ಪಾಪಿಗಳು ಉಪ್ಪಿಗೂ ಕಲಬೆರಕೆ ಮಾಡ್ತಿದ್ದಾರೆ! ನಕಲಿ ಘಟಕದ ಮೇಲೆ ಪೊಲೀಸರ ದಾಳಿ

ನವದೆಹಲಿ: ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಅಂತಾ ಕೇಳಿದ್ವಿ. ಆದ್ರೆ ಖದೀಮರು ನಕಲಿ ಉಪ್ಪು ತಯಾರಿಸಿ ಕಂಬಿ ಹಿಂದೆ ಹೋದ ಘಟನೆ ದೆಹಲಿಯಲ್ಲಿ ನಡೆದಿದೆ. ಹೌದು ಅಸಲಿ ಉಪ್ಪಿನ ತಲೆ ಮೇಲೆ ಹೊಡೆಯುವಂತೆ ನಕಲಿ ಉಪ್ಪು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನ ದೆಹಲಿ ಪೊಲೀಸರು ಬೇಧಿಸಿದ್ದಾರೆ. ದೆಹಲಿಯ ಪ್ರಹ್ಲಾದ್‌ಪುರ್‌ ಬಂಗಾರ್‌ ಏರಿಯಾದಲ್ಲಿ ಈ ನಕಲಿ ಉಪ್ಪನ್ನು ತಯಾರಿಸಲಾಗುತ್ತಿತ್ತು. ಅದೂ ಅಂತಿಂಥ ಉಪ್ಪಲ್ಲ ಪಕ್ಕಾ ಬ್ರಾಂಡೆಡ್‌ ಟಾಟಾ ಉಪ್ಪು. ಆದ್ರೆ ಸಿಕ್ಕ ಸುಳಿವಿನ ಮೇಲೆ ನಕಲಿ […]

ಪಾಪಿಗಳು ಉಪ್ಪಿಗೂ ಕಲಬೆರಕೆ ಮಾಡ್ತಿದ್ದಾರೆ! ನಕಲಿ ಘಟಕದ ಮೇಲೆ ಪೊಲೀಸರ ದಾಳಿ

Updated on: Jul 03, 2020 | 2:44 PM

ನವದೆಹಲಿ: ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಅಂತಾ ಕೇಳಿದ್ವಿ. ಆದ್ರೆ ಖದೀಮರು ನಕಲಿ ಉಪ್ಪು ತಯಾರಿಸಿ ಕಂಬಿ ಹಿಂದೆ ಹೋದ ಘಟನೆ ದೆಹಲಿಯಲ್ಲಿ ನಡೆದಿದೆ.

ಹೌದು ಅಸಲಿ ಉಪ್ಪಿನ ತಲೆ ಮೇಲೆ ಹೊಡೆಯುವಂತೆ ನಕಲಿ ಉಪ್ಪು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನ ದೆಹಲಿ ಪೊಲೀಸರು ಬೇಧಿಸಿದ್ದಾರೆ. ದೆಹಲಿಯ ಪ್ರಹ್ಲಾದ್‌ಪುರ್‌ ಬಂಗಾರ್‌ ಏರಿಯಾದಲ್ಲಿ ಈ ನಕಲಿ ಉಪ್ಪನ್ನು ತಯಾರಿಸಲಾಗುತ್ತಿತ್ತು. ಅದೂ ಅಂತಿಂಥ ಉಪ್ಪಲ್ಲ ಪಕ್ಕಾ ಬ್ರಾಂಡೆಡ್‌ ಟಾಟಾ ಉಪ್ಪು.

ಆದ್ರೆ ಸಿಕ್ಕ ಸುಳಿವಿನ ಮೇಲೆ ನಕಲಿ ಉಪ್ಪು ತಯಾರಿಕಾ ಘಟಕದ ಮೇಲೆ ದಾಳಿ ಮಾಡಿರುವ ಪೊಲೀಸರು, ಮಾಲೀಕನನ್ನ ಬಂಧಿಸಿ ಕಂಬಿ ಹಿಂದೆ ಹಾಕಿದ್ದಾರೆ. ಇಷ್ಟೇ ಅಲ್ಲ ಆತ ಮತ್ತು ಆತನ ಸಹಚರರ ಮೇಲೆ ಕಾಪಿರೈಟ್‌ ಉಲ್ಲಂಘನೆಯ ಕ್ರಿಮಿನಲ್‌ ಕೇಸ್‌ ಜಡಿದಿದ್ದಾರೆ.

Published On - 11:40 am, Fri, 3 July 20