ನಿಖಿಲ್​ ಕುಮಾರಸ್ವಾಮಿಗೆ ಭೂತವಾಗಿ ಕಾಡಿದ ಚನ್ನಪಟ್ಟಣ ನಗರದ ಬೂತ್​ಗಳು..!

ಎರಡು ದೈತ್ಯ ಕುಟುಂಬಗಳ ನಡುವೆ ಪ್ರತಿಷ್ಠೆಯ ಫೈಟು. ಡಿಕೆ ಶಿವಕುಮಾರ್‌ ವರ್ಸಸ್‌ ಹೆಚ್‌ಡಿ ಕುಮಾರಸ್ವಾಮಿ ಅಂತಾನೇ ನಡೆದಿದ್ದ ಚನ್ನಪಟ್ಟಣ ಅಖಾಡದಲ್ಲಿ ಡಿಕೆ ಬ್ರದರ್ಸ್‌ ಗೆದ್ದು ಬೀಗಿದ್ದಾರೆ. ಜೆಡಿಎಸ್‌ ಭದ್ರಕೋಟೆ ಅಂತಾ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕೇಂದ್ರ ಸಚಿವ ಹೆಚ್‌ಡಿಕೆ ಮುಖಭಂಗ ಅನುಭವಿಸಿದ್ದಾರೆ. ರಾಜ್ಯದ ಗಮನ ಸೆಳೆದಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಚನ್ನಪ್ಟಣ ನಗರವೇ ನಿಖಿಲ್​ಗೆ ಕೈಕೊಟ್ಟಿದೆ.

ನಿಖಿಲ್​ ಕುಮಾರಸ್ವಾಮಿಗೆ ಭೂತವಾಗಿ ಕಾಡಿದ ಚನ್ನಪಟ್ಟಣ ನಗರದ ಬೂತ್​ಗಳು..!
Follow us
ರಮೇಶ್ ಬಿ. ಜವಳಗೇರಾ
|

Updated on:Nov 23, 2024 | 10:22 PM

ರಾಮನಗರ, (ನವೆಂಬರ್ 23): ಕರ್ನಾಟಕದ ಮೂರು ಕ್ಷೇತ್ರಗಳಿಗೆ ಬೈ ಎಲೆಕ್ಷನ್‌ ನಡೆದಿತ್ತಾದರೂ, ಚನ್ನಪಟ್ಟಣದ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿತ್ತು. ಪ್ರತಿಷ್ಠೆಯ ಅಖಾಡವಾಗಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್‌ ಪ್ರಚಂಡ ಗೆಲುವು ಸಾಧಿಸಿದ್ರೆ, ಎನ್​ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಸತತ ಎರಡು ಸೋಲಿನ ಬಳಿಕ ಮೂರನೇ ಚುನಾವಣೆಯಾದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎನ್ನುವ ವಿಶ್ವಾಸದಲ್ಲಿ ನಿಖಿಲ್ ಇದ್ದರು. ಅಷ್ಟೇ ಅಲ್ಲ ಕುಮಾರಸ್ವಾಮಿ, ದೇವೇಗೌಡ ಆದಿಯಾಗಿ ನಾಯಕರು, ಕಾರ್ಯಕರ್ತರಿಂದ ಹಿಡಿದ ಚುನಾವಣಾ ಸಮೀಕ್ಷೆಗಳು ಸಹ ಚನ್ನಪಟ್ಟಣದಲ್ಲಿ ನಿಖಿಲ್​ಗೆ ಗುಲುವು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದಿದ್ದವು. ಆದ್ರೆ, ಅಂತಿಮವಾಗಿ ಫಲಿತಾಂಶದ ಲೆಕ್ಕಾಚಾರಗಳು ಉಲ್ಟಾ ಆಗಿವೆ. ಪ್ರಮುಖವಾಗಿ ನಿಖಿಲ್​ಗೆ ಚನ್ನಪಟ್ಟಣ ನಗರದ ಬೂತ್​ಗಳೇ ಭೂತವಾಗಿ ಕಾಡಿವೆ.

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ 1,12,642 ಮತಗಳನ್ನು ಪಡೆದು 25,413 ಮತಗಳ ಅಂತರದಿಂದ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು (87,229 ಮತ) ಸೋಲಿಸಿದ್ದಾರೆ. ಈ ಚುನಾವಣೆಯಲ್ಲಿ ‘ಯಾರೇ ಗೆದ್ದರೂ ಐದರಿಂದ ಹತ್ತು ಸಾವಿರದೊಳಗೆ ಎನ್ನಲಾಗಿತ್ತು. ಆದ್ರೆ, ಯೋಗೇಶ್ವರ್​ ನಿರೀಕ್ಷೆಗೂ ಮೀರಿ ಬರೋಬ್ಬರಿ 25,413 ಮತಗಳಿಂದ ಗೆದ್ದು ಬೀಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ನಿಖಿಲ್ ಯೋಗೇಶ್ವರ್ ನಡುವೆ ನೆಕ್​ಟು ನೆಕ್ ಫೈಟ್​ ಆಗಿದೆ. ಆದ್ರೆ, ನಿಖಿಲ್​ಗೆ ಕೈಕೊಟ್ಟಿದ್ದು ಚನ್ನಪಟ್ಟಣ ನಗರ.

ಇದನ್ನೂ ಓದಿ: ಮುಯ್ಯಿಗೆ ಮುಯ್ಯಿ: ಅಂದು ತಾಯಿ…ಇಂದು ಮಗನಿಗೆ ಸೋಲುಣುಸಿದ ಯೋಗೇಶ್ವರ್​…!

ಜೆಡಿಎಸ್​ಗೆ ಭೂತವಾದ ಚನ್ನಪಟ್ಟಣ ನಗರ ಬೂತ್​ಗಳು

Channapatna By Election

ಹೌದು….ಚನ್ನಪಟ್ಟಣ ನಗರದದ ಬೂತ್​ಗಳಲ್ಲಿ ಕಾಂಗ್ರೆಸ್​ ಸಾಲಿಡ್​ ಆಗಿದ್ದರೆ, ಜೆಡಿಎಸ್ ಕಳಪೆ ಪ್ರದರ್ಶನ ತೋರಿದೆ. ಚನ್ನಪಟ್ಟಣ ನಗರದಲ್ಲಿ ಒಟ್ಟು 26 ಬೂತ್​ಗಳು ಇದ್ದು, ಅವುಗಳು ಬಹುತೇಕ ಮುಸ್ಲಿಂ ಬಾಹುಳ್ಯದ ಬಡಾವಣೆಗಳಾಗಿವೆ. ಬೂತ್ ನಂಬರ್ 94‌ರಿಂದ ಬೂತ್ ನಂಬರ್ 119 ರ ವರೆಗೆ ಕಾಂಗ್ರೆಸ್​ಗೆ ಒನ್ ಸೈಡ್ ಆಗಿದೆ. ಪಟ್ಟಣದ ಮತಗಳು ಬಂದೇ ಬರುತ್ತವೆ ಎಂದು ಜೆಡಿಎಸ್​ ಹೆಚ್ಚಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಆದ್ಯತೆ ನೀಡಿತ್ತು. ಆದ್ರೆ, ಈಗ ಪಟ್ಟಣದ ಮತಗಳೇ ಹೊಡೆತಕೊಟ್ಟಿವೆ. 26 ಬೂತ್ ಗಳಲ್ಲೂ ಸಹ ಜೆಡಿಎಸ್​ ತೀವ್ರ ಹಿನ್ನೆಡೆಯಾಗಿದೆ. ಕೆಲವೆಡೆ ಕಾಂಗ್ರೆಸ್ ಸಾವಿರ ದಾಟಿದರೆ ಜೆಡಿಎಸ್​ಗೆ ಬರೀ 29 ಮತಗಳು ಬಿದ್ದಿವೆ.

ಮುಸ್ಲಿಂ ಮತಗಳು ಕ್ರೂಢೀಕರಣ

ಜೆಡಿಎಸ್​ ಬಿಜೆಪಿ ಜೊತೆ ಕೈಜೋಡಿಸಿದ್ದರು ಸಹ ಕೆಲವು ಮುಸ್ಲಿಂ ನಾಯಕರು ಸೇರಿದಂತೆ ಮುಖಂಡರು, ಕಾರ್ಯಕರ್ತರು ಕುಮಾರಸ್ವಾಮಿ ಪರವಾಗಿ ನಿಂತ್ತಿದ್ದರು. ಆದ್ರೆ, ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್, ಮುಸ್ಲಿಂ ಮತಗಳು ಜೆಡಿಎಸ್​ನತ್ತ ಹೋಗದಂತೆ ನೋಡಿಕೊಂಡಿದ್ದಾರೆ. ಚನ್ನಪಟ್ಟಣ ನಗರ ಪ್ರದೇಶದಲ್ಲಿ ಮುಸ್ಲಿಂ ಹೆಚ್ಚಿರುವ ಬಡಾವಣೆಗಳ ಜವಾಬ್ದಾರಿಯನ್ನು ಡಿಕೆ ಶಿವಕುಮಾರ್ ಅವರು ಶಾಸಕ ಇಕ್ಬಾಲ್ ಹುಸೇನ್ ನೀಡಿದ್ದರು. ಅದರಂತೆ ಇಕ್ಬಾಲ್ ಹುಸೇನ್ ಮತ್ತು ಅವರ ಟೀಂ, ಮುಸ್ಲಿಂ ಮತಗಳು ಜೆಡಿಎಸ್​ಗೆ ಜಾರದಂತೆ ಫುಲ್ ಆಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕುಮಾರಸ್ವಾಮಿ ಪರ ಇದ್ದ ಅಲ್ಪಸ್ವಲ್ಪ ಮತಗಳು ಸಹ ಕಾಂಗ್ರೆಸ್​ ಪಾಲಾಗುವಂತೆ ಮಾಡಿದ್ದಾರೆ.

ಇದನ್ನೂ ಓದಿ: ಅಪ್ಪನ ಕ್ಷೇತ್ರ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಸೋಲಿಗೆ ಕಾರಣಗಳೇನು? ಎನ್​ಡಿಎ ಎಡವಿದ್ದೆಲ್ಲಿ?

ಮೈತ್ರಿಯೇ ಮುಳುವಾಯ್ತಾ?

ಈ ಬಾರಿ ನಿಖಿಲ್‌ ಕೇವಲ ಜೆಡಿಎಸ್‌ ಕ್ಯಾಂಡಿಡೇಟ್‌ ಆಗಿ ಅಖಾಡಕ್ಕಿಳಿದಿರಲಿಲ್ಲ. ದೋಸ್ತಿ ಪಡೆ ಅಭ್ಯರ್ಥಿಯಾಗಿರೋದ್ರಿಂದ ಎನ್‌ಡಿಎ ಅಭ್ಯರ್ಥಿ ಅಂತಾನೇ ಗಣನೆಗೆ ತೆಗೆದುಕೊಳ್ಳಲಾಗಿತ್ತು, ಚನ್ನಪಟ್ಟಣದಲ್ಲಿ ಮೈತ್ರಿಯಿಂದ ಆಗಿರೋ ಬಹುದೊಡ್ಡ ಸಮಸ್ಯೆ ಅಂದ್ರೆ, ಅಲ್ಪಸಂಖ್ಯಾತ ವೋಟ್‌ಗಳು ದಳದಿಂದ ಕೈತಪ್ಪಿ ಹೋಗುವಂತೆ ಆಯ್ತು. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿಯೇ ಜೆಡಿಎಸ್‌ಗೆ ಮುಸ್ಲಿಂ ಮತಗಳು ಕೈಪ್ಪಿವೆ ಅನ್ನೋದು ಗ್ಯಾರಂಟಿ. ಇನ್ನು ಬಿಜೆಪಿ ಮತ್ತು ದಳದ ವೋಟ್‌ ಕ್ರೋಢೀಕರಣ ಮಾಡಿ ಗೆಲ್ಲೋಣ ಅಂದ್ರೆ ಕೇಸರಿ ಪಾಳಯದ ವೋಟ್‌ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರಲೇ ಇಲ್ಲ. ಹೀಗಾಗಿ ನಿಖಿಲ್‌ಗೆ ಹಿನ್ನಡೆಯಾಗಿದೆ.

ಮುಸ್ಲಿಂ ಮೊಹಲ್ಲಾದಲ್ಲೇ ಕೂತು ನಿಮ್ಮ ಕಷ್ಟಸುಖ ಆಲಿಸುವೆ ಎಂದಿದ್ದ ದೇವೇಗೌಡ

ಹೌದು.. ಚನ್ನಪಟ್ಟಣ ಭಾರೀ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿತ್ತು. ಬಿಜೆಪಿ ಜೊತೆ ಕೈಜೋಡಿಸಿದ್ದರಿಂದ ಮುಸ್ಲಿಂ ಮತಗಳು ಬರಲ್ಲ ಎಂದು ತಿಳಿದ ದೇವೇಗೌಡ್ರು ಕೊನೆ ಕ್ಷಣದಲ್ಲಿ ಮುಸ್ಲಿಂ ಸಮುದಾಯದ ಸಭೆ ನಡೆಸಿ ನಾವು ನಿಮ್ಮನ್ನು ಕೈಬಿಡಲ್ಲ ಅಂತೆಲ್ಲಾ ಕೆಲ ಭರವಸೆ ನೀಡಿದ್ದರು. 13ನೇ ತಾರೀಖು ಚುನಾವಣೆ ಇದೆ, 23ಕ್ಕೆ ಕೌಂಟಿಂಗ್ ಇದೆ. ಫಲಿತಾಂಶದ ಬಳಿಕ ಮತ್ತೆ ಚನ್ನಪಟ್ಟಣಕ್ಕೆ ಬರುತ್ತೇನೆ. ಮುಸ್ಲಿಂ ಮೊಹಲ್ಲಾದಲ್ಲೇ ಕೂತು, ನಿಮ್ಮ ಕಷ್ಟಸುಖ ಎಲ್ಲವನ್ನೂ ಆಲಿಸುತ್ತೇನೆ. ನಿಮ್ಮ ಸಮುದಾಯಕ್ಕೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಇದು The word of promise.. ಎಂದು ದೇವೇಗೌಡ ಮುಸ್ಲಿಂ ಸಮುದಾಯಕ್ಕೆ ಭರವಸೆ ನೀಡಿದ್ದರು.

ಆದ್ರೆ, ಕೆಲ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಹೇಳಿಕೆಗಳು ಮುಸ್ಲಿಂ ಸಮುದಾಯಕ್ಕೆ ಕೊಂಚ ಮಟ್ಟಿಗೆ ಕೋಪ ಇತ್ತು. ನಂತರ ಜಮೀರ್​ ವಿರುದ್ಧ ಕುಮಾರಸ್ವಾಮಿಯ ಆರೋಪಗಳಿಂದ ಮುಸ್ಲಿಂ ಸಮುದಾಯ ಜೆಡಿಎಸ್​ನಿಂದ ದೂರವಾಗುವಂತೆ ಮಾಡಿತ್ತು. ಬಳಿಕ ಜಮೀರ್ ಕ್ಷೇತ್ರಕ್ಕೆ ಬಂದು ಮುಸ್ಲಿಂ ಸಮುದಾಯ ಜನರಿಗೆ ಉತ್ಸಹ ತುಂಬಿ ಕಾಂಗ್ರೆಸ್​ಗೆ ಮತಗಳಾಗಿ ಪರಿವರ್ತಿಸಿದರು.

22 ಸಾವಿರಕ್ಕೂ ಅಧಿಕ ಮುಸ್ಲಿಂ ಮತಗಳು ಇದ್ದು, ಅವು ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಕೈಹಿಡಿದಿದ್ದವು. ಈ ಬಗ್ಗೆ ಸ್ವತಃ ಜಮೀರ್ ಅವರೇ ಹೇಳಿದ್ದರು. ಕುಮಾರಸ್ವಾಮಿ ಅವರು ಮುಸ್ಲಿಂ ಮತಗಳಿಂದಲೇ ಗೆದ್ದಿದ್ದು, ಮುಸ್ಲಿಂ ಮತ ಹಾಕಲಿಲ್ಲ ಅಂದಿದ್ದರೆ ಕುಮಾರಸ್ವಾಮಿ ಗೆಲ್ಲುತ್ತಿರಲಿಲ್ಲ ಎಂದಿದ್ದರು. ಈ ಬಾರಿ ಉಪಚುನಾವಣೆಯಲ್ಲಿ ಖುದ್ದು ಇಕ್ಬಾಲ್ ಹುಸೇನ್ ಮತ್ತು ಅವರ ತಂಡ ಹಾಗೂ ಜಮೀರ್​ ಪ್ರಚಾರ ನಡೆಸಿ ಅಬ್ಬರದ ಭಾಷಣದೊಂದಿಗೆ ಮುಸ್ಲಿಂ ಮತಗಳನ್ನು ಸೆಳೆಯುವಲ್ಲಿ ಸಕ್ಸಸ್ ಆಗಿದ್ದಾರೆ.

ಕಾಂಗ್ರೆಸ್ ಕೈ ಹಿಡಿದ ಗ್ಯಾರಂಟಿ!

ಕಳೆದ ಎರಡು ಎಲೆಕ್ಷನ್‌ನಲ್ಲಿ ಕುಮಾರಸ್ವಾಮಿ ಒಂದೇ ಒಂದು ದೊಡ್ಡ ಕ್ಯಾಂಪೇನ್‌ ಮಾಡದೇ ಚನ್ನಪಟ್ಟಣದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಆದ್ರೆ, ಈ ಬಾರಿ ಕುಮಾರಸ್ವಾಮಿ, ದೇವೇಗೌಡರು ಬೀಡು ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಮತಶಿಕಾರಿ ಮಾಡಿದರೂ ನಿಖಿಲ್‌ ಗೆಲುವು ಸಾಧ್ಯವಾಗಿಲ್ಲ. ಹಾಗಾದ್ರೆ, ಕುಮಾರಸ್ವಾಮಿಗೆ ಬಿದ್ದಿರೋ ವೋಟ್‌ಗಳು ನಿಖಿಲ್‌ಗೆ ಯಾಕೆ ಬಿದ್ದಿಲ್ಲ ಅಂತಾ ನೋಡ್ತಾ ಹೋದರೆ ಕಾಣಿಸೋದು ಕಾಂಗ್ರೆಸ್‌ನ ಗ್ಯಾರಂಟಿ. ಹೌದು, ಮಹಿಳಾ ಮತಗಳನ್ನು ಕಾಂಗ್ರೆಸ್‌ನತ್ತ ದೊಡ್ಡ ಪ್ರಮಾಣದಲ್ಲಿ ಸೆಳೆದಿದ್ದೇ ಈ ಗ್ಯಾರಂಟಿಗಳು. ಅದರಲ್ಲಿಯೂ ಎಲೆಕ್ಷನ್‌ ಇನ್ನೇನ್‌ ಒಂದು ವಾರ ಇದೆ ಅನ್ನೋ ಟೈಮ್‌ನಲ್ಲಿ ಚನ್ನಪಟ್ಟಣ ಕ್ಷೇತ್ರದ ಗೃಹ ಲಕ್ಷ್ಮಿಯರಿಗೆ ಎರಡು ಮೂರರು ತಿಂಗಳ ಹಣ ಬಂದಿತ್ತು. ಇದು ಸ್ತ್ರೀಯರ ವೋಟ್‌ಗಳು ಕಾಂಗ್ರೆಸ್‌ನತ್ತ ಹೋಗುವಂತೆ ಮಾಡಿವೆ ಎನ್ನುಲಾಗಿದೆ.

ರಾಮನಗರದಲ್ಲಿ ಜೆಡಿಎಸ್​ ಖಾಲಿ ಖಾಲಿ

ಕರ್ನಾಟಕದಲ್ಲಿ ಅತ್ಯಂತ ಕುತೂಹಲ ಕೆರಳಿದ್ದ ಹಾಗೂ ಮೂರು ದಶಕಗಳ ಕಾಲ ಬದ್ಧ ವೈರಿಗಳಾಗಿ ರಾಜಕೀಯ ಸೆಣಸಾಟ ನಡೆಸುತ್ತಿದ್ದ ಕುಟುಂಬಗಳ ನಡುವಿನ ರಾಜಕೀಯ ಬದ್ಧ ವೈರಿಗಳ ಕಾಳಗಕ್ಕೆ ಸಾಕ್ಷಿಯಾಗಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಬಂದಿದ್ದು, ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿದ್ದಾರೆ. ಈ ಮೂಲಕ ನಿಖಿಲ್​ ಸತತವಾಗಿ ಮೂರನೇ ಸೋಲು ಅನುಭವಿಸಿದ್ದಾರೆ. ಇದರಿಂದ ಸುಮಾರು ಮೂರೂವರೆ ದಶಕಗಳ ಕಾಲ ಅಜ್ಜ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಅಪ್ಪ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ಕಟ್ಟಿ ಬೆಳೆಸಿದ ಜೆಡಿಎಸ್ ಪಕ್ಷವು ಜಿಲ್ಲೆಯಲ್ಲಿ ಎಲ್ಲಿಯೂ ಅಧಿಕಾರದಲ್ಲಿ ಇಲ್ಲದಂತಾಗಿದೆ.

ಸಣ್ಣ, ಪುಟ್ಟ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಕೆಲವೊಂದು ಸೀಟುಗಳನ್ನು ಬಿಟ್ಟರೆ ವಿಧಾನಸಭೆ, ಲೋಕಸಭೆಯಲ್ಲಿ ರಾಮನಗರ ಜಿಲ್ಲೆಯಿಂದ ದೇವೇಗೌಡರ ಕುಟುಂಬದ ಯಾವೊಬ್ಬ ಸದಸ್ಯರೂ ಇಲ್ಲದಂತಾಗಿದ್ದಾರೆ.

Published On - 9:28 pm, Sat, 23 November 24

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು