Rajasthan: ಹೆಲಿಕಾಪ್ಟರ್‌ನ ಶಬ್ದದಿಂದ ನನ್ನ ಎಮ್ಮೆ ಸಾವನ್ನಪ್ಪಿದೆ ಶಾಸಕನ ವಿರುದ್ಧ ದೂರು ನೀಡಿದ ರೈತ

ರಾಜಸ್ಥಾನದ ಅಲ್ವಾರ್‌ನಲ್ಲಿ ರೈತರೊಬ್ಬರು ಹೆಲಿಕಾಪ್ಟರ್‌ನ ಶಬ್ದದ ಪರಿಣಾಮ ಹೃದಯಾಘಾತದಿಂದ ತನ್ನ ಎಮ್ಮೆ ಸಾವನ್ನಪ್ಪಿದೆ ಎಂದು ಶಾಸಕರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

Rajasthan: ಹೆಲಿಕಾಪ್ಟರ್‌ನ ಶಬ್ದದಿಂದ ನನ್ನ ಎಮ್ಮೆ ಸಾವನ್ನಪ್ಪಿದೆ ಶಾಸಕನ ವಿರುದ್ಧ ದೂರು ನೀಡಿದ ರೈತ
Farmer complains against MLA that my buffalo died due to the sound of helicopter
Updated By: ಅಕ್ಷಯ್​ ಪಲ್ಲಮಜಲು​​

Updated on: Nov 15, 2022 | 7:17 PM

ರಾಜಸ್ಥಾನ: ಹೆಲಿಕಾಪ್ಟರ್‌ನ ಶಬ್ದದಿಂದ ತನ್ನ ಎಮ್ಮೆ ಸಾವನ್ನಪ್ಪಿದೆ ಎಂದು ರೈತನೊಬ್ಬ ಶಾಸಕನ ವಿರುದ್ಧ ದೂರು ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್‌ನಲ್ಲಿ ರೈತರೊಬ್ಬರು ಹೆಲಿಕಾಪ್ಟರ್‌ನ ಶಬ್ದದ ಪರಿಣಾಮ ಹೃದಯಾಘಾತದಿಂದ ತನ್ನ ಎಮ್ಮೆ ಸಾವನ್ನಪ್ಪಿದೆ ಎಂದು ಶಾಸಕರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಸಕ ಬಲ್ಜೀತ್ ಯಾದವ್ ಅವರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಲು ಅವರ ಬೆಂಬಲಿಗರು ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದರು.

ಘಟನೆಯ ನಂತರ, ರೈತ ಪೊಲೀಸರಿಗೆ ದೂರು ನೀಡಿದ್ದು, ಚಾಪರ್‌ನ ಶಬ್ದದಿಂದ ಗಾಬರಿಗೊಂಡು ತನ್ನ ಎಮ್ಮೆ ಸಾವನ್ನಪ್ಪಿದೆ ಎಂದು ಆರೋಪಿಸಿದ್ದಾನೆ. ಎಮ್ಮೆ 1.5 ಲಕ್ಷ ರೂಪಾಯಿ ಮೌಲ್ಯದ್ದಾಗಿತ್ತು. ಈ ಬಗ್ಗೆ ರೈತ ಪೊಲೀಸರಿಗೆ ದೂರು ನೀಡಿದ್ದಾರೆ.

Published On - 7:17 pm, Tue, 15 November 22