ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
Bigg Boss Kannada season 11: ಬಿಗ್ಬಾಸ್ ಭಾನುವಾರದ ಎಪಿಸೋಡ್ನಲ್ಲಿ ತ್ರಿವಿಕ್ರಮ್, ಚೈತ್ರಾ ಹಾಗೂ ಮೋಕ್ಷಿತಾ ಹಾಗೂ ಇತರೆ ಕೆಲವು ಮನೆಯ ಸದಸ್ಯರನ್ನು ಕುರಿತು ಇನ್ನು ಮುಂದೆ ಸುಮ್ಮನೆ ಕೂರಲ್ಲ, ನಾನು ಏನೆಂದು ತೋರಿಸುತ್ತೀನಿ ಎಂದಿದ್ದಾರೆ.
ಬಿಗ್ಬಾಸ್ ಭಾನುವಾರದ ಎಪಿಸೋಡ್ ಸಾಮಾನ್ಯವಾಗಿ ತಮಾಷೆಯಿಂದ ಕೂಡಿರುತ್ತದೆ. ಮನೆಯ ಸದಸ್ಯರಿಂದ ಕೆಲವು ಫನ್ ಆಟಗಳನ್ನು ಸಹ ಸುದೀಪ್ ಆಡಿಸುತ್ತಾರೆ. ಆದರೆ ಈ ಭಾನುವಾರದ ಎಪಿಸೋಡ್ ತುಸು ಗಂಭೀರವಾಗಿರಲಿದೆ. ಆ ಸೂಚನೆ ನೀಡಿದೆ ಇದೀಗ ಬಿಡುಗಡೆ ಆಗಿರುವ ಪ್ರೋಮೋ. ಸುದೀಪ್, ಮನೆಯ ಸ್ಪರ್ಧಿಗಳಿಗೆ ಗೇಮ್ ಒಂದನ್ನು ಆಡಿಸಿದ್ದಾರೆ. ಯಾವ ಗಾದೆ ಯಾರಿಗೆ ಸೂಟ್ ಆಗುತ್ತದೆಯೋ ಅವರ ಕೊರಳಿಗೆ ಹಾಕುವಂತೆ ಗಾದೆಗಳ ಸರವನ್ನು ನೀಡಲಾಗಿತ್ತು. ಚೈತ್ರಾ, ಮೋಕ್ಷಿತಾ ಇನ್ನೂ ಕೆಲವರು ತ್ರಿವಿಕ್ರಮ್ಗೆ ಕುತಂತ್ರಿ, ನರಿ ಇನ್ನಿತರೆ ಅರ್ಥ ಬರುವ ಬೋರ್ಡ್ಗಳನ್ನು ಹಾಕಿದರು. ಇದರಿಂದ ಸಿಟ್ಟಾದ ತ್ರಿವಿಕ್ರಮ್, ಚೈತ್ರಾ-ಮೋಕ್ಷಿತಾಗೆ ಸವಾಲು ಹಾಕಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Nov 24, 2024 08:55 AM
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

