AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Channapatna By Poll Results; ಚನ್ನಪಟ್ಟಣದ ಜನ ಮನೆಮಗ ಯೋಗೇಶ್ವರ್ ಕೈಬಿಡಲ್ಲ ಅಂತ ಖಚಿತವಾಗಿ ಗೊತ್ತಿತ್ತು: ಶೀಲಾ ಯೋಗೇಶ್ವರ್

Channapatna By Poll Results; ಚನ್ನಪಟ್ಟಣದ ಜನ ಮನೆಮಗ ಯೋಗೇಶ್ವರ್ ಕೈಬಿಡಲ್ಲ ಅಂತ ಖಚಿತವಾಗಿ ಗೊತ್ತಿತ್ತು: ಶೀಲಾ ಯೋಗೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 23, 2024 | 6:56 PM

ಮತದಾನ ಮುಗಿದ ಬಳಿಕ ಮಾತಾಡಿದ್ದ ಯೋಗೇಶ್ವರ್ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ತೀವ್ರ ಸ್ವರೂಪದ ಹೋರಾಟವಿದೆ ಅಂತ ಹೇಳಿದ್ದರು, ನೆಗೆಟಿವ್ ಅಗಿ ಮಾತಾಡಿರಲಿಲ್ಲ, ಈಗ ಅವರು ಗೆದ್ದಿರುವುದರಿಂದ ಮತ್ತು ಅಧಿಕಾರದಲ್ಲಿ ಕಾಂಗ್ರೆಸ್ ಪಕ್ಷ ಇರೋದ್ರಿಂದ ಚನ್ನಪಟ್ಟಣದ ಸಮಗ್ರ ಅಭುವೃದ್ಧಿ ಕಡೆ ಗಮನ ಹರಿಸಲಿದ್ದಾರೆ ಎಂದು ಶೀಲಾ ಯೋಗೇಶ್ವರ್ ಹೇಳಿದರು.

ರಾಮನಗರ: ಮತಗಳ ಎಣಿಕೆ ಶುರುವಾಗುವ ಮೊದಲು ಸಿಪಿ ಯೋಗೇಶ್ವರ್ ಅವರ ಪತ್ನಿ ಶೀಲಾ ಯೋಗೇಶ್ವರ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಅವರ ಪತಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ. ಸಂತೋಷದಿಂದ ಬೀಗುತ್ತ ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು ರೈತ ಕುಟುಂಬದ ಹಿನ್ನೆಲೆಯ ಯೋಗೇಶ್ವರ್ ಒಬ್ಬ ಮೇಷ್ಟ್ರ ಮಗ, ಅವರನ್ನು ಮನೆ ಮಗ ಎಂದು ಭಾವಿಸಿದ್ದ ಜನ ಅವರ ಕೈ ಬಿಡೋದಿಲ್ಲ ಎಂಬ ನಂಬಿಕೆ ತನಗಿತ್ತು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Channapatana ByPoll Result: ಹ್ಯಾಟ್ರಿಕ್​ ಸೋಲಿನ ಕಹಿ ಉಂಡ ನಿಖಿಲ್​ ಕುಮಾರಸ್ವಾಮಿ ಫಸ್ಟ್​ ರಿಯಾಕ್ಷನ್​