ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ನಿರಂತರವಾಗಿ ಚೀತಾಗಳು ಸಾವನ್ನಪ್ಪುತ್ತಿವೆ. ಆಫ್ರಿಕಾದಿಂದ ತಂದ ಕೆಲವು ಹೆಣ್ಣು ಚಿರತೆಗಳಲ್ಲಿ ಧಾತ್ರಿ ಕೂಡ ಒಂದು ಅದು ಕೂಡ ಶವವಾಗಿ ಪತ್ತೆಯಾಗಿದೆ ಎಂದು ಬುಧವಾರ ಅಧಿಕೃತ ಪ್ರಕಟಣೆ ತಿಳಿಸಿದೆ. ಸಾವಿಗೆ ಕಾರಣ ತಿಳಿಯಲು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಾಕಿರುವ 14 ಚೀತಾಗಳು (7 ಗಂಡು, 6 ಹೆಣ್ಣು ಮತ್ತು ಒಂದು ಮರಿ) ಆರೋಗ್ಯವಾಗಿವೆ ಎಂದು ಹೇಳಿಕೆ ತಿಳಿಸಿದೆ. ಕುನೋ ವನ್ಯಜೀವಿ ವೈದ್ಯರ ತಂಡ ಮತ್ತು ನಮೀಬಿಯಾದ ತಜ್ಞರು ಚೀತಾಗಳ ಆರೋಗ್ಯವನ್ನು ನಿರಂತರವಾಗಿ ಪರೀಕ್ಷಿಸುತ್ತಿದ್ದಾರೆ.
ಈ ಹಿಂದೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳು ಉಳಿಯುತ್ತವೆ ಎಂದು ಹೇಳಿದ್ದರು. ಅಂತಾರಾಷ್ಟ್ರೀಯ ತಜ್ಞರು ಸೇರಿದಂತೆ ತಜ್ಞರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದ್ದರು. ನಮ್ಮ ತಂಡ ಅಲ್ಲಿಗೆ ಭೇಟಿ ನೀಡಲಿದೆ. ಚೀತಾಗಳನ್ನು ಸ್ಥಳಾಂತರಿಸಲಾಗುವುದಿಲ್ಲ ಮತ್ತು ಕುನೋದಲ್ಲಿಯೇ ಇರುತ್ತದೆ.
ಮತ್ತಷ್ಟು ಓದಿ: ಕುನೋ ಉದ್ಯಾನವನದಲ್ಲಿ ಗಂಡು ಚೀತಾ ಸಾವು; 4 ತಿಂಗಳಲ್ಲಿ ಸತ್ತಿದ್ದು 7 ಚೀತಾ
ಕಳೆದ ಎರಡು ದಿನಗಳಿಂದ ಈ ಚೀತಾವಿರುವ ಸ್ಥಳ ಪತ್ತೆಯಾಗಿರಲಿಲ್ಲ, ಕುನೋದಲ್ಲಿ ಇಲ್ಲಿಯವರೆಗೆ 8 ಚೀತಾಗಳು ಸಾವನ್ನಪ್ಪಿವೆ. 14 ಚೀತಾಗಳು ಹಾಗೂ ಒಂದು ಮರಿ ಜೀವಂತವಾಗಿದ್ದು, ಅದರಲ್ಲಿ ಒಂದು ಚೀತಾ ನಿರ್ವಾ ಅರಣ್ಯದಲ್ಲಿದೆ.
ಕುನೋ ಪ್ರಕಾರ, ಕಾಡಿನಲ್ಲಿ ಹೊರಗೆ ತಿರುಗುತ್ತಿರುವ 2 ಹೆಣ್ಣು ಚೀತಾಗಳನ್ನು ನಮೀಬಿಯಾದ ತಜ್ಞರು ಮತ್ತು ಕುನೋ ವನ್ಯಜೀವಿ ವೈದ್ಯರು ಮತ್ತು ನಿರ್ವಹಣಾ ತಂಡವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ