ಸ್ವಂತ ಖರ್ಚಿನಲ್ಲಿ ಕೊವಿಡ್ ಲಸಿಕೆ ಪೂರೈಸಲು ತೀರ್ಮಾನಿಸಿದ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ
ಮುಂದಿನ 2ರಿಂದ 3 ದಿನಗಳಲ್ಲಿ 1 ಸಾವಿರ ವಯಲ್ ದಾವಣಗೆರೆಗೆ ಆಗಮಿಸಲಿದ್ದು, ಹಂತ ಹಂತವಾಗಿ ಲಸಿಕೆ ವ್ಯವಸ್ಥೆಗೆ ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ತೀರ್ಮಾನಿಸಿದ್ದಾರೆ.
ದಾವಣಗೆರೆ: ಜಿಲ್ಲೆಯಲ್ಲಿ ಸ್ವಂತ ಖರ್ಚಿನಲ್ಲಿ ಲಸಿಕೆ ವಿತರಣೆ ಮಾಡಲು ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ನಿರ್ಧರಿಸಿದ್ದಾರೆ. ಕೊವ್ಯಾಕ್ಸಿನ್ ಲಸಿಕೆಯ 50 ಸಾವಿರ ವಯಲ್ ಪೂರೈಕೆಗೆ ಭಾರತ್ ಬಯೋಟೆಕ್ ಕಂಪನಿಗೆ ಮನವಿ ಮಾಡಲಾಗಿದ್ದು, 40 ಸಾವಿರ ವಯಲ್ ಪೂರೈಸಲು ಕಂಪನಿ ಒಪ್ಪಿಕೊಂಡಿದೆ. ಮುಂದಿನ 2ರಿಂದ 3 ದಿನಗಳಲ್ಲಿ 1 ಸಾವಿರ ವಯಲ್ ದಾವಣಗೆರೆಗೆ ಆಗಮಿಸಲಿದ್ದು, ಹಂತ ಹಂತವಾಗಿ ಲಸಿಕೆ ವ್ಯವಸ್ಥೆಗೆ ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ತೀರ್ಮಾನಿಸಿದ್ದಾರೆ. ಸದ್ಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಹಾಕಿಕೊಂಡಿರುವ ಯೋಜನೆಯ ಪ್ರಕಾರ 10 ಸಾವಿರ ಜನರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.
ಕರ್ನಾಟಕದಲ್ಲಿ ಇಂದು ಒಂದೇ ದಿನ 22,823 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 52,253 ಜನರು ಕೊವಿಡ್ನಿಂದ ಗುಣಮುಖರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 5736 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇಂದು ಒಂದೇ ದಿನ 31,237 ಜನ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ರಾಜ್ಯದಲ್ಲಿ ಇಂದು ಒಂದೇ ದಿನ ಇದೇ ಅವಧಿಯಲ್ಲಿ 1,38,983 ಜನರಿಗೆ ಕೊವಿಡ್ ಪರೀಕ್ಷೆ ನಡೆಸಲಾಗಿದೆ. ಬೆಂಗಳೂರಲ್ಲಿ ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.16.42ರಷ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4 ಲಕ್ಷ ಒಳಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಾಕಿ ಹಣ ಪಾವತಿಸಿಲ್ಲ ಎಂದು ಕೊವಿಡ್ ಸೋಂಕಿತರ ಮೃತದೇಹ ಹಸ್ತಾಂತರಿಸಲು ತೊಂದರೆ ಮಾಡುವಂತಿಲ್ಲ
ಬಾಕಿ ಇರುವ ಚಿಕಿತ್ಸಾ ಶುಲ್ಕವನ್ನು ಪಾವತಿ ಮಾಡದ ಕಾರಣ ನೀಡಿ ಕೋವಿಡ್ ಸೋಂಕಿತರ ಮೃತ ದೇಹವನ್ನು ಹಸ್ತಾಂತರಿಸುವಲ್ಲಿ ಆಸ್ಪತ್ರೆಗಳು ವಿಳಂಬ ಮಾಡುವಂತಿಲ್ಲ ಅಥವಾ ನಿರಾಕರಿಸುವಂತಿಲ್ಲ ಎಂದು ಉಪಮುಖ್ಯಮಂತ್ರಿ ಸಿ.ಎನ್. ಅಶ್ವತ್ಥ್ ನಾರಾಯಣ ಸರ್ಕಾರಿ ಆದೇಶವನ್ನು ಟ್ವೀಟ್ ಮೂಲಕ ಉಲ್ಲೇಖಿಸಿ ಇಂದು (ಮೇ 28) ಮತ್ತೆ ಎಚ್ಚರಿಕೆ ನೀಡಿದ್ದಾರೆ.
ಮೇ 24ರಂದು ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಅಶ್ವತ್ಥ್ ನಾರಾಯಣ ಆ ಸೂಚನೆಯನ್ನು ಇಂದು ಮತ್ತೆ ಹಂಚಿಕೊಂಡಿದ್ದಾರೆ. ಇಂತಹ ಪ್ರಕರಣಗಳು ವರದಿಯಾದಲ್ಲಿ ಅಂತಹ ಆಸ್ಪತ್ರೆಗಳ ನೋಂದಣಿಯನ್ನು ರದ್ದುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಮೃತದೇಹ ನೀಡಲು ತೊಂದರೆ ಮಾಡಿದರೆ ಆಸ್ಪತ್ರೆಗೇ ಕುತ್ತು ಉಂಟಾಗಲಿದೆ. ಕೊರೊನಾದಿಂದ ಮೃತಪಟ್ಟವರ ಶವ ಹಸ್ತಾಂತರ ಸುಗಮವಾಗಿ ಆಗಬೇಕು. ಚಿಕಿತ್ಸೆಯ ಬಾಕಿ ಹಣ ಪಾವತಿಸುವಂತೆ ಒತ್ತಾಯ ಸಲ್ಲದು ಎಂದು ಆಸ್ಪತ್ರೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 24ರಂದು ಖಡಕ್ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಕೊರೊನಾ ವೈರಸ್ ಎಲ್ಲಿಂದ ಹರಡಿತು? ಕೊವಿಡ್ ರೋಗದ ಸೋಂಕಿನ ಅರಿಯಲು ಸಿಐಎ ತನಿಖೆಗೆ ಆಮೆರಿಕ ಅಧ್ಯಕ್ಷ ಜೋ ಬೈಡೆನ್ ಆದೇಶ
ಸಿನಿಮಾ ತೆರೆಗೆ ಬರುವ ಮೊದಲೇ ಕನ್ನಡದ ಹೀರೋ, ಡೈರೆಕ್ಟರ್ ಇಬ್ಬರೂ ಕೊವಿಡ್ಗೆ ಬಲಿ
(Shamanur Shivashankarappa MLA from Davanagere South constituency decided to supply Covid vaccine at his own expense)