ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 4 ರೋಗಿಗಳು ಸಾವು, ಉಳಿದವರ ಸ್ಥಳಾಂತರ

|

Updated on: Apr 28, 2021 | 9:18 AM

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘಟನೆಯ ಬಗ್ಗೆ ವರದಿ ಪಡೆದಿದ್ದು, ಮೃತ ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ದುರಂತ; 4 ರೋಗಿಗಳು ಸಾವು, ಉಳಿದವರ ಸ್ಥಳಾಂತರ
ಬೆಂಕಿನಂದಿಸಲು ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ
Follow us on

ಥಾಣೆ: ಮಹಾರಾಷ್ಟ್ರದ ಥಾಣೆಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಂದು ಮುಂಜಾನೆ ನಡೆದ ಅಗ್ನಿ ದುರಂತದಲ್ಲಿ ನಾಲ್ವರು ರೋಗಿಗಳು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಥಾಣೆಯ ಮುಂಬ್ರಾದಲ್ಲಿರುವ ಕೌಸಾದ ಪ್ರೈಮ್​ ಕ್ರಿಟಿಕೇರ್​ ಆಸ್ಪತ್ರೆಯಲ್ಲಿ ಮುಂಜಾನೆ 3.40ರಹೊತ್ತಿಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ಆಸ್ಪತ್ರೆಯಲ್ಲಿ ಯಾವುದೇ ಕೊರೊನಾ ರೋಗಿಗಳು ಇರಲಿಲ್ಲ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಗ್ನಿಶಾಮಕದಳದ ಸಿಬ್ಬಂದಿಗೆ ಕರೆ ಮಾಡಲಾಯಿತಾದರೂ ಅವರು ಬರುವಷ್ಟರಲ್ಲಿ ನಾಲ್ವರು ರೋಗಿಗಳ ಜೀವ ಹೋಗಿತ್ತು. ಆ್ಯಂಬುಲೆನ್ಸ್​ಗಳ ಮೂಲಕ ಉಳಿದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
ಈ ಆಸ್ಪತ್ರೆಯಲ್ಲಿ ಒಟ್ಟು 20 ಒಳರೋಗಿಗಳು ಇದ್ದರು. ಅವರಲ್ಲಿ ಆರು ಮಂದಿ ಐಸಿಯುನಲ್ಲಿ ಇದ್ದರು. ಸದ್ಯ ಅವರನ್ನೆಲ್ಲ ಬೇರೆಡೆಗೆ ಕರೆದೊಯ್ಯಲಾಗಿದೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಸ್ಥಳೀಯ ಶಾಸಕ, ಮಹಾರಾಷ್ಟ್ರ ಸಚಿವ ಜಿತೇಂದ್ರ ಅವ್ಹಾದ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಆಸ್ಪತ್ರೆಯ ಮೊದಲ ಮಹಡಿಯನ್ನು ಬೆಂಕಿ ಧ್ವಂಸಗೊಳಿಸಿದೆ. ಮೂವರು ರೋಗಿಗಳು ಜೀವಂತ ದಹನವಾಗಿದ್ದಾರೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘಟನೆಯ ಬಗ್ಗೆ ವರದಿ ಪಡೆದಿದ್ದು, ಮೃತ ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. ಹಾಗೇ, ಗಾಯಗೊಂಡವರಿಗೆ ತಲಾ ಒಂದು ಲಕ್ಷ ರೂ.ನೀಡಲಾಗುವುದು ಎಂದಿದ್ದಾರೆ.

ಪಲ್ಗರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಏಪ್ರಿಲ್​ 23ರಂದು ನಡೆದ ಅಗ್ನಿ ದುರಂತದಲ್ಲಿ 15 ರೋಗಿಗಳು ಮೃತಪಟ್ಟಿದ್ದರು.

ಇದನ್ನೂ ಓದಿ:ಮಾಜಿ ಪೊಲೀಸ್ ಆಯುಕ್ತ ಪರಮ್ ಸಿಂಗ್ ವಿರುದ್ಧ ಪ್ರಾಥಮಿಕ ತನಿಖೆ ನಡೆಸಿ, ತಕ್ಷಣ ರಿಪೋರ್ಟ್​ ಕೊಡಿ: ಮಹಾರಾಷ್ಟ್ರ ಸರ್ಕಾರ

ಕಾರಾಗೃಹದಲ್ಲಿನ ಕೈದಿಗಳಿಗೆ ಕೊರೊನಾ ಸೊಂಕು; ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

Fire broke out at private hospital in Maharashtra 4 people Died