Fact Check | ‘ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ’ ವೈರಲ್ ಫೋಟೊ ವಾರಣಾಸಿಯದ್ದು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 21, 2020 | 7:27 PM

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದ ಚಿತ್ರ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊ ಎಲ್ಲಿಯದ್ದು? ಈ ಫೋಟೊದ ಫ್ಯಾಕ್ಟ್​​ಚೆಕ್ ಇಲ್ಲಿದೆ.

Fact Check | ‘ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮಮಂದಿರ ವೈರಲ್ ಫೋಟೊ ವಾರಣಾಸಿಯದ್ದು
Follow us on

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರ ಎಂಬ ಬರಹದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರವೊಂದು ವೈರಲ್ ಆಗಿದೆ. ವಾಸ್ತವವಾಗಿ ಈ ಚಿತ್ರ ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದ ಕಾರಿಡಾರ್ ಯೋಜನೆಯದ್ದು. ವೈರಲ್ ಚಿತ್ರದ ಬಗ್ಗೆ ಫ್ಯಾಕ್ಟ್​​ಚೆಕ್ ಮಾಡಿದ ಬೂಮ್ ಲೈವ್ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪದಾಧಿಕಾರಿಗಳ ಜತೆ ಮಾತನಾಡಿದ್ದು, ರಾಮಮಂದಿರದ ನಿರ್ಮಾಣ ಕಾರ್ಯ ಈಗಷ್ಟೇ ಶುರುವಾಗಿದೆ ಎಂದು ಅವರು ಹೇಳಿರುವುದಾಗಿ ವರದಿ ಮಾಡಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯ ಕಳೆದ ಆಗಸ್ಟ್ 5 ರಂದು ನಡೆದಿತ್ತು. ಆದರೆ ವೈರಲ್ ಆಗಿರುವ ಚಿತ್ರದಲ್ಲಿ ಮಂದಿರದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡ ರೀತಿಯಲ್ಲಿದೆ.

ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿರುವ ಫೋಟೊ

ಫ್ಯಾಕ್ಟ್​​ಚೆಕ್
ವೈರಲ್ ಆಗಿರುವ ದೇವಾಲಯದ ಚಿತ್ರವನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಹಲವಾರು ಸುದ್ದಿಗಳಲ್ಲಿ ಇದೇ ಫೋಟೊ ಬಳಸಲಾಗಿದೆ. ಕಳೆದ ಅಕ್ಟೋಬರ್ 20ರಂದು ಹಿಂದೂಸ್ತಾನ್ ಟೈಮ್ಸ್​​ನಲ್ಲಿ ಪ್ರಕಟವಾದ ಸುದ್ದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಶಿ ವಿಶ್ವನಾಥ ದೇವಾಲಯದ ಚಿತ್ರ ಬಳಸಲಾಗಿದೆ.

ಬೂಮ್ ತಂಡ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಸದಸ್ಯ ಅನಿಲ್ ಮಿಶ್ರಾ ಅವರನ್ನು ಮಾತನಾಡಿಸಿದಾಗ ರಾಮ ಮಂದಿರ ನಿರ್ಮಾಣ ಕಾರ್ಯ ಶುರುವಾಗಿದೆ. ಈಗ ಅಡಿಪಾಯದ ಕೆಲಸವಷ್ಟೇ ನಡೆಯುತ್ತಿದೆ ಎಂದಿದ್ದಾರೆ. ಪಂಜಾಬ್ ಕೇಸರಿ ಪತ್ರಿಕೆಯ ಸ್ಥಳೀಯ ವರದಿಗಾರ ಅಭಿಷೇಕ್ ಸಾವಂತ್ ಜತೆಯೂ ಬೂಮ್ ತಂಡ ಮಾತನಾಡಿಸಿದ್ದು, ಅಯೋಧ್ಯೆಯಲ್ಲಿ ಕಂಬಗಳನ್ನು ಈಗ ನಿಲ್ಲಿಸಲಾಗಿದೆ. ಮಂದಿರದ ನಿರ್ಮಾಣಕ್ಕೆ ಇನ್ನೂ ಸಮಯ ಬೇಕಾಗುತ್ತದೆ ಎಂದಿದ್ದಾರೆ.

ಈ ವೈರಲ್ ಫೋಟೊ ಬಗ್ಗೆ ಮಾಹಿತಿ ಕೋರಿದಾಗ ಸರ್ಕಾರ ಮತ್ತು ರಾಮ ಮಂದಿರದ ಸದಸ್ಯರನ್ನು ಹೊರತು ಪಡಿಸಿ ಯಾರೊಬ್ಬರಿಗೂ ದೇಗುಲ ನಿರ್ಮಾಣದ ಜಾಗಕ್ಕೆ ಪ್ರವೇಶವಿಲ್ಲ. ಮಾಧ್ಯಮಗಳಿಗೆ ಸರ್ಕಾರವೇ ಮಾಹಿತಿ ನೀಡುತ್ತದೆ. ರಾಮ ಮಂದಿರ ಟ್ರಸ್ಟ್​ನ ಟ್ವಿಟರ್ ಹ್ಯಾಂಡಲ್​ನಲ್ಲಿ ಅಕ್ಟೋಬರ್ 9ರಂದು ಮಂದಿರ ನಿರ್ಮಾಣ ಕೆಲಸದ ಕೆಲವು ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ. ಇದಾದನಂತರ ಯಾವುದೇ ಫೋಟೊಗಳನ್ನು ಅಪ್ ಡೇಟ್ ಮಾಡಿಲ್ಲ ಎಂಬ ಪ್ರತಿಕ್ರಿಯೆ ಸಿಕ್ಕಿದೆ.

Fact Check | ‘ಪಾಕ್ ಪತ್ರಕರ್ತ ಮೋದಿಯನ್ನು ವರ್ಣಿಸಿದ ರೀತಿ’ ಶೀರ್ಷಿಕೆಯ ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?