ಐಐಟಿ ಗಾಂಧಿನಗರದಲ್ಲಿ ಇಂದಿನಿಂದ ಮೊದಲ ಆಸ್ಟ್ರೇಲಿಯನ್- ಭಾರತ ಶಿಕ್ಷಣ ಮತ್ತು ಕೌಶಲ್ಯ ಸಮ್ಮೇಳನ

|

Updated on: Nov 06, 2023 | 12:02 PM

ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯಗಳ ಭವಿಷ್ಯವನ್ನು ರೂಪಿಸುವ ಗುರಿಯೊಂದಿಗೆ ಪರಸ್ಪರ ಒಪ್ಪಿಗೆಯ ಆದ್ಯತೆಗಳನ್ನು ಚರ್ಚಿಸಲು ಶಿಕ್ಷಣ ಮತ್ತು ಕೌಶಲ್ಯ ತಜ್ಞರಿಗೆ ಈ ಸಮ್ಮೇಳನವು ವೇದಿಕೆಯನ್ನು ಒದಗಿಸುತ್ತದೆ.

ಐಐಟಿ ಗಾಂಧಿನಗರದಲ್ಲಿ ಇಂದಿನಿಂದ ಮೊದಲ ಆಸ್ಟ್ರೇಲಿಯನ್- ಭಾರತ ಶಿಕ್ಷಣ ಮತ್ತು ಕೌಶಲ್ಯ ಸಮ್ಮೇಳನ
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
Follow us on

ನವದೆಹಲಿ: ಆಸ್ಟ್ರೇಲಿಯಾ ಮತ್ತು ಭಾರತ ಶಿಕ್ಷಣ ಮತ್ತು ಕೌಶಲ್ಯ ಮಂಡಳಿ (ಎಐಇಎಸ್‌ಸಿ)ಯ ಮೊದಲ ಸಭೆ ಇಂದು ಐಐಟಿ ಗಾಂಧಿನಗರದಲ್ಲಿ ನಡೆಯಲಿದೆ. ಎಐಎಎಸ್​ಸಿ (AIESC) ಎರಡು ದೇಶಗಳ ನಡುವಿನ ಶಿಕ್ಷಣ, ತರಬೇತಿ ಮತ್ತು ಸಂಶೋಧನಾ ಪಾಲುದಾರಿಕೆಗಳ ಕಾರ್ಯತಂತ್ರವನ್ನು ರೂಪಿಸಲು 2011ರಲ್ಲಿ ಸ್ಥಾಪಿಸಲಾದ ದ್ವಿ-ರಾಷ್ಟ್ರೀಯ ಸಂಸ್ಥೆಯಾಗಿದೆ. ಎರಡೂ ದೇಶಗಳ ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಶಿಕ್ಷಣ ಮತ್ತು ಕೌಶಲ್ಯ ಪರಿಸರ ವ್ಯವಸ್ಥೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸಲು ಈ ವೇದಿಕೆ ಸಹಕಾರಿಯಾಗಿದೆ.

ಶಿಕ್ಷಣ ಮತ್ತು ಕೌಶಲ್ಯವನ್ನು ಒಂದೇ ಸಾಂಸ್ಥಿಕ ವೇದಿಕೆಯಡಿ ತರುತ್ತಿರುವುದು ಇದೇ ಮೊದಲು. ಈ ಭೇಟಿಯು ಶಿಕ್ಷಣ ಮತ್ತು ಪರಿಣತಿಯ ಕ್ಷೇತ್ರದಲ್ಲಿ ಪರಸ್ಪರ ಆಸಕ್ತಿಯ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ, ಪಾಲುದಾರಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಭಾರತ ಸರ್ಕಾರದ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ಧರ್ಮೇಂದ್ರ ಪ್ರಧಾನ್ ಈ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ

ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಲ್ಲಿ ಶಿಕ್ಷಣ ಮತ್ತು ಕೌಶಲ್ಯಗಳ ಭವಿಷ್ಯವನ್ನು ರೂಪಿಸುವ ಗುರಿಯೊಂದಿಗೆ ಪರಸ್ಪರ ಒಪ್ಪಿಗೆಯ ಆದ್ಯತೆಗಳನ್ನು ಚರ್ಚಿಸಲು ಶಿಕ್ಷಣ ಮತ್ತು ಕೌಶಲ್ಯ ತಜ್ಞರಿಗೆ ಈ ಸಮ್ಮೇಳನವು ವೇದಿಕೆಯನ್ನು ಒದಗಿಸುತ್ತದೆ. ಇದರಲ್ಲಿನ ಚರ್ಚೆಗಳು ಭವಿಷ್ಯದ ಕಾರ್ಯಪಡೆಯನ್ನು ರೂಪಿಸುವುದು, ಶಿಕ್ಷಣದಲ್ಲಿ ಸಾಂಸ್ಥಿಕ ಪಾಲುದಾರಿಕೆಯನ್ನು ಬಲಪಡಿಸುವುದು ಮತ್ತು ಅಂತಾರಾಷ್ಟ್ರೀಕರಣದ ಮೂಲಕ ಸಂಶೋಧನೆಯ ಪ್ರಭಾವವನ್ನು ಹೆಚ್ಚಿಸುವುದು ಈ 3 ಪ್ರಮುಖ ವಿಷಯಗಳನ್ನು ಕೇಂದ್ರೀಕರಿಸಿರುತ್ತವೆ.

ಇದನ್ನೂ ಓದಿ: Rajasthan: ಗುರುದ್ವಾರದ ಬಗ್ಗೆ ವಿವಾದಾತ್ಮಕ ಹೇಳಿಕೆ, ಬಿಜೆಪಿ ನಾಯಕ ಸಂದೀಪ್ ಪಕ್ಷದಿಂದ ಉಚ್ಚಾಟನೆ

ಈ ಸಭೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾದ ಹಿರಿಯ ಸರ್ಕಾರಿ ಅಧಿಕಾರಿಗಳು, ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. 2 ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಜೇಸನ್ ಕ್ಲೇರ್ ಸಂಸದರು ಒಟ್ಟಾಗಿ ವಿವಿಧ ಶಿಕ್ಷಣ ಮತ್ತು ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಭಾರತದಲ್ಲಿನ ಆಸ್ಟ್ರೇಲಿಯನ್ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳ ಗಿಫ್ಟ್ ಸಿಟಿ ಸೈಟ್‌ಗಳಿಗೆ ಸಹ ಭೇಟಿ ನೀಡಲಾಗುವುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ