ಕರ್ನಾಟಕದಲ್ಲಿ ಕೋವಿಡ್​ ಲಸಿಕೆಯ ತೀವ್ರ ಅಭಾವ, ಎರಡನೇ ಡೋಸ್​ ಪಡೆಯಲು ತೊಂದರೆ

ಕೇಂದ್ರ ಸರ್ಕಾರವು ನಿಗದಿಪಡಿಸಿರುವ ನಿಯಮಗಳ ಪ್ರಕಾರ ಕರ್ನಾಟಕದಲ್ಲಿ ಲಸಿಕಾ ಅಭಿಯಾನವು ಮೊದಲು ಅರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿಯ ಕೋವಿಡ್​ ವಾರಿಯರ್​ಗಳಿಗೆ, 60 ಕ್ಕಿಂತ ಹೆಚ್ಚಿನ ವಯೋಮಾನದವರಿಗೆ, ಕಾಯಲೆಗಳಿಂದ ನರಳುತ್ತಿರುವ 45 ಕ್ಕಿಂತ ಹೆಚ್ಚಿನ ಪ್ರಾಯದವರಿಗೆ-ಹೀಗೆ ಅದನ್ನು ವಿವಿಧ ಹಂತಗಳಲ್ಲಿ ಜಾರಿಯಲ್ಲಿಡಲಾಗಿದೆ.

ಕರ್ನಾಟಕದಲ್ಲಿ ಕೋವಿಡ್​ ಲಸಿಕೆಯ ತೀವ್ರ ಅಭಾವ, ಎರಡನೇ ಡೋಸ್​ ಪಡೆಯಲು ತೊಂದರೆ
ಕರ್ನಾಟಕದಲ್ಲಿ ಲಸಿಕಾ ಕಾರ್ಯಕ್ರಮ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 28, 2021 | 9:57 PM

ಬೆಂಗಳೂರು: ದೇಶದ ಎಲ್ಲ ರಾಜ್ಯಗಳಂತೆ ಕರ್ನಾಟಕವನ್ನೂ ಕೊವಿಡ್-19 ಲಸಿಕೆಯ ಕೊರತೆ ಏಪ್ರಿಲ್ ತಿಂಗಳ ಅಂತ್ಯದಿಂದ ಕಾಡುತ್ತಿದೆ. ಕೇಂದ್ರ ಸರ್ಕಾರವು 18-44 ವಯೋಮಾನದವರಿಗೆ ಲಸಿಕೆ ನೀಡುವ ಮೂರನೇ ಹಂತದ ಅಭಿಯಾನವನ್ನು ಮೇ 1ರಂದು ಆರಂಭಿಸುವ ಮೊದಲೇ ಲಸಿಕೆ ಕೊರತೆಯ ಸಂಕಷ್ಟ ಶುರುವಾಯಿತು. ಕೊರತೆಯ ಹಿನ್ನೆಲೆಯಲ್ಲೇ ಕರ್ನಾಟಕ ಸರ್ಕಾರವು 18 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರಿಗೆ ಲಸಿಕೆ ನೀಡವುದನ್ನಾರಂಭಿಸಲು ಎರಡು ಸಲ ಮುಂದೂಡಿದೆ. ಕೊವಿಡ್​ ಸೋಂಕು ಮತ್ತು ಸಾವಿನ ಪ್ರಕರಣಗಳು ವಿಪರೀತವಾಗಿ ಹೆಚ್ಚಾಗತೊಡಗಿದ ನಂತರ ಏಪ್ರಿಲ್ 27ರಿಂದ ಸರ್ಕಾರವು ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿಗೆ ತಂದಿರುವ ಸಮಯದಲ್ಲೇ ಲಸಿಕೆಯ ತೀವ್ರ ಅಭಾವ ಎದುರಾಗಿದೆ.

ಕೊವಿಡ್​ ಪಿಡುಗಿಗೆ ಸಂಬಂಧಿಸಿದ ಹಲವಾರು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕರ್ನಾಟಕ ಹೈಕೋರ್ಟ್ ಮೇ 12ರಂದು, ‘ರಾಜ್ಯದಲ್ಲಿ ಲಸಿಕೆಗಳ ಲಭ್ಯತೆ ವಿಚಾರ ಬಹಳ ಕಳವಳಕಾರಿಯಾಗಿದೆ,’ ಎಂದು ಹೇಳಿತ್ತು. ಮೇ 20 ರಂದು ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎ ಎಸ್ ಓಕಾ ಅವರ ನೇತೃತ್ವದ ಅದೇ ಹೈಕೋರ್ಟ್ ಪೀಠವು, ‘ಕರ್ನಾಟಕದಲ್ಲಿ ಲಸಿಕೆಗೆ ಸಂಬಂಧಿಸಿದ ಸ್ಥಿತಿ ಚಿಂತಾಜನಕವಾಗಿಯೇ ಮುಂದುವರೆದಿದೆ,’ ಅಂತ ಹೇಳಿತ್ತು.

ಕೇಂದ್ರ ಸರ್ಕಾರವು ನಿಗದಿಪಡಿಸಿರುವ ನಿಯಮಗಳ ಪ್ರಕಾರ ಕರ್ನಾಟಕದಲ್ಲಿ ಲಸಿಕಾ ಅಭಿಯಾನವು ಮೊದಲು ಅರೋಗ್ಯ ಕಾರ್ಯಕರ್ತರಿಗೆ, ಮುಂಚೂಣಿಯ ಕೋವಿಡ್​ ವಾರಿಯರ್​ಗಳಿಗೆ, 60 ಕ್ಕಿಂತ ಹೆಚ್ಚಿನ ವಯೋಮಾನದವರಿಗೆ, ಕಾಯಲೆಗಳಿಂದ ನರಳುತ್ತಿರುವ 45 ಕ್ಕಿಂತ ಹೆಚ್ಚಿನ ಪ್ರಾಯದವರಿಗೆ-ಹೀಗೆ ಅದನ್ನು ವಿವಿಧ ಹಂತಗಳಲ್ಲಿ ಜಾರಿಯಲ್ಲಿಡಲಾಗಿದೆ. ಕೊವಿಷೀಲ್ಡ್ ಮತ್ತು ಕೊವ್ಯಾಕ್ಸಿನ್ ಹೊರತುಪಡಿಸಿ ಸ್ಫುಟ್ನಿಕ್ ವಿ ಮಾತ್ರ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿರುವ ಲಸಿಕೆಯಾಗಿದೆ. ಲಸಿಕೆಗಳಿಗೆ ಸಂಬಂಧಿಸಿದಂತೆ ಜಾಗತಿಕ ಟೆಂಡರ್ ಪ್ರಕ್ರಿಯೆಯಲ್ಲಿ ಉಲ್ಲೇಖನೀಯ ಪ್ರಗತಿಯಾಗಿಲ್ಲ.

ಈ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನದಲ್ಲಿ ಕರ್ನಾಟಕ ಸಾಧಿಸಿರುವ ಪ್ರಗತಿ ಎಷ್ಟು ಎನ್ನುವುದು ನೋಡಬೇಕರುವುದು ಮುಖ್ಯವೆನಿಸುತ್ತದೆ. ಮೇ 27 ರವರೆಗೆ, ರಾಜ್ಯವು 1,27,54,056 ಡೋಸುಗಳನ್ನು ನೀಡಿದ್ದು ಇದರಲ್ಲಿ 26,65,137 ಜನ ಎರಡು ಡೋಸ್​ಗಳನ್ನು ಪಡೆದಿದ್ದಾರೆ. 2019 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ವೇಳೆ ರಾಜ್ಯದಲ್ಲಿ ಅರ್ಹ ಮತದಾರರ ಸಂಖ್ಯೆ 5,03,07,182 ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಯಸ್ಕರ ಜನಸಂಖ್ಯೆ 5 ಕೋಟಿಯಿದೆಯೆಂದು ಪರಿಗಣಿಸಿದರೆ, ಕೇವಲ ಶೇಕಡಾ 5.3 ರಷ್ಟು ಜನ ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದಾರೆ.

ಆದರೆ, ಲಸಿಕಾ ಅಭಿಯಾನದ ವೇಗ ಕುಂಠಿತಗೊಂಡಿದೆ. ಏಪ್ರಿಲ್ 1-27 ರ ಮಧ್ಯೆ 51,93,389 ಶಾಟ್​ಗಳನ್ನು ನೀಡಲಾಗಿತ್ತು. ಅಂದರೆ ಪ್ರತಿದಿನದ ಸರಾಸರಿ 1,92, 347 ಆಗಿತ್ತು. ಆದರೆ, ಮೇ 1-26 ರ ನಡುವೆ ಪ್ರತಿದಿನ ಸರಾಸರಿ 1,07,146 ಶಾಟ್​ಗಳನ್ನು ನೀಡಲಾಗಿದೆ. ಈ ಅವಧಿಯಲ್ಲಿ ಒಟ್ಟು 27,85,789 ಶಾಟ್​ಗಳನ್ನು ನೀಡಲಾಗಿದೆ.

ಲಸಿಕೆಯ ಅಭಾವ ಎಂಥ ಸ್ಥಿತಿಯನ್ನು ತಂದೊಡ್ಡಿದೆಯೆಂದರೆ, ಕೋಟ್ಯಾಂತರ ಜನ ಮೊದಲ ಡೋಸ್ ಪಡೆಯಬೇಕಿದೆ ಮತ್ತು ಈಗಾಗಲೇ ಮೊದಲ ಡೋಸನ್ನು ಪಡೆದಿರುವವರು ನಿಗದಿತ ಸಮಯದೊಳಗೆ ಎರಡನೇ ಡೋಸನ್ನು ಪಡೆಯದಿರುವ ಅಪಾಯಕ್ಕೆ ಸಿಲುಕಿದ್ದಾರೆ. ಎರಡನೇ ಡೋಸ್​ ನಿರೀಕ್ಷೆಯಲ್ಲಿರುವವರ ಪೈಕಿ ಕೋವ್ಯಾಕ್ಸಿನ್ ತೆಗೆದುಕೊಂಡಿರುವರು ಹೆಚ್ಚಿನ ಅಪಾಯದಲ್ಲಿದ್ದಾರೆ.

ಹೈಕೋರ್ಟ್​ಗೆ ರಾಜ್ಯ ಸರ್ಕಾರವು ಒದಗಿಸಿರುವ ಮಾಹಿತಿ ಪ್ರಕಾರ, ಮೇ 20 ರವರೆಗೆ ರಾಜ್ಯದಲ್ಲಿ 4,55,084 ಜನ ಎರಡನೇ ಡೋಸ್ ಪಡೆಯಲು ಅರ್ಹರಿದ್ದಾಗ 97,440 ಡೋಸು ಲಸಿಕೆ ಮಾತ್ರ ಲಭ್ಯವಿತ್ತು. ಕೇಂದ್ರ ಸರ್ಕಾರ ಸೂಚಿಸಿರುವ ನಿಯಮಗಳ ಪ್ರಕಾರ ಲಸಿಕೆಯ ಎರಡನೇ ಶಾಟನ್ನು 4-6 ವಾರಗಳೊಳಗೆ ಪಡೆಯಬೇಕು. ಹಾಗಾಗಿ ಇವರಲ್ಲಿ ಬಹಳಷ್ಟು ಜನ ಎರಡನೇ ಡೊಸನ್ನು ನಿಗದಿತ ಸಮಯದಲ್ಲಿ ಪಡೆಯಲಾಗದ ಅಪಾಯ ಎದುರಿಸುತ್ತಾರೆ. ಮಾಹಿತಿಯ ಪ್ರಕಾರ 39,457 ಜನ ಮೊದಲ ಡೋಸ್​ ಪಡೆದು ಮೂರು ವಾರಗಳಾಗಿದೆ, 22,780 ಜನ ಲಸಿಕೆ ಪಡೆದು 2 ವಾರಗಳಾಗಿದ್ದರೆ, 16,000 ಜನ ಒಂದು ವಾರದ ಹಿಂದೆ ಪಡೆದಿದ್ದಾರೆ.

‘ಹೀಗಾಗಿ ಮೊದಲ ಡೋಸ್ ಪಡೆದು ಆರು ವಾರಗಳಾಗಿರುವ ಕೇವಲ 1/3 ರಷ್ಟು ಫಲಾನುಭವಿಗಳು ಮಾತ್ರ ಎರಡನೇ ಡೋಸನ್ನು ಪಡೆಯಲಿದ್ದ್ದಾರೆ ಮತ್ತು ಉಳಿದ 2/3 ಜನ ಪಡೆಯಲಾರರು. ಇದು ಬಹಳ ವಿಷಾದನೀಯ ಸಂಗತಿ,’ ಎಂದು ಹೈಕೋರ್ಟ್ ಹೇಳಿದೆ.

ಅದೇ ಮೇ 20ರ ಆದೇಶದಲ್ಲಿ ಹೈಕೋರ್ಟ್, ‘ಮೇ 17 ರವರಗೆ ಎರಡನೇ ಡೋಸ್ ಪಡೆಯಬೇಕಿರುವ 58.3 ಲಕ್ಷ ಫಲಾನುಭವಿಗಳಲ್ಲಿ 1,53,571 ಫಲಾನುಭವಿಗಳು ತಮ್ಮ ಮೊದಲ ಡೋಸ್ ಪಡೆದು 12 ವಾರಗಳಾಗಿದೆ. ಹಾಗಾಗಿ ಮಿಕ್ಕಿದ 56.8 ಲಕ್ಷ ಫಲಾನುಭವಿಗಳಿಗೆ ಆದಷ್ಟು ಬೇಗ ಎರಡನೇ ಡೋಸ್ ನೀಡಬೇಕಿದೆ,’ ಎಂದು ಹೇಳಿದೆ.

ಸರ್ಕಾರ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿ ಪ್ರಕಾರ ಮೇ 20 ರವರೆಗೆ ರಾಜ್ಯದಲ್ಲಿ 7.1 ಲಕ್ಷ ಕೋವಿಷೀಲ್ಡ್​ ಲಸಿಕೆಗಳ ದಾಸ್ತಾನಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋರ್ಟಿಗೆ ಮಾಡಿರುವ ನಿವೇದನೆ ಪ್ರಕಾರ ಮುಂದಿನ ಕೆಲ ದಿನಗಳಲ್ಲಿ ಕರ್ನಾಟಕ್ಕೆ 16 ಲಕ್ಷ ಡೋಸ್​ ಲಸಿಕೆ ಲಭ್ಯವಾಗಲಿವೆ.

‘ಹಾಗಾಗಿ, ಕೋವಿಷೀಲ್ಡ್​​ಗೆ ಸಂಬಂಧಿಸಿದಂತೆ ಹೇಳುವುದಾದರೆ; ನಮ್ಮ ಎದುರಿರುವ ದೊಡ್ಡ ಚಿತ್ರಣವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನೀಡಿರುವ ಅಂಕಿ-ಅಂಶಗಳು ನಿಖರವಾಗಿವೆ ಅಂದುಕೊಂಡರೆ, ಲಸಿಕೆಯ ಭಾರೀ ಆಭಾವ ಎದುರಾಗಲಿದೆ. 7,04,050 ಡೋಸ್​ಗಳನ್ನು ಪಡೆಯಲು ರಾಜ್ಯ ಸರ್ಕಾರ ಏನು ಮಾಡಲಿದೆ ಎನ್ನುವುದು ಗೊತ್ತಾಗಬೇಕಿದೆ,’ ಎಂದು ಹೈಕೋರ್ಟ್​ ಹೇಳಿದೆ.

ಲಸಿಕೆಯು ಸಂವಿಧಾನದ 21ನೇ ಕಲಮಿನಡಿ ಆರೋಗ್ಯ ಹಕ್ಕಿನ ಭಾಗವಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಸ್ಥಿತಿಯನ್ನು ನಿರ್ವಹಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ತಿಳಿಸಿದೆ. ಇದಕ್ಕೆ ಉತ್ತರವಾಗಿ ರಾಜ್ಯ ಸರ್ಕಾರವು ಎರಡನೇ ಡೋಸ್ ಪಡೆಯಬೇಕಿರುವವರಿಗೆ ಆದ್ಯತೆ ನೀಡುವುದಾಗಿ ಕೋರ್ಟ್​ಗೆ ತಿಳಿಸಿದೆ.

ಇದನ್ನೂ ಓದಿ: 18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ