Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka By Polls results: ಮೂರರಲ್ಲೂ ಸೋಲು, ಟಿವಿ ಹೊರಗೆ ಬಿಸಾಡಿ ಕಲ್ಲು ಎತ್ತಿಹಾಕಿದ ಬಿಜೆಪಿ ಕಾರ್ಯಕರ್ತ!

Karnataka By Polls results: ಮೂರರಲ್ಲೂ ಸೋಲು, ಟಿವಿ ಹೊರಗೆ ಬಿಸಾಡಿ ಕಲ್ಲು ಎತ್ತಿಹಾಕಿದ ಬಿಜೆಪಿ ಕಾರ್ಯಕರ್ತ!

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 23, 2024 | 5:10 PM

Karnataka By Polls results: ರಾಜ್ಯ ಬಿಜೆಪಿ ನಾಯಕರ ನಡುವೆ ಆಂತರಿಕ ಜಗಳ, ಪರಸ್ಪರ ದ್ಚೇಷದಿಂದ ವೀರಭದ್ರಪ್ಪ ಬೇಸತ್ತಿದ್ದಾರೆ ಮತ್ತು ಹತಾಶರಾಗಿದ್ದಾರೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ರಾಜ್ಯಕ್ಕೆ ಬಂದು ಬಿಜೆಪಿ ನಾಯಕರ ಸಭೆ ನಡೆಸಿ ಬುದ್ಧಿವಾದ ಹೇಳಬೇಕೆಂದು ಅವರು ಹೇಳುತ್ತಾರೆ. ಬಿಜೆಪಿ ಮುಖಂಡರ ಜಗಳಗಳಿಂದಾಗಿ ಕಾರ್ಯಕರ್ತರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ ಎಂದು ವೀರಭದ್ರಪ್ಪ ಹೇಳುತ್ತಾರೆ.

ವಿಜಯಪುರ: ಇದೆಂಥ ಆಕ್ರೋಶ ಸ್ವಾಮಿ? ಅಭಿಮಾನವೋ ಅತಿರೇಕವೋ ಅಂತ ವೀಕ್ಷಕರೇ ತೀರ್ಮಾನಿಸಬೇಕು. ವಿಷಯವೇನೆಂದರೆ, ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿರುವುದಕ್ಕೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಬಿಜೆಪಿ ಕಾರ್ಯಕರ್ತ ವೀರಭದ್ರಪ್ಪ ಭಾಗಿ ಅನ್ನುವವರಿಗೆ ಕೋಪ ತಾಳಲಾಗದೆ ಮನೆಯಲ್ಲಿ ಕೂತು ತಾನು ಫಲಿತಾಂಶಗಳನ್ನು ವೀಕ್ಷಿಸುತ್ತಿದ್ದ ಟೀವಿಯನ್ನು ಹೊರಗಡೆ ತಂದು ಎಸೆದಿದ್ದಾರಲ್ಲದೆ ಅದರ ಅದರ ಮೇಲೆ ಕಲ್ಲನ್ನೂ ಎತ್ತಿಹಾಕಿದ್ದಾರೆ! ವೀರಭದ್ರಪ್ಪಗೆ ಟಿವಿಯಲ್ಲಿ ಅದೆನು ತಪ್ಪು ಕಂಡಿತೋ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Shiggaon Results 2024: ಶಿಗ್ಗಾಂವಿ ಫಲಿತಾಂಶ, ಯಾಸಿರ್ ಅಹಮದ್​ ಖಾನ್​ ಪಠಾಣ್ ಗೆಲುವು; ಮುಗ್ಗರಿಸಿದ ಭರತ್