ಅಪ್ಪನ ಕ್ಷೇತ್ರ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಸೋಲಿಗೆ ಕಾರಣಗಳೇನು? ಎನ್​ಡಿಎ ಎಡವಿದ್ದೆಲ್ಲಿ?

ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಎಲ್ಲಾ ಮೂರು ಕ್ಷೇತ್ರಗಳಲ್ಲೂ ಆಡಳಿತರೂಢ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅದರಲ್ಲೂ ಮುಖ್ಯವಾಗಿ ಜಿದ್ದಾಜಿದ್ದಿಯಿಂದ ಕೂಡಿದ್ದ ಚನ್ನಪಟ್ಟಣದಲ್ಲೂ ಸಹ ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆದ್ದು ಬೀಗಿದ್ದಾರೆ. ಇನ್ನು ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸತತ ಮೂರುನೇ ಬಾರಿ ಸೋಲುಕಂಡಿದ್ದಾರೆ. ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿ-ಜೆಡಿಎಸ್​ ಎಡವಿದ್ದೆಲ್ಲಿ? ಎನ್​​ಡಿಎ ಸೋಲಿಗೆ ಪ್ರಮುಖ ಕಾರಣಗಳೇನು?

ಅಪ್ಪನ ಕ್ಷೇತ್ರ ಚನ್ನಪಟ್ಟಣದಲ್ಲಿ ಪುತ್ರ ನಿಖಿಲ್ ಸೋಲಿಗೆ ಕಾರಣಗಳೇನು? ಎನ್​ಡಿಎ ಎಡವಿದ್ದೆಲ್ಲಿ?
Follow us
ರಮೇಶ್ ಬಿ. ಜವಳಗೇರಾ
|

Updated on:Nov 23, 2024 | 5:56 PM

ಬೆಂಗಳೂರು, (ನವೆಂಬರ್ 23): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್​​ನ ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲುಕಂಡಿದ್ದಾರೆ. ಇನ್ನು ಬಿಜೆಪಿಯಿಂದ ಕಾಂಗ್ರೆಸ್​ಗೆ ಘರ್ ವಾಪ್ಸಿ ಮಾಡಿದ್ದ ಸಿಪಿ ಯೋಗೇಶ್ವರ್​​ ನಿರೀಕ್ಚೆಗೂ ಮೀರಿ ಗೆಲ್ಲುವು ಸಾಧಿಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದ ಜೆಡಿಎಸ್‌ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಸೇರಿ ಬಲ ಪಡೆದುಕೊಂಡಿತ್ತು. ಜೆಡಿಎಸ್‌ನಿಂದ ಬಿಜೆಪಿಗೂ ಬಲ ಬಂದಿತ್ತು. ಆದರೆ ಆರು ತಿಂಗಳಿನಲ್ಲಿ ನಡೆದ ಚುನಾವಣೆಯಲ್ಲಿ ಚನ್ನಪಟ್ಟಣದ ಮತದಾರ ಅಪ್ಪ ಮಕ್ಕಳನ್ನು ತಿರಸ್ಕರಿಸಿದ್ದಾರೆ. ಅದರಲ್ಲೂ ಕುಮಾರಸ್ವಾಮಿಗೆ ಸತತ ಎರಡು ಬಾರಿ ಶಾಸಕ ಸ್ಥಾನ, ಗೌಡರ ಅಳಿಯ ಡಾ.ಮಂಜುನಾಥ್‌ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಬಲ ತುಂಬಿದ್ದ ಮತದಾರ ಮತ್ತೆ ಅವರದ್ಧೇ ಕುಟುಂಬದ ಸದಸ್ಯರನ್ನು ಒಪ್ಪಿಲ್ಲ. ಬದಲಿಗೆ ಸ್ಥಳೀಯರಾದ ಯೋಗೇಶ್ವರ್‌ಗೆ ಶಕ್ತಿ ತುಂಬಿದ್ದಾರೆ.

ಚನ್ನಪಟ್ಟಣದಲ್ಲಿ ಎನ್​ಡಿಎ ಸೋಲಿಗೆ ಕಾರಣಗಳೇನು?

ಹೈವೋಲ್ಟೇಜ್ ಕ್ಷೇತ್ರವಾದ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದಾರೆ. ಹಿಂದೆ ಮಂಡ್ಯದಲ್ಲೊಮ್ಮೆ, ರಾಮನಗರದಲ್ಲಿ ಹಾಗೂ ಇದು ಮೂರನೇ ಬಾರಿ ಚನ್ನಪಟ್ಟಣದಲ್ಲಿಯೂ ಸೋಲಾಗಿದೆ. ಸೋಲಿನ ಆತಂಕದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯೇ ಅಚ್ಚರಿ ರೀತಿಯಲ್ಲಿ ಗೆಲುವು ಕಂಡಿದ್ದಾರೆ. ಇನ್ನು ಎನ್​ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಕಾರಣಗಳೇನು ಎನ್ನುವುದನ್ನು ನೋಡಿದೆರೆ ಹಲವಾರು ಇವೆ. ಅದರಲ್ಲೂ ಪ್ರಮುಖವಾಗಿ ನಿಖಿಲ್ ಕುಮಾರಸ್ವಾಮಿಗೆ ಕುಟುಂಬ ರಾಜಕಾರಣ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಉಪಚುನಾವಣೆ ಫಲಿತಾಂಶ: ಬಿಜೆಪಿ ಸೋಲಿಗೆ ಕಾರಣವಾಯ್ತು ಸ್ಥಳೀಯ ನಾಯಕತ್ವ ಕೊರತೆ, ಒಳಜಗಳ, ತಪ್ಪು ಲೆಕ್ಕಾಚಾರ

ಕುಟುಂಬ ರಾಜಕಾರಣಕ್ಕೆ ಬೇಸರ

ಈ ಹಿಂದೆ ಅಂದರೆ 2013ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿ ಸೋಲುಕಂಡಿದ್ದರು. ಬಳಿಕ ಎಚ್‌ ಡಿಕುಮಾರಸ್ವಾಮಿ ಅವರನ್ನು ಎರಡು ಬಾರಿ ಇಲ್ಲಿನ ಜನ ಗೆಲ್ಲಿಸಿದ್ದರು. ಈ ಬಾರಿಯೂ ಕುಟುಂಬದ ಮತ್ತೊಬ್ಬ ಸದಸ್ಯ ನಿಖಿಲ್ ಕುಮಾರಸ್ವಾಮಿಯನ್ನು ನಿಲ್ಲಿಸಿದ್ದದ್ದರು. ಈ ಮೂಲಕ ಕುಮಾರಸ್ವಾಮಿ ಕುಟುಂಬಕ್ಕೆ ಒತ್ತು ನೀಡಿದ್ದರು. ಇದರಿಂದ ಮತದಾರರ ಬೇಸರಗೊಂಡು ಮತ ನೀಡಿಲ್ಲ ಎನ್ನಲಾಗಿದೆ.

ಕುಮಾರಸ್ವಾಮಿಯ ನಡವಳಿಕೆ

ಸಿ.ಪಿ.ಯೋಗೇಶ್ವರ್‌ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ದೊಡ್ಡಗೌಡ ಅಳಿಯ ಡಾ.ಮಂಜುನಾಥ್‌ ಪರವಾಗಿ ಕೆಲಸ ಮಾಡಿದ್ದರು. ಈ ಬಾರಿ ಟಿಕೆಟ್‌ ಅವರಿಗೆ ನೀಡುವ ವಿಚಾರದಲ್ಲಿ ಜೆಡಿಎಸ್‌ನವರು ಸೂಕ್ತ ತೀರ್ಮಾನ ಕೈಗೊಳ್ಳಲಿಲ್ಲ. ಅವರು ಪಕ್ಷ ಬಿಡುವಾಗಲೂ ಉಳಿಸಿಕೊಳ್ಳುವ ಪ್ರಯತ್ನ ಆಗಿಲಿಲ್ಲ. ಅಲ್ಲದೇ ಯೋಗೇಶ್ವರ್​ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಅಂತೆಲ್ಲ ಆರೋಪಗಳನ್ನು ಮಾಡಿದ್ದರು. ಇದರ ಅನುಕಂಪ ಯೋಗೇಶ್ವರ್​ ಕೈಹಿಡಿಯಿತು.

ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ

ಇನ್ನು ಪ್ರಮುಖವಾಗಿ ಪ್ರಜ್ವಲ್ ರೇವಣ್ಣ ವಿರುದ್ಧ ಕೆಲ ಆರೋಪಗಳು ದೊಡ್ಡ ಗೌಡ ಕುಟುಂಬಕ್ಕೆ ಕಳಂಕತಂದಿಟ್ಟಿದೆ. ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದು, ಇದಕ್ಕೆ ಜನಸಾಮಾನ್ಯರು ಛೀ ಥೂ ಎಂದು ಉಗಿಯುವಂತಾಗಿದ್ದು, ದೊಡ್ಡಗೌಡರ ಕುಟುಂಬಕ್ಕೆ ಒಂದು ಕಪ್ಪುಚುಕ್ಕೆ ಆಯ್ತು. ಇದು ಸಹ ಚನ್ನಪಟ್ಟಣದ ಸೋಲಿಗೆ ಕಾರಣವಾಗಿದೆ.

ಕುಮಾರಸ್ವಾಮಿ ಕ್ಷೇತ್ರಕ್ಕೆ ಹೋಗದಿರುವುದು

ಇನ್ನು ಕುಮಾರಸ್ವಾಮಿ 2023ರಲ್ಲಿ ಗೆದ್ದ ಬಳಿಕ ಅಷ್ಟಾಗಿ ಕ್ಷೇತ್ರದತ್ತ ಸುಳಿದಿಲ್ಲ ಎನ್ನುವ ಆರೋಪ ಇದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಕ್ಷೇತ್ರದ ಮುಖಂಡರ ಜೊತೆಗಿನ ಸಂಬಂಧ ಅಷ್ಟಕ್ಕೆ ಸರಿಯಾಗಿ ಹೊಂದಿರಲಿಲ್ಲ. ಗೆದ್ದ ಬಳಿಕ ಮುಖಂಡರನ್ನು ಮರೆತುಬಿಟ್ಟರು ಎನ್ನುವ ಆರೋಪ ಸಹ ಇದೆ.

ಬೇರೆ ಒಕ್ಕಲಿಗರನ್ನು ಬೆಳಸುತ್ತಿಲ್ಲ ಎನ್ನುವ ಆರೋಪ

ಇನ್ನು ಮುಖ್ಯವಾಗಿ ದೊಡ್ಡ ಗೌಡರ ಕುಟುಂಬದ ವಿರುದ್ಧ ಕೆಲ ಆರೋಪಗಳಲ್ಲಿ ಇದು ಒಂದು. ದೇವೇಗೌಡ ಕುಮಾರಸ್ವಾಮಿಯನ್ನು ಬೆಳೆಸಿದ. ಇನ್ನು ಕುಮಾರಸ್ವಾಮಿ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದರು, ಇನ್ನುಳಿದಂತೆ ಇತರೆ ಒಕ್ಕಲಿಗರನ್ನು ಬೆಳಸುತ್ತಿಲ್ಲ ಎನ್ನುವ ಆರೋಪವಿದೆ. ಇನ್ನು ಒಕ್ಕಲಿಗ ಸಮುದಾಯ ಪ್ರಮುಖ ನಾಯಕ ಜಿಟಿ ದೇವೇಗೌಡ ಅವರನ್ನು ತುಳಿಯುತ್ತಿದ್ದಾರೆ ಎನ್ನುವ ಮಾತುಗಳು ಕ್ಷೇತ್ರದಲ್ಲಿ ಚರ್ಚೆ ಆಯ್ತು. ಇದನ್ನು ಸಿದ್ದರಾಮಯ್ಯ ಸಹ ಪ್ರಚಾರದ ವೇಲೆ ಬಹಿರಂಗ ವೇದಿಕೆ ಮೇಲೆ ಹೇಳಿದ್ದರು.

ಕೈಕೊಟ್ಟ ಸ್ಥಳೀಯ ನಾಯಕರು

ಇನ್ನು ಮುಖ್ಯವಾಗಿ ಸ್ಥಳೀಯ ನಾಯಕರು ಕೊನೆ ಕ್ಷಣದಲ್ಲಿ ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವುದು ನಿಖಿಲ್ ಸೋಲಿಗೆ ಪ್ರಮುಖ ಕಾರಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಚನ್ನಪಟ್ಟಣದ ಏಳು ನಗರಸಭೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದರು, ಇದು ಜೆಡಿಎಸ್​ಗೆ ಹೊಡೆತಕೊಟ್ಟಿದೆ.

  • ಆಡಳಿತಾರೂಢ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಸಿಪಿವೈಗೆ ವರವಾಗಿ ನಿಖಿಲ್‌ಗೆ ವಿರುದ್ಧವಾಯಿತು ಚನ್ನಪಟ್ಟಣದ ಅಭಿವೃದ್ಧಿಗೆ ಸರ್ಕಾರ ಕೊಟ್ಟ ಯೋಜನೆಗಳ ಭರವಸೆ.
  • ಡಿಕೆಶಿ ಹಾಗೂ ಕುಮಾರಸ್ವಾಮಿ ನಡುವಿನ ಹೋರಾಟವೆಂದೇ ಬಿಂಬಿತವಾಗಿದ್ದರಿಂದ ಡಿಕೆ ಸಹೋದರರ ಮಾಸ್ಟರ್ ಪ್ಲಾನ್ ಸಿಪಿವೈಗೆ ಬಲವಾಗಿ, ನಿಖಿಲ್‌ಗೆ ಹಿನ್ನಡೆಯಾಯಿತು.
  • JDS ಭದ್ರಕೋಟೆಯಲ್ಲಿ ಗೆಲ್ತೀವಿ ಎಂಬ ಅತಿಯಾದ ಆತ್ಮವಿಶ್ವಾಸ
  • ಕಾರಣ 02: ಅಂದುಕೊಂಡಂತೆ ನಿಖಿಲ್ ಕೈ ಹಿಡಿಯದ ಒಕ್ಕಲಿಗ ಸಮುದಾಯ
  • ಉಪಚುನಾವಣೆ ಅಭ್ಯರ್ಥಿ ಆಯ್ಕೆ ಗೊಂದಲದಲ್ಲಿದ್ದ ದಳಪತಿಗಳು
  • ಚುನಾವಣೆ 2 ತಿಂಗಳು ಇದ್ದಂತೆ ಡಿಸಿಎಂ ಡಿಕೆಶಿ ಕ್ಷೇತ್ರ ಪ್ರವಾಸದ ಲಾಭ
  • ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳಿಗೆ 500 ಕೋಟಿ ಅನುದಾನ ಎಫೆಕ್ಟ್
  • ಚನ್ನಪಟ್ಟಣದಲ್ಲಿ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದ ಇಡೀ ಸಚಿವ ಸಂಪುಟ

Published On - 5:24 pm, Sat, 23 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ