ಕೇರಳದಲ್ಲಿ ಸಂಚರಿಸಿದ ಎರಡು ಬಣ್ಣದ ವಂದೇ ಭಾರತ್ ರೈಲು, ‘ಜಸ್ಟ್ ಲುಕಿಂಗ್ ಲೈಕ್ ಎ ವಾವ್ ಎಂದ ರೈಲ್ವೆ ಸಚಿವಾಲಯ
ಕೇರಳದ ತಿರುವನಂತಪುರಂ-ಕಾಸರಗೋಡು ವಿಭಾಗದಲ್ಲಿ ವೆಲ್ಲಾಯಿಲ್ ನಿಲ್ದಾಣವನ್ನು ಸಂಚರಿಸುತ್ತಿರುವ ನೀಲಿ ಮತ್ತು ಕಿತ್ತಳೆ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಫೋಟೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ಇನ್ನು ಟ್ವೀಟ್ನಲ್ಲಿ ಫೋಟೋವನ್ನು ಹಂಚಿಕೊಂಡು ತುಂಬಾ ಸುಂದರ, ತುಂಬಾ ಸೊಗಸಾಗಿ, ವಾವ್ ಎಂದು ಬರೆದುಕೊಂಡಿದ್ದಾರೆ.
ಭಾರತೀಯ ರೈಲ್ವೆ ಸಚಿವಾಲಯವು ದೇಶದ ರೈಲ್ವೆ ಇಲಾಖೆಗಳಲ್ಲಿ ನಡೆಯುವ ಅನೇಕ ಆಕರ್ಷಕ ಸಂಗತಿಗಳು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತದೆ. ರೈಲ್ವೆ ಇಲಾಖೆಯ ಹೊಸ ಹೊಸ ಯೋಜನೆಗಳು, ತಂತ್ರಜ್ಞಾನಗಳು, ಪ್ರಯಾಣಿಕರ ಅನುಕೂಲಕ್ಕೆ ಆಗುವ ಆ್ಯಪ್ಗಳ ಬಗ್ಗೆ ತಿಳಿಸುತ್ತಿರುತ್ತದೆ. ಇದರ ಜತೆಗೆ ಆಕರ್ಷಕ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತದೆ. ಇದೀಗ ಕೇರಳದಲ್ಲಿ ಪ್ರಯಾಣಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲಿನ ಫೋಟೋವನ್ನು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದೆ. ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದ ಅನೇಕ ಭಾಗಗಳಲ್ಲಿ ಸಂಚರಿಸುತ್ತಿದೆ. ಇತರ ರೈಲಿಗಳಿಗಿಂತ ಹೆಚ್ಚು ಸಮಯ ಉಳಿಸುವ ಮತ್ತು ಅತೀ ವೇಗವನ್ನು ಹೊಂದಿದೆ. ಇದು ಕೂಡ ಮೇಕ್ ಇನ್ ಇಂಡಿಯಾದ ಒಂದು ಭಾಗವಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ನೀಲಿ ಬಣ್ಣವನ್ನು ಮಾತ್ರ ಹೊಂದಿತ್ತು. ಆದರೆ ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ಕಿತ್ತಳೆ ಬಣ್ಣದು ಕೂಡ ಬಂದಿದೆ. ಈ ಎರಡು ಬಣ್ಣ ರೈಲುಗಳು ಕೇರಳದಲ್ಲಿ ಸಂಚರಿಸಿದೆ. ಈ ಫೋಟೋವನ್ನು ಭಾರತೀಯ ರೈಲ್ವೆ ಸಚಿವಾಲಯ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದೆ.
ಕೇರಳದ ತಿರುವನಂತಪುರಂ-ಕಾಸರಗೋಡು ವಿಭಾಗದಲ್ಲಿ ವೆಲ್ಲಾಯಿಲ್ ನಿಲ್ದಾಣವನ್ನು ಸಂಚರಿಸುತ್ತಿರುವ ನೀಲಿ ಮತ್ತು ಕಿತ್ತಳೆ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಫೋಟೋವನ್ನು ರೈಲ್ವೆ ಸಚಿವಾಲಯ ಹಂಚಿಕೊಂಡಿದೆ. ಇನ್ನು ಟ್ವೀಟ್ನಲ್ಲಿ ಫೋಟೋವನ್ನು ಹಂಚಿಕೊಂಡು ತುಂಬಾ ಸುಂದರ, ತುಂಬಾ ಸೊಗಸಾಗಿ, ವಾವ್ ಎಂದು ಬರೆದುಕೊಂಡಿದ್ದಾರೆ.
ರೈಲ್ವೆ ಸಚಿವಾಲಯ ಹಂಚಿಕೊಂಡ ಫೋಟೋ ಇಲ್ಲಿದೆ:
Blue and Tangerine #VandeBharatExpress
So beautiful, so elegant, just looking like a wow!
Location: Vellayil Station in Thiruvananthapuram- Kasaragod section of Kerala pic.twitter.com/qpcohOyLFw
— Ministry of Railways (@RailMinIndia) November 4, 2023
2022ರ ಸೆಪ್ಟೆಂಬರ್ 24 ರಂದು ಪ್ರಧಾನಿ ನರೇಂದ್ರ ಮೋದಿ ಒಂಬತ್ತು ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದರು. ಕೇರಳಕ್ಕೂ ಈ ಸೇವೆಯನ್ನು ವಿಸ್ತರಿಸಲಾಗಿತ್ತು. ಮೊದಲ ಹಂತದಲ್ಲಿ ನೀಲಿ ಬಣ್ಣ ಹಾಗೂ ಎರಡನೇ ಹಂತದಲ್ಲಿ ಕಿತ್ತಳೆ ಬಣ್ಣದ ರೈಲುಗಳನ್ನು ನೀಡಲಾಗಿತ್ತು. ಕಿತ್ತಳೆ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ಕಾಸರಗೋಡು-ತಿರುವನಂತಪುರಂ ಮಾರ್ಗದಲ್ಲಿ ಚಲಿಸುತ್ತದೆ.
ಇದನ್ನೂ ಓದಿ:ಕೇರಳದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಚಾಲನೆ
ಕೇರಳಕ್ಕೆ ಎಪ್ರಿಲ್ನಲ್ಲಿ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ಪಡೆದುಕೊಂಡಿತ್ತು. ಅದು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು 11 ಜಿಲ್ಲೆಗಳಲ್ಲಿ ಪ್ರಯಾಣಿಸಿತ್ತು. ಇದು ಗುರುವಾರ ಒಂದು ಬಿಟ್ಟು ವಾರದ ಮತ್ತೆ ಎಲ್ಲ ದಿನವು ಇದು ಪ್ರಯಾಣಿಸುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅರೆ-ಹೈ-ವೇಗದ, ಸ್ವಯಂ ಚಾಲಿತ ರೈಲು ಸೆಟ್ ಆಗಿದ್ದು, ಇದು ಪ್ರಯಾಣಿಕರ ಅತ್ಯಾಧುನಿಕ ಸೌಕರ್ಯಗಳನ್ನು ನೀಡುತ್ತದೆ. ಪ್ರಯಾಣಿಕರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Mon, 6 November 23