ನಕಲಿ ಲೇಡಿ IAS ಅಧಿಕಾರಿ‌ ಬಂಧನ.. ಎಲ್ಲಿ?

|

Updated on: Aug 11, 2020 | 9:25 AM

ಹೈದರಾಬಾದ್: ನಿವೃತ್ತ ಮಹಿಳಾ‌ ಐ.ಎ.ಎಸ್ ಅಧಿಕಾರಿ‌ ಹೆಸರಲ್ಲಿ ‌ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಟೂರು‌ ಜಿಲ್ಲಾ‌ ಮಂಗಳಗಿರಿ ಮೂಲದ‌ ಮಹಿಳೆ‌ ವಿಜಯಲಕ್ಷ್ಮಿ, ನಿವೃತ್ತ ಮಹಿಳಾ ಐ.ಎ.ಎಸ್‌ ಅಧಿಕಾರಿ‌ ಸುಜಾತಾರಾವ್‌ ಹೆಸರಲ್ಲಿ ವಂಚಿಸುತ್ತಿದ್ದಳು. ವಿಜಯಲಕ್ಷ್ಮಿ ವಿರುದ್ದ 419, 420 34 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ವಿಜಯಲಕ್ಷ್ಮಿ ಕೃಷ್ಣ ಜಿಲ್ಲೆಯ ವಿಜಯವಾಡದ ದುಟ್ಟಾ ರವಿಶಂಕರ್ ಎನ್ನುವವರ ಆಸ್ಪತ್ರೆಗೆ ಹೋಗಿ ಮಹಿಳಾ ಐ.ಎ.ಎಸ್ ಅಧಿಕಾರಿ ಎಂದು ಹೇಳಿ‌ ಬೆದರಿಸಿ ಲಂಚ ಕೇಳಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಅನುಮಾನಗೊಂಡ ಆಸ್ಪತ್ರೆಯವರು […]

ನಕಲಿ ಲೇಡಿ IAS ಅಧಿಕಾರಿ‌ ಬಂಧನ.. ಎಲ್ಲಿ?
Follow us on

ಹೈದರಾಬಾದ್: ನಿವೃತ್ತ ಮಹಿಳಾ‌ ಐ.ಎ.ಎಸ್ ಅಧಿಕಾರಿ‌ ಹೆಸರಲ್ಲಿ ‌ವಂಚಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಟೂರು‌ ಜಿಲ್ಲಾ‌ ಮಂಗಳಗಿರಿ ಮೂಲದ‌ ಮಹಿಳೆ‌ ವಿಜಯಲಕ್ಷ್ಮಿ, ನಿವೃತ್ತ ಮಹಿಳಾ ಐ.ಎ.ಎಸ್‌ ಅಧಿಕಾರಿ‌ ಸುಜಾತಾರಾವ್‌ ಹೆಸರಲ್ಲಿ ವಂಚಿಸುತ್ತಿದ್ದಳು.

ವಿಜಯಲಕ್ಷ್ಮಿ ವಿರುದ್ದ 419, 420 34 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ವಿಜಯಲಕ್ಷ್ಮಿ ಕೃಷ್ಣ ಜಿಲ್ಲೆಯ ವಿಜಯವಾಡದ ದುಟ್ಟಾ ರವಿಶಂಕರ್ ಎನ್ನುವವರ ಆಸ್ಪತ್ರೆಗೆ ಹೋಗಿ ಮಹಿಳಾ ಐ.ಎ.ಎಸ್ ಅಧಿಕಾರಿ ಎಂದು ಹೇಳಿ‌ ಬೆದರಿಸಿ ಲಂಚ ಕೇಳಿದ್ದಳು ಎಂಬ ಆರೋಪ ಕೇಳಿ ಬಂದಿದೆ. ಅನುಮಾನಗೊಂಡ ಆಸ್ಪತ್ರೆಯವರು ಮಹಿಳಾ ಐ.ಎ.ಎಸ್. ಅಧಿಕಾರಿ ಸುಜಾತಾರಾವ್​ ಜೊತೆ ಮಾತನಾಡಿದಾಗ ವಂಚನೆ ಬಯಲಾಗಿದೆ. ಹನುಮಾನ್ ಜಂಕ್ಷನ್‌ ಪೊಲೀಸರಿಂದ ಪ್ರಕರಣ ದಾಖಲಾಗಿದ್ದು, ಮಹಿಳೆ‌ಯನ್ನು ಬಂಧಿಸಲಾಗಿದೆ.

Published On - 9:22 am, Tue, 11 August 20