ಕಾರಾಗೃಹದಲ್ಲಿನ ಕೈದಿಗಳಿಗೆ ಕೊರೊನಾ ಸೊಂಕು; ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ

ಜೈಲಿನಲ್ಲಿ ಕೊರೊನಾ ಸೋಂಕು ಈಗಾಗಲೇ 9 ಜನ ಕೈದಿಗಳಿಗೆ ಹರಡಿದ್ದು, ಇದರಿಂದ ಇನ್ನೀತರ ಕೈದಿಗಳಿಗೂ ಹರಡುವ ಆತಂಕ ಎದುರಾಗಿದೆ. ಹೀಗಾಗಿ ಕೊರೊನಾ ಲಕ್ಷಣಗಳಿರುವ ಇನ್ನೂ ಕೆಲವು ಆರೋಪಿಗಳನ್ನು ಜೈಲಿನ ಮೊದಲನೇ ಪ್ಲೋರ್​ನಲ್ಲಿ ಐಸೋಲೇಟ್ ಮಾಡಲಾಗಿದೆ.

ಕಾರಾಗೃಹದಲ್ಲಿನ ಕೈದಿಗಳಿಗೆ ಕೊರೊನಾ ಸೊಂಕು; ಚಿಕ್ಕಬಳ್ಳಾಪುರ ಜೈಲು ಅಧಿಕಾರಿಗಳಲ್ಲಿ ಹೆಚ್ಚಿದ ಆತಂಕ
ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹ
Follow us
preethi shettigar
|

Updated on:Apr 28, 2021 | 8:59 AM

ಚಿಕ್ಕಬಳ್ಳಾಪುರ: ಅಪರಾಧ ವೆಸಗಿ ಜೈಲು ಸೇರಿದವನ್ನು ಕೂಡ ಎರಡನೇ ಅಲೆಯ ಕೊರೊನಾ ಸೋಂಕು ಬೆಂಬಿಡದೆ ಕಾಡುತ್ತಿದೆ. ಚಿಕ್ಕಬಳ್ಳಾಪುರ ನಗರ ಹೊರಹೊಲಯದ ಅಣಕನೂರು ಗ್ರಾಮದ ಬಳಿ ಇರುವ ಜಿಲ್ಲಾ ಕಾರಾಗೃಹದಲ್ಲಿ ಕೊರೊನಾ ಕಂಡು ಬಂದಿದೆ. ಜೈಲು ನಗರದಿಂದ ದೂರ ಇದ್ದರೂ ಕೂಡ ಕೊರೊನಾ ಪತ್ತೆಯಾಗಿದ್ದು, ಇದರಿಂದ ಪೊಲೀಸರಲ್ಲಿ ಮತ್ತು ಕೈದಿಗಳಲ್ಲಿ ಆತಂಕ ಮನೆ ಮಾಡಿದೆ. ಈಗಾಗಲೇ ಜೈಲಿನಲ್ಲಿರುವ ಕೆಲವು ಕೈದಿಗಳಿಗೆ ಕೊರೊನಾ ಪಾಸಿಟಿವ್ ಆಗಿದ್ದು, 9 ಜನ ಕೈದಿಗಳನ್ನು ಜೈಲಿನಿಂದ ಆಸ್ಪತ್ರೆಗೆ ಹೆಚ್ಚಿನ ಚಿಕೀತ್ಸೆಗಾಗಿ ದಾಖಲು ಮಾಡಲಾಗಿದೆ.

ಜೈಲಿನಲ್ಲಿ ಕೊರೊನಾ ಸೋಂಕು ಈಗಾಗಲೇ 9 ಜನ ಕೈದಿಗಳಿಗೆ ಹರಡಿದ್ದು, ಇದರಿಂದ ಇನ್ನೀತರ ಕೈದಿಗಳಿಗೂ ಹರಡುವ ಆತಂಕ ಎದುರಾಗಿದೆ. ಹೀಗಾಗಿ ಕೊರೊನಾ ಲಕ್ಷಣಗಳಿರುವ ಇನ್ನೂ ಕೆಲವು ಆರೋಪಿಗಳನ್ನು ಜೈಲಿನ ಮೊದಲನೇ ಪ್ಲೋರ್​ನಲ್ಲಿ ಐಸೋಲೇಟ್ ಮಾಡಲಾಗಿದೆ. ಇನ್ನೂ ಜೈಲಿನಲ್ಲಿ ಇನ್ನೂರಕ್ಕೂ ಹೆಚ್ಚು ಕೈದಿಗಳಿದ್ದು, ಅವರಿಗೂ ಕೊರೊನಾ ಸೋಂಕಿನ ಭೀತಿ ಎದುರಾಗಿದೆ. 9 ಜನ ಕೊರೊನಾ ಸೋಂಕಿತರನ್ನು ಜೈಲಿನಿಂದ ಆಚೆ ಕಂದವಾರದ ಬಳಿ ಇರುವ ಆರೋಗ್ಯ ಇಲಾಖೆಯ ಎ.ಎನ್.ಎಮ್ ಟ್ರೈನಿಂಗ್ ಕೇಂದ್ರದಲ್ಲಿ ಐಸೋಲೇಟ್ ಮಾಡಿ ವೈದ್ಯರ ಮೂಲಕ ಚಿಕೀತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ ಹೇಳಿದ್ದಾರೆ.

ಕೊರೊನಾ ಸೋಂಕಿತ ವಿಚಾರಣಾಧೀನ ಕೈದಿಗಳನ್ನು ಎ.ಎನ್.ಎಮ್ ಟ್ರೈನಿಂಗ್ ಕೇಂದ್ರದಲ್ಲಿ ಐಸೋಲೇಟ್ ಮಾಡಿದ್ದಾರೆ. ಇದರಿಂದ ಎ.ಎನ್.ಎಮ್ ಟ್ರೈನಿಂಗ್ ಕೇಂದ್ರದ ಸುತ್ತಮುತ್ತ ವಸತಿ ಬಡಾವಣೆಗಳಿದ್ದು, ಅಲ್ಲಿರುವ ಜನ ತಮಗೂ ಎಲ್ಲಿ ಕೊರೊನಾ ಸೋಂಕು ಹರಡುತ್ತದೆಯೋ ಏನೊ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕು ಜೈಲು ಪ್ರವೇಶ ಮಾಡಿರುವುದು ಜೈಲಿನಲ್ಲಿರುವ ಇನ್ನೀತರ ಕೈದಿಗಳ ಆತಂಕಕ್ಕೆ ಕಾರಣವಾಗಿದೆ. ಇನ್ನೂ ಜೈಲು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ಸೂಕ್ತ ಮುನ್ನೇಚ್ಚರಿಕೆ ಕೈಗೊಳ್ಳಬೇಕಿದ್ದು, ಜೈಲಿನಲ್ಲಿ ಸೋಂಕು ಹೆಚ್ಚಾಗುವುದನ್ನು ತಡೆಯುವ ಪ್ರಯತ್ನ ಮಾಡಬೇಕಿದೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಒಂದೇ ದಿನ 606 ಮಂದಿಯಲ್ಲಿ ಕೊರೊನಾ ಸೋಂಕುಪತ್ತೆ: ರಾಜ್ಯದಲ್ಲಿ ಒಟ್ಟು 1203 ಹೊಸ ಪ್ರಕರಣಗಳು

ಮಾಜಿ ಶಾಸಕರ ಪುತ್ರಿ ಮದುವೆ ಬಳಿಕ 8 ಜನರಿಗೆ ಕೊರೊನಾ ಪಾಸಿಟಿವ್

(Nine prisoners are infected by coronavirus in Chikkaballapur District Prison)

Published On - 8:58 am, Wed, 28 April 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ