ಭಾರತೀಯ ರೈಲ್ವೆ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಪ್ಲ್ಯಾನ್
ದೆಹಲಿ: ಖಾಸಗಿ ಬಸ್.. ಖಾಸಗಿ ಟ್ಯಾಕ್ಸಿ.. ಖಾಸಗಿ ವಿಮಾನ ಕೇಳಿದ್ವಿ. ಆದ್ರೆ ದೇಶದಲ್ಲಿ ಇನ್ಮುಂದೆ ಪ್ರೈವೇಟ್ ಟ್ರೈನ್ಗಳು ಹಳಿ ಮೇಲೆ ಹೆಜ್ಜೆ ಇಡಲಿದೆ. ಭಾರತೀಯ ರೈಲ್ವೆಯನ್ನ ಖಾಸಗೀಕರಣ ಮಾಡೋಕೆ ಪ್ರಧಾನಿ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2023ರ ಹೊತ್ತಿಗೆ ಖಾಸಗಿ ರೈಲುಗಳ ಹಳಿ ಮೇಳೆ ಹೆಜ್ಜೆ ಇಡಲಿವೆ. ಆರಂಭಿಕ ಹಂತದಲ್ಲಿ 109 ರೈಲು ಮಾರ್ಗಗಳ ಖಾಸಗೀಕರಣ! ಯೆಸ್.. ಭಾರತದಲ್ಲಿ ಲಕ್ಷಾಂತರ ಮಂದಿ ರೈಲ್ವೆ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಒಂದೂರಿನಿಂದ ಮತ್ತೊಂದೂರಿಗೆ ಬೋಗಿಗಳು ಸಂಪರ್ಕ […]
ದೆಹಲಿ: ಖಾಸಗಿ ಬಸ್.. ಖಾಸಗಿ ಟ್ಯಾಕ್ಸಿ.. ಖಾಸಗಿ ವಿಮಾನ ಕೇಳಿದ್ವಿ. ಆದ್ರೆ ದೇಶದಲ್ಲಿ ಇನ್ಮುಂದೆ ಪ್ರೈವೇಟ್ ಟ್ರೈನ್ಗಳು ಹಳಿ ಮೇಲೆ ಹೆಜ್ಜೆ ಇಡಲಿದೆ. ಭಾರತೀಯ ರೈಲ್ವೆಯನ್ನ ಖಾಸಗೀಕರಣ ಮಾಡೋಕೆ ಪ್ರಧಾನಿ ಮೋದಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2023ರ ಹೊತ್ತಿಗೆ ಖಾಸಗಿ ರೈಲುಗಳ ಹಳಿ ಮೇಳೆ ಹೆಜ್ಜೆ ಇಡಲಿವೆ.
ಆರಂಭಿಕ ಹಂತದಲ್ಲಿ 109 ರೈಲು ಮಾರ್ಗಗಳ ಖಾಸಗೀಕರಣ! ಯೆಸ್.. ಭಾರತದಲ್ಲಿ ಲಕ್ಷಾಂತರ ಮಂದಿ ರೈಲ್ವೆ ಪ್ರಯಾಣವನ್ನೇ ನೆಚ್ಚಿಕೊಂಡಿದ್ದಾರೆ. ಒಂದೂರಿನಿಂದ ಮತ್ತೊಂದೂರಿಗೆ ಬೋಗಿಗಳು ಸಂಪರ್ಕ ಕೊಂಡಿಯಾಗಿವೆ. ಇದೀಗ ಭಾರತೀಯ ರೈಲ್ವೆಯನ್ನ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಖಾಸಗಿ ಕಂಪನಿಗಳಿಂದ ರೈಲು ಮಾರ್ಗಗಳ ನಿರ್ವಹಣೆಗೆ ಬಿಡ್ಡಿಂಗ್ ಕೂಡ ಆಹ್ವಾನಿಸಿದೆ. 2021ರ ಫೆಬ್ರವರಿ, ಮಾರ್ಚ್ನಲ್ಲಿ ಆರ್ಥಿಕ ಬಿಡ್ ನಡೆಯಲಿದ್ದು ಏಪ್ರಿಲ್ನಲ್ಲಿ ಫೈನಲ್ ಆಗೋ ನಿರೀಕ್ಷೆ ಇದೆ. ರೈಲ್ವೆ ಖಾಸಗೀಕರಣದಿಂದ ಕೇಂದ್ರದ ಬೊಕ್ಕಸಕ್ಕೆ ಬರೋಬ್ಬರಿ 30 ಸಾವಿರ ಕೋಟಿ ಹರಿದು ಬರೋ ನಿರೀಕ್ಷೆ ಇದೆ.
ಇನ್ನೊಂದು ಮಹತ್ವದ ಅಂಶ ಅಂದ್ರೆ, ದೇಶದಲ್ಲಿ ಪ್ರಯಾಣಿಕರ ರೈಲುಗಳನ್ನ ಸಂಪೂರ್ಣವಾಗಿ ಖಾಸಗೀಕರಣ ಮಾಡ್ತಿಲ್ಲ. ಆರಂಭಿಕ ಹಂತದಲ್ಲಿ 109 ರೈಲ್ವೆ ಮಾರ್ಗದಲ್ಲಿ 151 ರೈಲುಗಳನ್ನು ಮಾತ್ರ ಖಾಸಗಿ ಕಂಪನಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಹಾಗಿದ್ರೆ ಖಾಸಗಿ ಕಂಪನಿಗಳು ಏನೇನ್ ರೂಲ್ಸ್ ಪಾಲಿಸ್ಬೇಕು ಅನ್ನೋದಾದ್ರೆ.
ಖಾಸಗಿ ಕಂಪನಿಗಳಿಗೆ ರೂಲ್ಸ್ ಈ ಖಾಸಗಿ ರೈಲುಗಳು ಬೆಂಗಳೂರು, ಚಂಡೀಗಢ, ದೆಹಲಿ, ಜೈಪುರ, ಪ್ರಯಾಗ್ ರಾಜ್, ಮುಂಬೈ, ಪಾಟ್ನಾ, ಸಿಕಂದರಾಬಾದ್ ಹಾಗೂ ಚೆನ್ನೈನಲ್ಲಿ ಸಂಚಾರ ನಡೆಸಲಿವೆ. ಅದ್ರಲ್ಲೂ ಹಲವು ರೂಲ್ಸ್ಗಳನ್ನ ಜಾರಿಗೆ ತರಲಾಗಿದ್ದು ಖಾಸಗಿ ರೈಲುಗಳು ಶೇಕಡಾ 95 ರಷ್ಟು ಸಮಯ ಪಾಲನೆ ಅಗತ್ಯ ಇಲ್ಲದಿದ್ದರೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ಅಲ್ಲದೇ, ಖಾಸಗಿ ಕಂಪನಿಗಳು ಭಾರತದಲ್ಲೇ ರೈಲುಗಳನ್ನು ಉತ್ಪಾದಿಸಬೇಕು, ಒಂದು ಖಾಸಗಿ ರೈಲು ಕನಿಷ್ಠ 16 ಕೋಚ್‌ಗಳನ್ನು ಹೊಂದಿರಬೇಕು ಎಂದು ನಿಯಮ ತರಲು ಪ್ಲ್ಯಾನ್ ಮಾಡಲಾಗಿದೆ.
ಇದರ ಜೊತೆಗೆ ಖಾಸಗಿ ರೈಲು ಗರಿಷ್ಠ ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸಬೇಕು ಅಂತಲೂ ರೂಲ್ಸ್ ತರೋಕೆ ಕೇಂದ್ರ ರೈಲ್ವೆ ಇಲಾಖೆ ನಿರ್ಧರಿಸಿದೆ. ಅಲ್ಲದೇ, 35 ವರ್ಷಗಳ ಅವಧಿಗೆ ರೈಲು ಮಾರ್ಗ ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತೆ. ಇನ್ನು ಖಾಸಗಿ ರೈಲುಗಳಿಗೆ ರೈಲ್ವೆ ಇಲಾಖೆ ಚಾಲಕ, ಗಾರ್ಡ್ಗಳನ್ನ ನೀಡಲಿದ್ದು, ಇದನ್ನು ಹೊರತುಪಡಿಸಿದರೆ ಇನ್ನುಳಿದೆಲ್ಲವನ್ನೂ ಆಯಾ ಕಂಪನಿಯೇ ನಿರ್ವಹಿಸಬೇಕು ಅಂತಲೂ ಹೇಳಲಾಗಿದೆ. ಇನ್ನು, ಟಿಕೆಟ್, ಆಹಾರ, ಹೌಸ್ ಕೀಪಿಂಗ್ ಜವಾಬ್ದಾರಿ ಖಾಸಗಿ ಕಂಪನಿ ಹೊಣೆ ಹಾಗೂ ಇಂಧನ, ಕಲ್ಲಿದ್ದಲು, ವಿದ್ಯುತ್ ಶುಲ್ಕವನ್ನ ಬಳಸಿದ ಲೆಕ್ಕದ ಆಧಾರದಲ್ಲಿ ಕೇಂದ್ರ ಸರ್ಕಾರಕ್ಕೆ ಭರಿಸುವಂತೆ ರೂಲ್ಸ್ ತರೋಕೆ ಪ್ಲ್ಯಾನ್ ರೆಡಿಯಾಗಿದೆ.
ಇದೆಲ್ಲದರ ನಡುವೆ ರೈಲು ಖಾಸಗೀಕರಣದಿಂದ ರೈಲ್ವೆ ಪ್ರಯಾಣದ ದರ ಹೆಚ್ಚಳವಾಗೋ ಭೀತಿ ಕೂಡ ಎದುರಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ವಿಪಕ್ಷಗಳು ಟೀಕಾಸ್ತ್ರ ಪ್ರಯೋಗಿಸಿವೆ. ರೈಲು ಬಡವರ ಲೈಫ್ಲೈನ್. ಕೇಂದ್ರ ಸರ್ಕಾರ ಅದನ್ನೂ ಬಡವರಿಂದ ಕಿತ್ತುಕೊಳ್ಳುತ್ತಿದೆ ಅಂತ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಒಟ್ನಲ್ಲಿ ರೈಲ್ವೆ ಖಾಸಗೀಕರಣದ ನಿರ್ಧಾರ ಮುಂದೆ ರಾಜಕೀಯ ಜಟಾಪಟಿಗೆ ಕಾರಣವಾಗುತ್ತಾ ಕಾದು ನೋಡ್ಬೇಕು.