ದೆಹಲಿ: ಆಗಸ್ಟ್ 31ರವರೆಗೆ ಕೊವಿಡ್ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಉಪಕರಣಗಳ ಆಮದಿನ ಮೇಲೆ ಜಿಎಸ್‌ಟಿ ವಿನಾಯತಿ ನೀಡಲು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ 43ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬ್ಲ್ಯಾಕ್ ಫಂಗಸ್‌ಗೆ ನೀಡುವ ಔಷಧಕ್ಕೂ ಜಿಎಸ್‌ಟಿ ವಿನಾಯತಿ ಘೋಷಿಸಲಾಗಿದೆ.
ಜಿಎಸ್‌ಟಿ ಮಂಡಳಿಯ ಸಭೆ ಮುಗಿಸಿದ ನಂತರ ಸ್ವತಃ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
FM Smt @nsitharaman is chairing the 43rd GST Council meeting in the presence of MoS @ianuragthakur via video conferencing in New Delhi.
Finance Ministers of States & UTs and Senior officers from Union Government & States are also present in the meeting. pic.twitter.com/qMRVyFZCWi
— Office of Mr. Anurag Thakur (@Anurag_Office) May 28, 2021
ಜನರು ಮೊದಲೇ ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಾಕ್ಡೌನ್ನಿಂದ ಜನರ ದುಡಿಮೆ, ಸಂಪಾದನೆಗೂ ಹೊಡೆತ ಬಿದ್ದಿದೆ. ಕೊರೊನಾದಿಂದ ಜೀವ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇಂಥ ಸ್ಥಿತಿಯಲ್ಲಿ ಜೀವ ಉಳಿಸುವ ಔಷಧಿಗಳು, ಕೊರೊನಾ ಲಸಿಕೆ, ವೆಂಟಿಲೇಟರ್ಗಳ ಮೇಲೆಲ್ಲಾ ಜಿಎಸ್‌ಟಿ ವಿಧಿಸಿ ತೆರಿಗೆ ಸಂಗ್ರಹಿಸುವುದು ಎಷ್ಟು ಸರಿ ಎಂಬ ಚರ್ಚೆಗಳು ನಡೆಯುತ್ತಿವೆ. ಹೀಗಾಗಿ ಈಗ ಕೊರೊನಾ ಲಸಿಕೆ, ಔಷಧಿಗಳ ಮೇಲೆ ಜಿಎಸ್‌ಟಿ ಇರಬೇಕೇ ಬೇಡವೇ? ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಜಿಎಸ್‌ಟಿ ಮಂಡಳಿಯ ಸಭೆ ಕರೆಯಲಾಗಿತ್ತು. ಜಿಎಸ್‌ಟಿ ಬಗ್ಗೆ ಈ ಸಭೆಯಲ್ಲಿ ಕೈಗೊಂಡ ತೀರ್ಮಾನವೇ ಅಂತಿಮ. ಹೀಗಾಗಿ ಇಂದು (ಮೇ 28) ಶುಕ್ರವಾರ ನಡೆಯುವ ಜಿಎಸ್‌ಟಿ ಮಂಡಳಿ ಸಭೆ ಮಹತ್ವ ಪಡೆದುಕೊಂಡಿತ್ತು. ರಾಜ್ಯ ಸರ್ಕಾರಗಳ ಒತ್ತಾಯದ ಮೇರೆಗೆ 7 ತಿಂಗಳ ಬಳಿಕ ಜಿಎಸ್‌ಟಿ ಮಂಡಳಿಯ ಸಭೆಯನ್ನು ಕರೆಯಲಾಗಿದೆ. ಜಿಎಸ್‌ಟಿ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಹಿಸುವರು. ಕೇಂದ್ರದ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಎಲ್ಲ ರಾಜ್ಯದ ಹಣಕಾಸು ಸಚಿವರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಹಳ್ಳಿಗಳಲ್ಲಿ ಕೊವಿಡ್ ಕಡಿಮೆ ಮಾಡಲು ಹೆಚ್ಚಿನ ಗಮನ ಕೊಡಿ; ಸಿಎಂ ಯಡಿಯೂರಪ್ಪ ಸೂಚನೆ
ಸ್ವಂತ ಖರ್ಚಿನಲ್ಲಿ ಕೊವಿಡ್ ಲಸಿಕೆ ಪೂರೈಸಲು ತೀರ್ಮಾನಿಸಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ
Finance minister Nirmala Sitharaman anounce GST cut on Covid essentials)
Published On - 9:28 pm, Fri, 28 May 21