AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ಸಿಗಲಿಲ್ಲವೆಂಬ ಬೇಸರವಿತ್ತು, ಆದರೆ ಪಠಾಣ್ ಗೆಲುವು ಸಂತಸ ತಂದಿದೆ: ಅಜ್ಜಂಪೀರ್ ಖಾದ್ರಿ

ಟಿಕೆಟ್ ಸಿಗಲಿಲ್ಲವೆಂಬ ಬೇಸರವಿತ್ತು, ಆದರೆ ಪಠಾಣ್ ಗೆಲುವು ಸಂತಸ ತಂದಿದೆ: ಅಜ್ಜಂಪೀರ್ ಖಾದ್ರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 23, 2024 | 7:52 PM

Share

ತಾನ್ಯಾವತ್ತೂ ಪಕ್ಷವವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ, ರಾಜ್ಯದ ನಾಯಕರು ಅದನ್ನು ದೃಢಪಡಿಸಿದ್ದಾರೆ, 2018 ರಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74 ಸಾವಿರ ವೋಟು ಪಡೆದಿದ್ದೆ, ತಾನು ಕೇಳುವ ಕೆಲಸವನ್ನು ಮಾಡಿಕೊಡುವ ಭರವಸೆ ನಾಯಕರು ನೀಡಿದ್ದಾರೆ, ಮುಡಾ ಪ್ರಕರಣದಲ್ಲಿ ತನ್ನ ತಾಯಿಯಂತಿರುವ ಪಾರ್ವತಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದು ಶಿಗ್ಗಾವಿಯಲ್ಲಿ ಬಿಜೆಪಿಯನ್ನು ಸೋಲಿಸಲೇಬೇಕೆಂಬ ಛಲ ಹುಟ್ಟಿತ್ತು ಎಂದು ಖಾದ್ರಿ ಹೇಳಿದರು.

ಹಾವೇರಿ: ಶಿಗ್ಗಾವಿ ಉಪ ಚುನಾವಣೆಯಲ್ಲಿ ಯಾಸಿರ್ ಅಹ್ಮದ್ ಖಾನ್ ಪಠಾಣ್ ಗೆಲುವಿಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಅಜ್ಜಂಪೀರ್ ಖಾದ್ರಿ ಕೊಡುಗೆ ದೊಡ್ಡದು ಎನ್ನಲಾಗುತ್ತಿದೆ. ಪಕ್ಷ ಮತ್ತು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯವೆದ್ದಿದ್ದ ಖಾದ್ರಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದ್ದರು. ಅದರೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಮೀರ್ ಅಹ್ಮದ್ ಮೊದಲಾದವರು ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು. ಟಿಕೆಟ್ ತಪ್ಪಿದ ಬೇಸರ ಇರಲಿಲ್ಲ ಅಂತೇನೂ ಇಲ್ಲ, ಅದರೆ ಕಾಂಗ್ರೆಸ್ ಪಕ್ಷವನ್ನು ಇಲ್ಲಿ ಗೆಲ್ಲಿಸಿ ರಾಜ್ಯ ನಾಯಕತ್ವವನ್ನು ಬಲಿಪಡಿಸುವ ಉದ್ದೇಶದೊಂದಿಗೆ ಫೈಟ್ ಮಾಡಿದ್ದೇವೆ, ಪಠಾಣ್ ಗೆದ್ದಿದ್ದು ಬಹಳ ಸಂತೋಷ ತಂದಿದೆ ಎಂದು ಖಾದ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೈಕಮಾಂಡ್​ಗೆ ಕಳಿಸಿದ ಪಟ್ಟಿಯಲ್ಲಿ ಅಜ್ಜಂಪೀರ್ ಖಾದ್ರಿ ಹೆಸರು ಮೊದಲ ಸ್ಥಾನದಲ್ಲಿತ್ತು: ಸಿದ್ದರಾಮಯ್ಯ