ಕೃಷಿ ತ್ಯಾಜ್ಯ ದಹನ: 121 ರೈತರಿಗೆ 3 ಲಕ್ಷ ದಂಡ, 59 ರೈತರ ವಿರುದ್ಧ FIR, ಯಾವೂರಲ್ಲಿ?

|

Updated on: Nov 15, 2020 | 12:44 PM

ಚಂಡೀಗಢ: ಕೃಷಿ ತ್ಯಾಜ್ಯ ದಹನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 121 ರೈತರು ಬರೋಬ್ಬರಿ 3 ಲಕ್ಷ ರೂಪಾಯಿ ದಂಡ ತೆರಬೇಕಾದ ಪರಿಸ್ಥಿತಿ ಪಂಜಾಬ್​ನ ಮೊಹಾಲಿಯಲ್ಲಿ ಬೆಳಕಿಗೆ ಬಂದಿದೆ. ಬೆಳೆ ಕಟಾವಿನ ನಂತರ ಉಳಿದ ತ್ಯಾಜ್ಯವನ್ನು ಈ ರೈತರು ಸುಟ್ಟುಹಾಕಿದ್ದರು. ಇದರಿಂದ, ಪಂಜಾಬ್​ ಸೇರಿದಂತೆ ನೆರೆಯ ದೆಹಲಿಯಲ್ಲೂ ಸಹ ಬಹಳಷ್ಟು ವಾಯುಮಾಲಿನ್ಯ ಉಂಟಾಗಿದೆ. ಜಿಲ್ಲಾಡಳಿತ ಈ ಹಿಂದೆ, ರೈತರಿಗೆ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚದಂತೆ ಎಚ್ಚರಿಕೆ ಸಹ ನೀಡಿತ್ತು ಎಂದು ತಿಳಿದುಬಂದಿದೆ. ಆದರೂ, ರೈತರು ಕೃಷಿ ತ್ಯಾಜ್ಯ ದಹನಕ್ಕೆ ಮುಂದಾದ […]

ಕೃಷಿ ತ್ಯಾಜ್ಯ ದಹನ: 121 ರೈತರಿಗೆ 3 ಲಕ್ಷ ದಂಡ, 59 ರೈತರ ವಿರುದ್ಧ FIR, ಯಾವೂರಲ್ಲಿ?
Follow us on

ಚಂಡೀಗಢ: ಕೃಷಿ ತ್ಯಾಜ್ಯ ದಹನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 121 ರೈತರು ಬರೋಬ್ಬರಿ 3 ಲಕ್ಷ ರೂಪಾಯಿ ದಂಡ ತೆರಬೇಕಾದ ಪರಿಸ್ಥಿತಿ ಪಂಜಾಬ್​ನ ಮೊಹಾಲಿಯಲ್ಲಿ ಬೆಳಕಿಗೆ ಬಂದಿದೆ. ಬೆಳೆ ಕಟಾವಿನ ನಂತರ ಉಳಿದ ತ್ಯಾಜ್ಯವನ್ನು ಈ ರೈತರು ಸುಟ್ಟುಹಾಕಿದ್ದರು. ಇದರಿಂದ, ಪಂಜಾಬ್​ ಸೇರಿದಂತೆ ನೆರೆಯ ದೆಹಲಿಯಲ್ಲೂ ಸಹ ಬಹಳಷ್ಟು ವಾಯುಮಾಲಿನ್ಯ ಉಂಟಾಗಿದೆ. ಜಿಲ್ಲಾಡಳಿತ ಈ ಹಿಂದೆ, ರೈತರಿಗೆ ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚದಂತೆ ಎಚ್ಚರಿಕೆ ಸಹ ನೀಡಿತ್ತು ಎಂದು ತಿಳಿದುಬಂದಿದೆ. ಆದರೂ, ರೈತರು ಕೃಷಿ ತ್ಯಾಜ್ಯ ದಹನಕ್ಕೆ ಮುಂದಾದ ಹಿನ್ನೆಲೆಯಲ್ಲಿ ಅವರಿಗೆ ದಂಡ ವಿಧಿಸಲಾಗಿದೆ.

ವಾಯುಮಾಲಿನ್ಯಕ್ಕೆ ಉತ್ತೇಜನೆ ನೀಡಿರುವ ಆರೋಪದಡಿ 59 ರೈತರ ವಿರುದ್ಧ FIRದಾಖಲಿಸಲಾಗಿದೆ. ಬೆಳೆ ಕಟಾವಿನ ನಂತರ ತ್ಯಾಜ್ಯವನ್ನು ಸುಡುವ ಪರಿಪಾಠ ದೆಹಲಿಯ ಆಸುಪಾಸಿನ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಆದರೆ, ಸರ್ಕಾರದ ಯಾವುದೇ ಕ್ರಮಕ್ಕೂ ರೈತರು ಜಗ್ಗುತ್ತಿಲ್ಲ. ಬೆಂಕಿ ಹಾಕಿದ ರೈತರ ಭೂ ನಕಾಶೆಯ ಮೇಲೆ ಕೆಂಪು ಗುರುತು ಮಾಡಲಾಗುತ್ತಿದೆ. ಸರ್ವೆಯೊಂದರ ಪ್ರಕಾರ ಶೇ. 50ರಷ್ಟು ರೈತರು ಕಟಾವಿನ ನಂತರ ಕೃಷಿ ತ್ಯಾಜ್ಯ ಸುಡುವಿಕೆಯಲ್ಲಿ ತೊಡಗಿದ್ದಾರೆ. ಅಂತಹ ರೈತರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.