Fact Check: ಪಶ್ಚಿಮ ಬಂಗಾಳದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಜನರನ್ನು ಆಕರ್ಷಿಸಲು ಖಾಲಿ ಕುರ್ಚಿಯಲ್ಲಿ ಊಟದ ಪೊಟ್ಟಣ, ವೈರಲ್ ಆಗಿದ್ದು ಹಳೇ ಫೋಟೊ

|

Updated on: Mar 28, 2021 | 6:04 PM

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊ 2018ರಲ್ಲಿ ವಾರಣಾಸಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ್ದು. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಅಮಿತ್ ಶಾ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದ್ದು ಅಲ್ಲ.

Fact Check: ಪಶ್ಚಿಮ ಬಂಗಾಳದ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಜನರನ್ನು ಆಕರ್ಷಿಸಲು ಖಾಲಿ ಕುರ್ಚಿಯಲ್ಲಿ ಊಟದ ಪೊಟ್ಟಣ, ವೈರಲ್ ಆಗಿದ್ದು ಹಳೇ ಫೋಟೊ
ಫ್ಯಾಕ್ಟ್​ಚೆಕ್
Follow us on

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ನಾಯಕ ಮಹೇಂದ್ರ ನಾಥ್ ಪಾಂಡೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ವೇದಿಕೆಯೊಂದರಲ್ಲಿ ಕುಳಿತುಕೊಂಡಿರುವ ಫೋಟೊ. ಇನ್ನೊಂದು ಫೋಟೊದಲ್ಲಿ ವೇದಿಕೆ ಮುಂದಿರುವ ಖಾಲಿ ಕುರ್ಚಿಗಳ ಮೇಲೆ ಆಹಾರದ ಪೊಟ್ಟಣವಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರಚಾರ ಕಾರ್ಯಕ್ರಮದಲ್ಲಿ ಜನರನ್ನು ಸೇರಿಸಲು ಆಹಾರದ ಪೊಟ್ಟಣ ಇರಿಸಬೇಕಾಗಿ ಬಂತು ಎಂದು ಶೀರ್ಷಿಕೆಯಿರುವ ಈ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. ಆದರೆ ಈ ಫೋಟೊ ಪಶ್ಚಿಮ ಬಂಗಾಳದ್ದು ಅಲ್ಲ. ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್​ಚೆಕ್ ಮಾಡಿದ ಬೂಮ್ ಲೈವ್, ವೈರಲ್ ಆಗಿರುವ ಫೋಟೊ 2018ರಲ್ಲಿ ವಾರಣಾಸಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ್ದು. ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಅಮಿತ್ ಶಾ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದ್ದು ಅಲ್ಲ ಎಂದು ಹೇಳಿದೆ.

I am with Priyanka Gandhi ಎಂಬ ಹೆಸರಿನ ಫೇಸ್ ಬುಕ್ ಪುಟದಲ್ಲಿ ಈ ಫೋಟೊ ಶೇರ್ ಆಗಿದ್ದು , ಜನರನ್ನು ಸೇರಿಸಲು ಆಹಾರ ಪೊಟ್ಟಣ ಇಡಬೇಕಾಗಿ ಬಂತು (भीड़ बुलाने के लिए खाने के पैकेट रखने पड़े) ಎಂದು ಶೀರ್ಷಿಕೆ ನೀಡಲಾಗಿದೆ. ಈ ಪೋಸ್ಟ್ ಈವರೆಗೆ 709 ಬಾರಿ ಶೇರ್ ಆಗಿದೆ.

ಫ್ಯಾಕ್ಟ್​ಚೆಕ್
भीड़ बुलाने के लिए खाने के पैकेट रखने पड़े  ಎಂಬ ಶೀರ್ಷಿಕೆಯನ್ನು ಫೇಸ್​ಬುಕ್​ನಲ್ಲಿ ಕಾಪಿ ಪೇಸ್ಟ್ ಮಾಡಿ ಹುಡುಕಿದಾಗ ಇದೇ ರೀತಿಯ ಹಲವಾರು ಪೋಸ್ಟ್ ಗಳು ಸಿಕ್ಕಿವೆ.

ಫೇಸ್​ಬುಕ್ ಪೋಸ್ಟ್

ವೈರಲ್ ಫೋಟೊದಲ್ಲಿರುವ ಖಾಲಿ ಕುರ್ಚಿಯ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಲೈವ್ ಹಿಂದೂಸ್ತಾನ್ ಟೈಮ್ಸ್ ಡಾಟ್ ಕಾಂನಲ್ಲಿ ಪ್ರಕಟವಾಗಿರುವ ಸುದ್ದಿ ಸಿಕ್ಕಿದೆ. ಈ ಸುದ್ದಿಯ ಪ್ರಕಾರ 2018ರಲ್ಲಿ ವಾರಣಾಸಿಯಲ್ಲಿ ನಡೆದ ‘ಯುವ ಉದ್ಘೋಷ್’ ಕಾರ್ಯಕ್ರಮದ ಫೋಟೊ ಇದಾಗಿದೆ. ಈ ಕಾರ್ಯಕ್ರಮವನ್ನು ಅಮಿತ್ ಶಾ ಉದ್ಘಾಟಿಸಿದ್ದು, ಆದಿತ್ಯನಾಥ ಮತ್ತು ಪಾಂಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಹಿಂದೂಸ್ತಾನ್ ಟೈಮ್ಸ್ ಡಾಟ್ ಕಾಂನಲ್ಲಿ ಪ್ರಕಟವಾಗಿರುವ ಸುದ್ದಿ

ಇದೇ ಕಾರ್ಯಕ್ರಮದ ಬಗ್ಗೆ ಅಮರ್ ಉಜಾಲಾ ಪತ್ರಿಕೆ ವರದಿ ಮಾಡಿದ್ದು, ಬಿಜೆಪಿ ಈ ಕಾರ್ಯಕ್ರಮಕ್ಕೆ 17,000 ಯುವ ಜನರು ಬರುತ್ತಾರೆ ಎಂದು ನಿರೀಕ್ಷಿಸಿತ್ತು. ಆದರೆ ಅಲ್ಲಿಗೆ ಬಂದದ್ದು 7000 ಮಂದಿ ಅಷ್ಟೇ ಎಂದು ಹೇಳಿದೆ . ಅಮಿತ್ ಶಾ ಅವರು ಯೋಗಿ ಮತ್ತು ಪಾಂಡೆ ಜತೆ ಕುಳಿತಿರುವ ಫೋಟೊ ಕೂಡಾ ಇದೇ ಕಾರ್ಯಕ್ರಮದ್ದಾಗಿದೆ.

ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಮತ್ತು ಆದಿತ್ಯನಾಥ ಮೊದಲಾದ ಬಿಜೆಪಿ ನಾಯಕರು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಆದರೆ ವೈರಲ್ ಪೋಸ್ಟ್ ನಲ್ಲಿ ಹೇಳಿರುವಂತೆ ಇದು ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದ ಫೋಟೊ ಅಲ್ಲ. 2008ರಲ್ಲಿ ವಾರಣಾಸಿಯಲ್ಲಿ ನಡೆದ ಯುವ ಉದ್ಘೋಷ್ ಕಾರ್ಯಕ್ರಮದ್ದಾಗಿದೆ.

ಇದನ್ನೂ ಓದಿ: Fact Check:ಕರ್ನಾಟಕದಲ್ಲಿ ಕೊವಿಡ್ ನಿರ್ಬಂಧ; ಸಾಮಾಜಿಕ ತಾಣದಲ್ಲಿ ವೈರಲ್ ಆಯ್ತು ಹಳೇ ವಿಡಿಯೊ