ಮುಸ್ಲಿಂ ಪುರುಷರ ಗುಂಪೊಂದು ಐಸಿಸ್ ಎಂದು ಬರೆದ ಟೀ-ಶರ್ಟ್‌ಗಳನ್ನು ಧರಿಸಿರುವ ಚಿತ್ರವನ್ನು ಶೆಫಾಲಿ ವೈದ್ಯ (Shefali Vaidya) ಟ್ವೀಟ್ ಮಾಡಿದ್ದರು. ಅವರ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿವಾದಾತ್ಮಕ ಚಿತ್ರವಾದ ದಿ ಕೇರಳ ಸ್ಟೋರಿ (The Kerala Story) ಬಿಡುಗಡೆಯಾದ ನಂತರ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಗೆ ತಮ್ಮ ಬೆಂಬಲವನ್ನು ತೋರಿಸುತ್ತಿರುವ ಈ ಜನರು ಕೇರಳದವರು ಎಂದು ಶೆಫಾಲಿ ಟ್ವೀಟ್ ನಲ್ಲಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಟ್ವೀಟ್ ಬಗ್ಗೆ ಅಪ್ ಡೇಟ್ ಮಾಡಿದ ವೈದ್ಯ ಈ ಚಿತ್ರ ಕೇರಳದದ್ದಲ್ಲ ಎಂದು ಹೇಳಿದ್ದಾರೆ.
update- this is a pic from TN, not Kerala. Which is even more scary. It means ISIS is not just limited to TN but spreading its tentacles everywhere. https://t.co/OfAJhVDgpy
— Shefali Vaidya. ?? (@ShefVaidya) May 7, 2023
ಈ ವೈರಲ್ ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್ ಡಾಟ್ ಕಾಮ್ ಇದು 2014ರಲ್ಲಿ ಚಿತ್ರ. ಈ ಫೋಟೊ ಕೇರಳದ್ದು ಅಲ್ಲ ತಮಿಳುನಾಡಿನ ರಾಮನಾಥಪುರದ್ದು ಎಂದು ಹೇಳಿದೆ. ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ 2014ರ ಹಳೆಯ ವರದಿಗಳು ಪತ್ತೆಯಾಗಿವೆ.
ದಿ ಹಿಂದೂ, ದಿ ಸ್ಕ್ರಾಲ್ ಮತ್ತು ಎನ್‌ಡಿಟಿವಿಯಂತಹ ಹಲವಾರು ಸುದ್ದಿ ಮಾಧ್ಯಮಗಳು ವೈರಲ್ ಫೋಟೊ ಬಗ್ಗೆ ಸುದ್ದಿ ಮಾಡಿದೆ. 26 ಮುಸ್ಲಿಂ ಯುವಕರ ಗುಂಪು “ಐಸಿಸ್” ಎಂದು ಬರೆಯಲಾದ ಕಪ್ಪು ಟೀ ಶರ್ಟ್‌ಗಳಲ್ಲಿ ಪೋಸ್ ನೀಡಿದ್ದರಿಂದ ಉಂಟಾದ ಈ ವಿವಾದದ ಬಗ್ಗೆ ಈ ಮಾಧ್ಯಮಗಳು ವರದಿ ಮಾಡಿದೆ.
ಈ ಚಿತ್ರವು ತಮಿಳುನಾಡಿನ ರಾಮನಾಥಪುರಂನ ತೊಂಡಿ ಪಟ್ಟಣದ್ದು, ಇದನ್ನು 2014ರ ಈದ್ ದಿನದಂದು ಕ್ಲಿಕ್ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
6 ಆಗಸ್ಟ್ 2014 ರ ಹಿಂದೂ ವರದಿಯ ಪ್ರಕಾರ, ಫೋಟೋದಲ್ಲಿರುವ ಯಾವುದೇ ಯುವಕರು ಐಸಿಸ್ ಜತೆ ಸಂಪರ್ಕ ಹೊಂದಿಲ್ಲ. ಈ ವಿವಾದಕ್ಕೆ ಸಂಬಂಧಿಸಿದಂತೆಟಿ ಶರ್ಟ್‌ಗಳನ್ನು ಖರೀದಿಸಿದ ತಿರುಪುರ್ ಮೂಲದ ಇಮಾಮ್‌ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: Fact Check: ಮಣಿಪುರದಲ್ಲಿ ಬುಡಕಟ್ಟು ಜನರು ಅಂಗಡಿ ಲೂಟಿ ಮಾಡುತ್ತಿರುವುದು ಎಂಬ ವೈರಲ್ ವಿಡಿಯೊ ಫಿಲಿಪೈನ್ಸ್ನದ್ದು
ಇರಾಕ್‌ನಲ್ಲಿ ಸೆರೆಯಲ್ಲಿದ್ದ ಭಾರತೀಯ ನರ್ಸ್ ಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಐಸಿಸ್‌ಗೆ ಧನ್ಯವಾದ ಅರ್ಪಿಸಲು ಈ ರೀತಿ ಫೋಟೊ ತೆಗೆಯಲಾಗಿದೆ ಎಂದು ಫೋಟೊದಲ್ಲಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಇದೇ ಚಿತ್ರವು 2019 ರ ಲೋಕಸಭಾ ಚುನಾವಣೆಯ ನಂತರ ಕೇರಳದ ವಯನಾಡಿನಲ್ಲಿ ತೆಗೆದದ್ದು ಎಂಬ ಹೇಳಿಕೆಯೊಂದಿಗೆ 2019 ರಲ್ಲಿ ವೈರಲ್ ಆಗಿತ್ತು.
ಮತ್ತಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ