Visit to Rashtrapati Bhavan ಫೆಬ್ರವರಿ 6ರಿಂದ ಸಾರ್ವಜನಿಕರ ಭೇಟಿಗೆ ತೆರೆದುಕೊಳ್ಳಲಿದೆ ರಾಷ್ಟ್ರಪತಿ ಭವನ

| Updated By: ಸಾಧು ಶ್ರೀನಾಥ್​

Updated on: Feb 02, 2021 | 10:25 AM

ಫೆಬ್ರವರಿ 6ರಿಂದ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ವೆಬ್​ಸೈಟ್​ ಮೂಲಕ ಭವನಕ್ಕೆ ಪ್ರವೇಶಿಸುವ ಸಮಯವನ್ನು ನಿಗದಿ ಮಾಡಿಕೊಳ್ಳಬಹುದಾಗಿದೆ.

Visit to Rashtrapati Bhavan ಫೆಬ್ರವರಿ 6ರಿಂದ ಸಾರ್ವಜನಿಕರ ಭೇಟಿಗೆ ತೆರೆದುಕೊಳ್ಳಲಿದೆ ರಾಷ್ಟ್ರಪತಿ ಭವನ
ರಾಷ್ಟ್ರಪತಿ ಭವನ
Follow us on

ಬೆಂಗಳೂರು: ಹತ್ತು ತಿಂಗಳ ಕೊರೊನಾ ಹಾವಳಿ ಬಳಿಕ ಫೆಬ್ರವರಿ 6ರಿಂದ ರಾಷ್ಟ್ರಪತಿ ಭವನಕ್ಕೆ ಸಾರ್ವಜನಿಕ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ರಾಷ್ಟ್ರಪತಿ ಭವನದ ವೆಬ್​ಸೈಟ್​ ಮೂಲಕ ಭೇಟಿ ಸಮಯ ನಿಗದಿ ಮಾಡಿಕೊಳ್ಳಬಹುದಾಗಿದೆ.

ಕೊವಿಡ್​ ಹಿನ್ನೆಲೆಯಲ್ಲಿ ಮಾರ್ಚ್​ 13ರಿಂದ ಸಾರ್ವಜನಿಕರಿಗೆ Visit to Rashtrapati Bhavan ಅವಕಾಶ ಸ್ಥಗಿತಗೊಳಿಸಲಾಗಿತ್ತು. ಇದೀಗ ವಾರಾಂತ್ಯ ಸರ್ಕಾರಿ ರಜೆ ಹೊರತುಪಡಿಸಿ ಶನಿವಾರ, ಭಾನುವಾರದಂದು ರಾಷ್ಟ್ರಪತಿ  ಭವನವನ್ನು ತೆರೆಯಲಾಗುತ್ತದೆ. ಸಾರ್ವಜನಿಕರು ವೆಬ್​ಸೈಟ್​ ಮೂಲಕ ಸಮಯ ನಿಗದಿ ಮಾಡಿಕೊಳ್ಳಬಹುದು.

Budget 2021 Explainer | ಬಜೆಟ್ ಅರ್ಥವಾಗಲು ಇವಿಷ್ಟೂ ಪದಗಳ ವಿವರ ನಿಮಗೆ ಗೊತ್ತಿರಬೇಕು