Sputnik V Vaccine: ಭಾರತದಲ್ಲಿ ಸೆಪ್ಟೆಂಬರ್​ನಿಂದ ಪ್ರಾರಂಭವಾಗಲಿದೆ ಸ್ಪುಟ್ನಿಕ್​ ವಿ ಲಸಿಕೆ ಉತ್ಪಾದನೆ

ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸೀರಂ ಇನ್​ಸ್ಟಿಟ್ಯೂಟ್​​ನ ಸಿಇಒ ಆಧಾರ್ ಪೂನಾವಾಲಾ, ಆರ್​ಡಿಐಎಫ್​ (RDIF)ನೊಂದಿಗೆ ಪಾಲುದಾರಿಕೆಯಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಉತ್ಪಾದಿಸಲು ನನಗೆ ತುಂಬ ಸಂತೋಷವಾಗುತ್ತಿದೆ ಎಂದಿದ್ದಾರೆ.

Sputnik V Vaccine: ಭಾರತದಲ್ಲಿ ಸೆಪ್ಟೆಂಬರ್​ನಿಂದ ಪ್ರಾರಂಭವಾಗಲಿದೆ ಸ್ಪುಟ್ನಿಕ್​ ವಿ ಲಸಿಕೆ ಉತ್ಪಾದನೆ
ಸ್ಫುಟ್ನಿಕ್ ವಿ ಲಸಿಕೆ
Follow us
TV9 Web
| Updated By: Lakshmi Hegde

Updated on: Jul 13, 2021 | 4:44 PM

ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ(SII) ಸೆಪ್ಟೆಂಬರ್​ನಿಂದ ರಷ್ಯಾದ ಕೊವಿಡ್​ 19 ಲಸಿಕೆ ಸ್ಪುಟ್ನಿಕ್​ ವಿ(Sputnik V Vaccine) ಯನ್ನು ಉತ್ಪಾದನೆ ಮಾಡಲಿದೆ. ಭಾರತದಲ್ಲಿ ವಾರ್ಷಿಕ 300 ಮಿಲಿಯನ್​ ಡೋಸ್​ ಲಸಿಕೆ ಉತ್ಪಾದನೆ ಮಾಡುವ ಉದ್ದೇಶದೊಂದಿಗೆ ಈ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ರಷ್ಯಾದ ನೇರ ಹೂಡಿಕೆ ನಿಧಿ (RDIF) ಮಂಗಳವಾರ ಪ್ರಕಟಿಸಿದೆ.

ಸ್ಪುಟ್ನಿಕ್​ ವಿ ಲಸಿಕೆಯನ್ನು ಪ್ರಯೋಗ, ಪರೀಕ್ಷೆ ಮಾಡಲು ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸೀರಂ ಇನ್​ಸ್ಟಿಟ್ಯೂಟ್​ಗೆ ಜು.4ರಂದು ಭಾರತದ ಔಷಧ ನಿಯಂತ್ರಣಾ ಪ್ರಾಧಿಕಾರ (DCGI) ಅನುಮತಿ ನೀಡಿತ್ತು. ಅಂತೆಯೇ ಸೀರಂ ಇನ್​ಸ್ಟಿಟ್ಯೂಟ್​ನಲ್ಲಿ ಸ್ಪುಟ್ನಿಕ್​ ವಿ ಲಸಿಕೆಯ ಮೊದಲ ಬ್ಯಾಚ್​​ನ ಉತ್ಪಾದನೆ ಸೆಪ್ಟೆಂಬರ್​ನಲ್ಲಿ ಪ್ರಾರಂಭವಾಗಲಿದೆ. ಭಾರತದಲ್ಲಿ ವರ್ಷಕ್ಕೆ 300 ಮಿಲಿಯನ್​​ ಡೋಸ್​ಗಳಷ್ಟು ಲಸಿಕೆ ಉತ್ಪಾದನೆ ಮಾಡಲು ಉದ್ದೇಶಿಸಲಾಗಿದೆ. ರಷ್ಯಾದ ಗಮಲೇಯ ಕೇಂದ್ರದಿಂದ ಸೆಲ್​ ಮತ್ತು ವೆಕ್ಟರ್ ಮಾದರಿಗಳನ್ನು ಸೀರಂ ಇನ್​ಸ್ಟಿಟ್ಯೂಟ್​ಗೆ ಈಗಾಗಲೇ ಹಸ್ತಾಂತರಿಸಲಾಗಿದ್ದು, ಅದಕ್ಕೆ ಡಿಸಿಜಿಐ ಅನುಮೋದನೆ ಸಿಕ್ಕ ತಕ್ಷಣ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಆರ್​ಡಿಐಎಫ್​ ಹೇಳಿಕೆ ಬಿಡುಗಡೆ ಮಾಡಿದೆ. ಸೀರಂ ಇನ್​ಸ್ಟಿಟ್ಯೂಟ್ ಸದ್ಯ ಕೊವಿಶೀಲ್ಡ್​ ಲಸಿಕೆ ಮತ್ತು ಅಮೆರಿಕದ ನೊವಾವ್ಯಾಕ್ಸ್​ (ಭಾರತದಲ್ಲಿ ಇದಕ್ಕೆ ಕೊವಾವ್ಯಾಕ್ಸ್​ ಎಂದು ಹೆಸರಿಡಲಾಗಿದೆ) ಲಸಿಕೆಗಳನ್ನು ಉತ್ಪಾದನೆ ಮಾಡುತ್ತಿದೆ.

ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸೀರಂ ಇನ್​ಸ್ಟಿಟ್ಯೂಟ್​​ನ ಸಿಇಒ ಆಧಾರ್ ಪೂನಾವಾಲಾ, ಆರ್​ಡಿಐಎಫ್​ (RDIF)ನೊಂದಿಗೆ ಪಾಲುದಾರಿಕೆಯಲ್ಲಿ ಸ್ಪುಟ್ನಿಕ್​ ವಿ ಲಸಿಕೆ ಉತ್ಪಾದಿಸಲು ನನಗೆ ತುಂಬ ಸಂತೋಷವಾಗುತ್ತಿದೆ. ಸೆಪ್ಟೆಂಬರ್​​ನಲ್ಲಿ ಪ್ರಯೋಗಾತ್ಮಕ ಉತ್ಪಾದನೆ ಪ್ರಾರಂಭವಾಗಿ, ಮುಂಬರುವ ತಿಂಗಳುಗಳಲ್ಲಿ ಮಿಲಿಯನ್​ಗಳಷ್ಟು ಡೋಸ್ ಲಸಿಕೆ ಉತ್ಪಾದನೆ ಮಾಡುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಮೇ ತಿಂಗಳಲ್ಲಿ ಮೊದಲ ಬಾರಿಗೆ ಹೈದರಾಬಾದ್​ನಲ್ಲಿ ಚಾಲನೆಗೊಂಡ ಸ್ಪುಟ್ನಿಕ್ ವಿ ಲಸಿಕೆಯನ್ನು ಈಗಾಗಲೇ ಭಾರತದ 50 ನಗರಗಳಿಗೆ ವಿತರಿಸಲಾಗಿದೆ. ಬೆಂಗಳೂರು, ವಿಜಾಗ್, ಮುಂಬೈ, ಕೊಲ್ಕತ್ತಾ, ದೆಹಲಿ, ಚೆನ್ನೈ, ವಿಜಯವಾಡ, ಕೊಲ್ಲಾಪುರ, ಕೊಚ್ಚಿ, ರಾಯ್ಪುರ, ಚಂಡೀಗಢ, ಪುಣೆ, ನಾಗ್ಪುರ, ನಾಸಿಕ್, ಕೊಯಮತ್ತೂರು, ರಾಂಚಿ, ಜೈಪುರ, ಲಕ್ನೋ, ಪಾಟ್ನಾ, ಭುವನೇಶ್ವರ, ಅಹಮದಾಬಾದ್, ರಾಜಕೋಟ್, ಭೂಪಾಲ್, ಧಾರವಾಡ, ಕಲಬುರ್ಗಿ, ಗುಂಟೂರು, ಮಧುರೈ, ಮೈಸೂರು ಮುಂತಾದ ನಗರಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನೀಡಲಾಗಿದೆ.

ಇದನ್ನೂ ಓದಿ: Flipkart ನಲ್ಲಿ ಬಂಪರ್ ಡಿಸ್ಕೌಂಟ್: ಬಲಿಷ್ಠ ಬ್ಯಾಟರಿ, ಆಕರ್ಷಕ ಕ್ಯಾಮೆರಾದ Galaxy F22 ಈಗ ಖರೀದಿಗೆ ಲಭ್ಯ

(Sputnik V vaccine production will Start By September In India)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್