗ್ಯ ಮತ್ತು ಕಾನೂನು ಸಹಾಯವಾಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಕೂಡ ಕಳೆದ ತಿಂಗಳು ಟ್ವೀಟ್ ಮಾಡಿದ್ದರು.
ಉತ್ತರಪ್ರದೇಶದಲ್ಲಿ ಕೊರೊನಾ ಸೋಂಕಿನ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಸ್ಟ್ರೇಲಿಯಾದ ಸಂಸದ ಕ್ರೇಗ್ ಕೆಲ್ಲಿ ಶ್ಲಾಘಿಸಿದ್ದಾರೆ. ಅಲ್ಲದೆ, ನಮ್ಮ ಆಸ್ಟ್ರೇಲಿಯಾದಲ್ಲೂ ಕೊರೊನಾ ಸಾಂಕ್ರಾಮಿಕ ನಿಯಂತ್ರಿಸಲು ನೀವು ಸಹಾಯ ಮಾಡಬಹುದಾ ಎಂದು ಕೇಳಿದ್ದಾರೆ.
ಟ್ವೀಟ್ ಮಾಡಿರುವ ಆಸ್ಟ್ರೇಲಿಯಾ ಎಂಪಿ ಕ್ರೇಗ್ ಕೆಲ್ಲಿ, ಭಾರತದ ಉತ್ತರಪ್ರದೇಶ ರಾಜ್ಯದಲ್ಲಿ ಕೊರೊನಾ 2ನೇ ಅಲೆಯನ್ನು ನಿಯಂತ್ರಿಸುವಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ತುಂಬ ಪರಿಣಾಮಕಾರಿಯಾಗಿ ಶ್ರಮಿಸಿದೆ. ಕೊರೊನಾ ಸೋಂಕನ್ನು ತಡೆಗಟ್ಟಲು ಉತ್ತರ ಪ್ರದೇಶ ಐವರ್ಮೆಕ್ಟಿನ್ನ್ನು ಪರಿಚಯಿಸಿದ್ದು ನಿಜಕ್ಕೂ ಅತ್ಯುತ್ತಮ ಕೆಲಸ ಎಂದು ಹೇಳಿದ್ದಾರೆ. ಹಾಗೇ ಇನ್ನೊಂದು ಟ್ವೀಟ್ನಲ್ಲಿ, ನಮ್ಮಲ್ಲಿ ಮೊದಲಿದ್ದವರು ಸೃಷ್ಟಿಸಿದ ಅವ್ಯವಸ್ಥೆಯನ್ನು ಹೋಗಲಾಡಿಸಿ, ಕೊರೊನಾ ಸೋಂಕನ್ನು ಹಿಮ್ಮೆಟ್ಟಿಸಲು ಉತ್ತರ ಪ್ರದೇಶದ ಜನರು ಅವರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರನ್ನು ನಮಗೆ ಸಾಲ ಕೊಡಬಹುದಾ ಎಂದು ಹೊಗಳಿಕೆ ರೂಪದಲ್ಲಿ ಪ್ರಶ್ನಿಸಿದ್ದಾರೆ.
WELL DONE to Indian State of UP & its Chief Minister @myogiadityanath for their effective management in crushing the wave
Brilliant that UP introduced ‘Ivermectin’ as preventive measure for health workers, patients & people exposed to infected people !! https://t.co/eYmCFBdgQx
— Craig Kelly MP (@CraigKellyMP) July 12, 2021
ಕಳೆದ ತಿಂಗಳು ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸಹ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಶ್ಲಾಘಿಸಿದ್ದರು. ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಯೋಗಿ ಆದಿತ್ಯನಾಥ್ ಪ್ರಾರಂಭಿಸಿದ ಆರೋಗ್ಯ ಮತ್ತು ಕಾನೂನು ಸಹಾಯವಾಣಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Accident; ಕ್ಯಾಂಟರ್‌ಗೆ ಬೈಕ್ ಡಿಕ್ಕಿ ಸ್ಥಳದಲ್ಲೇ ಸವಾರ ಸಾವು, ಹಿಂಬದಿ ಸವಾರನಿಗೆ ಗಂಭೀರ ಗಾಯ
Australian MP Craig Kelly has asked Yogi Adityanath to help his country in tackling the Corona pandemic
Published On - 10:07 am, Wed, 14 July 21