ಕೊವಿಡ್ ನಿಯಮ ಉಲ್ಲಂಘನೆ ಮುಂದುವರಿದರೆ ಇಲ್ಲಿವರೆಗೆ ನಾವು ಕೈಗೊಂಡ ಕ್ರಮಗಳೆಲ್ಲ ವ್ಯರ್ಥ: ಆರೋಗ್ಯ ಸಚಿವಾಲಯ
Health Ministry Press Conference: ನಾವು ಮೂರನೇ ಅಲೆ (COVID-19 ರ) ಬಗ್ಗೆ ಮಾತನಾಡುವಾಗ, ನಾವು ಅದನ್ನು ಹವಾಮಾನ ಮುನ್ಸೂಚನೆಯಂತೆ ತೆಗೆದುಕೊಳ್ಳುತ್ತಿದ್ದೇವೆ. ಅದರ ಗಂಭೀರತೆ ಮತ್ತು ಅದಕ್ಕೆ ಸಂಬಂಧಿಸಿದ ನಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ.
ದೆಹಲಿ: ಕೊವಿಡ್ ನಡವಳಿಕೆಯ ನಿರಂತರ ಉಲ್ಲಂಘನೆಯು ಇಲ್ಲಿಯವರೆಗೆ ನಾವು ಗಳಿಸಿದ್ದನ್ನು ವ್ಯರ್ಥವಾಗುವಂತೆ ಮಾಡುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ನಾವು 11 ರಾಜ್ಯಗಳಲ್ಲಿ ಕೇಂದ್ರ ತಂಡಗಳನ್ನು ನಿಯೋಜಿಸಿದ್ದೇವೆ. ಇವರು ಕೊವಿಡ್ ನಿರ್ವಹಣೆಗೆ ಲ್ಲಿ ರಾಜ್ಯ ಸರ್ಕಾರಗಳಿಗೆ ಸಹಾಯ ಮಾಡಬಹುದು. ಈಶಾನ್ಯ ರಾಜ್ಯಗಳಲ್ಲದೆ, ತಂಡಗಳನ್ನು ಮಹಾರಾಷ್ಟ್ರ, ಛತ್ತೀಸ್‌ಗಡ , ಕೇರಳ ಮತ್ತು ಒಡಿಶಾಗೆ ಕಳುಹಿಸಲಾಗಿದೆ. ಇಲ್ಲಿ ಕೊವಿಡ್ ಪ್ರಕರಣಗಳು ಏರಿಕೆ ಆಗುತ್ತಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ನಾವು ಮೂರನೇ ಅಲೆ (COVID-19 ರ) ಬಗ್ಗೆ ಮಾತನಾಡುವಾಗ, ನಾವು ಅದನ್ನು ಹವಾಮಾನ ಮುನ್ಸೂಚನೆಯಂತೆ ತೆಗೆದುಕೊಳ್ಳುತ್ತಿದ್ದೇವೆ. ಅದರ ಗಂಭೀರತೆ ಮತ್ತು ಅದಕ್ಕೆ ಸಂಬಂಧಿಸಿದ ನಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಜನರು ಕೊವಿಡ್ ನಿಯಮ ಪಾಲಿಸಿ ಎಂದು ನಾನು ವಿನಂತಿಸುತ್ತೇನೆ. ಸಕ್ರಿಯ ಪ್ರಕರಣಗಳೀಗ ಕಡಿಮೆ ಆಗುತ್ತಾ ಬರುತ್ತಿವೆ ಬರುತ್ತಿವೆ ಎಂದಿದ್ದಾರೆ ಅಗರ್ವಾಲ್.
ಕೇರಳದಲ್ಲಿ ಏಪ್ರಿಲ್ ನಲ್ಲಿ ಶೇ.6.2 ರಷ್ಟು ನಿತ್ಯದ ಪ್ರಕರಣಗಳಲ್ಲಿ ಕೊಡುಗೆ ಇತ್ತು. ಆದರೆ ಕೇರಳದಲ್ಲಿ ಜುಲೈ ನಲ್ಲಿ ನಿತ್ಯದ ಕೇಸ್ ಗಳ ಪೈಕಿ ಶೇ.30 ರಷ್ಟು ವರದಿಯಾಗುತ್ತಿದೆ. ಈಗ ದೇಶದ 73 ಜಿಲ್ಲೆಗಳಲ್ಲಿ ನೂರಕ್ಕಿಂತ ಹೆಚ್ಚಿನ ಕೊರೊನಾ ಕೇಸ್ ಪತ್ತೆಯಾಗಿದೆ. ವಾರದ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಶೇ.2.5 ರಷ್ಟು ಇದೆ. ರಾಜಸ್ಥಾನದಲ್ಲಿ 9, ಕೇರಳದ ಎಂಟು ಜಿಲ್ಲೆಗಳಲ್ಲಿ ಶೇ.10 ಕ್ಕಿಂತ ಹೆಚ್ಚಿನ ಕೊರೊನಾ ಟೆಸ್ಟಿಂಗ್ ಪಾಸಿಟಿವಿಟಿ ದರ ಇದೆ.
ಲಸಿಕೆ ಉತ್ಪಾದನೆ ಕ್ರಮೇಣ ಹೆಚ್ಚುತ್ತಿದೆ. ಇದು ಯೋಜಿತ ವ್ಯವಹಾರವಾಗಿದ್ದು, ಈ ಹೆಚ್ಚಳದೊಂದಿಗೆ ಲಸಿಕೆ ಲಭ್ಯವಾಗುತ್ತಿದೆ ಮತ್ತು ನಾವು ಲಸಿಕೆ ಕಾರ್ಯಕ್ರಮವನ್ನು ಜಾರಿಗೆ ತರಬೇಕಾಗಿದೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ. ಪೌಲ್ ಹೇಳಿದ್ದಾರೆ.
ವಿಶ್ವವು ಮೂರನೇ ಅಲೆಗೆ ಸಾಕ್ಷಿಯಾಗಿದೆ. ಮೂರನೇ ಅಲೆ ಭಾರತಕ್ಕೆ ಅಪ್ಪಳಿಸಬಾರದು ಎಂದು ಖಚಿತಪಡಿಸಿಕೊಳ್ಳಲು ನಾವು ಕೈಜೋಡಿಸಬೇಕು. ಭಾರತದಲ್ಲಿ ಯಾವಾಗ ಬರಲಿದೆ ಎಂದು ಚರ್ಚಿಸುವ ಬದಲು ಮೂರನೇ ಅಲೆಯನ್ನು ದೂರವಿಡುವುದರತ್ತ ನಾವು ಗಮನ ಹರಿಸಬೇಕು ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ ಪೌಲ್.
ಮಣಿಪುರ, ಮಿಜೋರಾಂ, ತ್ರಿಪುರ, ಅರುಣಾಚಲ ಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಪ್ರಕರಣಗಳಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದೆ. ಅಂತೆಯೇ, ಕೆಲವು ರಾಜ್ಯಗಳಿವೆ, ಅಲ್ಲಿ ಪ್ರಕರಣಗಳು ಕಡಿಮೆಯಾಗಿವೆ ಆದರೆ ಇನ್ನೂ ಕೊವಿಡ್ ಇರುವಿಕೆ ಇದೆ ಎಂದಿದ್ದಾರೆ ಅಗರ್ವಾಲ್.
ಹಿಮಾಚಲ ಪ್ರದೇಶ ಸರ್ಕಾರ ಕಳೆದ ತಿಂಗಳು ಘೋಷಿಸಿತ್ತು, ಅದರ ನಂತರ ಪ್ರವಾಸಿಗರು ವಿಶೇಷವಾಗಿ ಶಿಮ್ಲಾ, ಕುಲ್ಲು-ಮನಾಲಿ ಮತ್ತು ಧರ್ಮಶಾಲಾಗಳಿಗೆ ಭೇಟಿ ನೀಡಲು ಆರಂಭಿಸಿದರು.
ನಗರಗಳ ವಸತಿ ಪ್ರದೇಶಗಳಲ್ಲಿನ ಅನೇಕ ಮಾರುಕಟ್ಟೆಗಳು ಕೊವಿಡ್ -19 ಮಾನದಂಡಗಳನ್ನು ಉಲ್ಲಂಘಿಸುತ್ತಿವೆ. ಕೊವಿಡ್ ಮಾರ್ಗಸೂಚಿಗಳ ಉಲ್ಲಂಘನೆಗಾಗಿ ಮತ್ತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸದ ಕಾರಣ ದೆಹಲಿ ಸರ್ಕಾರ ಇತ್ತೀಚೆಗೆ ಜನಪತ್ ಮಾರುಕಟ್ಟೆಯನ್ನು ಮುಚ್ಚುವಂತೆ ಆದೇಶಿಸಿತ್ತು.
ಕೊವಿಡ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಲಜಪತ್ ನಗರ, ಲಕ್ಷ್ಮಿ ನಗರ, ಕಮಲಾ ನಗರ, ಸರೋಜಿನಿ ನಗರ ಮತ್ತು ಸದರ್ ಬಜಾರ್ ಮತ್ತು ಕರೋಲ್ ಬಾಗ್‌ನ ಕೆಲವು ಭಾಗಗಳನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಇತ್ತೀಚಿನ ವಾರಗಳಲ್ಲಿ ಮುಚ್ಚಿದೆ.
ಇದನ್ನೂ ಓದಿ: ಭಾರತದ ಮೊಟ್ಟಮೊದಲ ಕೊವಿಡ್-19 ರೋಗಿಗೆ ಮತ್ತೇ ಸೋಂಕು, ತ್ರಿಶೂರ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು
(Don’t talk about Coronavirus third wave like weather update not understanding its seriousness says Health Ministry)
Published On - 5:46 pm, Tue, 13 July 21