Har Ghar Ganga jal: ಸಿಎಂ ನಿತೀಶ್ ವಿಶಿಷ್ಟ ಯೋಜನೆಯ ಫಲ – ಗಂಗಾ ಪ್ರವಾಹ ಬಿಹಾರ ಜನತೆಯ ನೀರಿನ ದಾಹ ನೀಗಿಸಲಿದೆ!

| Updated By: ಸಾಧು ಶ್ರೀನಾಥ್​

Updated on: Nov 22, 2022 | 7:44 PM

Har Ghar Ganga jal: ಜಲ ಜೀವನ್ ಹರಿಯಾಲಿ ಮಿಷನ್ ಅನುಸಾರ ದೇಶದಲ್ಲಿಯೇ ಮೊದಲನೆಯದಾದ ಗಂಗಾ ನೀರು ಸರಬರಾಜು ಯೋಜನೆಯು ನಾಲ್ಕು ತಿಂಗಳ ಕಾಲ ಜಲಾಶಯಗಳಲ್ಲಿ ಪ್ರವಾಹದ ನೀರನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ.

Har Ghar Ganga jal: ಸಿಎಂ ನಿತೀಶ್ ವಿಶಿಷ್ಟ ಯೋಜನೆಯ ಫಲ - ಗಂಗಾ ಪ್ರವಾಹ ಬಿಹಾರ ಜನತೆಯ ನೀರಿನ ದಾಹ ನೀಗಿಸಲಿದೆ!
ಸಿಎಂ ನಿತೀಶ್ ವಿಶಿಷ್ಟ ಯೋಜನೆಯ ಫಲ - ಗಂಗಾ ಪ್ರವಾಹ ಬಿಹಾರ ಜನತೆಯ ನೀರಿನ ದಾಹ ನೀಗಿಸಲಿದೆ!
Follow us on

ಗಂಗಾ ನೀರು ಸರಬರಾಜು ಯೋಜನೆಯಡಿ ಬಿಹಾರದ ಬೋಧಗಯಾ, ಗಯಾ ಮತ್ತು ರಾಜಗೀರ್‌ನ ಜನರು ಕುಡಿಯಲು ಶುದ್ಧ ಮತ್ತು ಸಂಸ್ಕರಿಸಿದ ಗಂಗಾಜಲವನ್ನು ಪಡೆಯಲಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Chief Minister Nitish Kumar) ಹೊಸ ಯೋಜನೆ ಕೈಗೆತ್ತಿಕೊಂಡಿದ್ದಾರೆ. ವಾಸ್ತವದ ನೆಲೆಗಟ್ಟಿನಲ್ಲಿ ಈ ಪ್ರದೇಶಗಳಲ್ಲಿ ಪ್ರವಾಹದ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ. ಸಿಎಂ ನಿತೀಶ್ ಕನಸಿನ ಯೋಜನೆಯಾದ ‘ಹರ್ ಘರ್ ಗಂಗಾಜಲ್’ ಯಶಸ್ವಿಯಾಗಿ (Har Ghar Ganga jal) ಅನುಷ್ಠಾನಗೊಂಡಿದ್ದು, ಬಿಹಾರದ ಲಕ್ಷಾಂತರ ಜನರು ಹಾಗೂ ಪ್ರವಾಸಿಗರ ಮುಖದಲ್ಲಿ ಸಂತಸ ಮೂಡಿಸಲಿದೆ. ಮುಖ್ಯಮಂತ್ರಿ ಜೊತೆಗೆ, ಜಲಸಂಪನ್ಮೂಲ ಅಭಿವೃದ್ಧಿ ಮತ್ತು ಐಪಿಆರ್‌ಡಿ ಸಚಿವ ಸಂಜಯ್ ಕುಮಾರ್ ಝಾ ಮತ್ತು ಇಂಜಿನಿಯರಿಂಗ್ ಕ್ಷೇತ್ರದ ದೈತ್ಯ ಕಂಪನಿಯಾದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್  Megha Engineering & Infrastructures Ltd -MEIL) ಈ ಕಾರ್ಯದಲ್ಲಿ ತನ್ನ ಕೊಡುಗೆಯನ್ನು ಸಲ್ಲಿಸಿರುವುದು ಮೆಚ್ಚುಗೆ ಪಾತ್ರವಾಗಿದೆ.

ಗಂಗಾ ನದಿಯು ಬಿಹಾರದ ಈ ಪ್ರದೇಶಗಳ ಮೂಲಕ ಹರಿಯುತ್ತದೆ. ಆದರೆ ಭೌಗೋಳಿಕ ಸ್ಥಿತ್ಯಂತರದಿಂದಾಗಿ ನೀರು ದಕ್ಷಿಣ ಬಿಹಾರವನ್ನು ತಲುಪುವುದಿಲ್ಲ. ನೀರಿನ ಕೊರತೆಯಿಂದಾಗಿ ಕೆಲವು ಪ್ರದೇಶಗಳು ವರ್ಷವಿಡೀ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತವೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಅಪರೂಪದ ಪರಿಕಲ್ಪನೆಯ ಮತ್ತು ದೇಶದಲ್ಲೇ ಮೊದಲ ಯೋಜನೆಗೆ ಇದೀಗ ಚಾಲನೆ ನೀಡಲಾಗಿದ್ದು, ಮಳೆಗಾಲದಲ್ಲಿ ಹೆಚ್ಚುವರಿ ನದಿ ನೀರನ್ನು ಜಲಾಶಯಗಳಲ್ಲಿ ಸಂಗ್ರಹಿಸಿ, ವರ್ಷದ 365 ದಿನವೂ ಜನರಿಗೆ ಕುಡಿಯುವ ನೀರು ಪೂರೈಸಲಾಗುವುದು.

ಜಲ ಜೀವನ್ ಹರಿಯಾಲಿ ಮಿಷನ್ ಅಡಿ, ದೇಶದಲ್ಲಿ ಈ ರೀತಿಯ ಮೊದಲ ಗಂಗಾ ನೀರು ಸರಬರಾಜು ಯೋಜನೆಯು ನಾಲ್ಕು ತಿಂಗಳ ಕಾಲ ಜಲಾಶಯಗಳಲ್ಲಿ ಪ್ರವಾಹದ ನೀರನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಈ ಪ್ರಮುಖ ನಗರಗಳಲ್ಲಿ ಮನೆಗಳಿಗೆ ನೀರು ಸರಬರಾಜು ಮಾಡುವ ಮುನ್ನ ಸಂಗ್ರಹಿಸಿದ ನೀರನ್ನು ಸಂಸ್ಕರಿಸಿ, ಕುಡಿಯಲು ಯೋಗ್ಯವಾಗುವಂತೆ ಸುರಕ್ಷಿತಗೊಳಿಸಲಾಗುತ್ತದೆ. ರಾಜಗೀರ್, ಗಯಾ ಮತ್ತು ಬೋಧಗಯಾದಲ್ಲಿ ಸಿಎಂ ನಿತೀಶ್ ಈ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಸಿಎಂ ನಿತೀಶ್ ಕುಮಾರ್ ಅವರು ನವೆಂಬರ್ 27 ರಂದು ರಾಜ್‌ಗಿರ್‌ನಲ್ಲಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ, ನವೆಂಬರ್ 28 ರಂದು ಗಯಾ ಮತ್ತು ಬೋಧಗಯಾದಲ್ಲಿ ಯೋಜನೆಯ ಮೊದಲ ಹಂತವನ್ನು ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ಮೂರು ನಗರಗಳಲ್ಲಿ ಪ್ರಾರಂಭಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಇದರಿಂದಾಗಿ ನೀರಿನ ಬೇಡಿಕೆ ಹೆಚ್ಚಾಗುತ್ತದೆ. ಈ ಯೋಜನೆಯು ಮೊದಲ ಹಂತದಲ್ಲಿ ರಾಜ್‌ಗೀರ್, ಗಯಾ ಮತ್ತು ಬೋಧಗಯಾ ನಗರಗಳಿಗೆ ಸಂಗ್ರಹಿಸಿದ ನೀರನ್ನು ಪೂರೈಸುತ್ತದೆ.

ಈ ಯೋಜನೆಯ ಕುರಿತು ಡಿಸೆಂಬರ್ 2019 ರಲ್ಲಿ ಬೋಧಗಯಾದಲ್ಲಿ ವಿಶೇಷ ಕ್ಯಾಬಿನೆಟ್ ಸಭೆಯನ್ನು ಕರೆಯಲಾಗಿತ್ತು. ಇದರಲ್ಲಿ ಸಿಎಂ ನಿತೀಶ್ ಈ ಐತಿಹಾಸಿಕ ನಗರಗಳಿಗೆ ಗಂಗಾಜಲವನ್ನು ತರುವ ಸಂಕಲ್ಪವನ್ನು ಘೋಷಿಸಿದ್ದರು. ಇದೇ ನವೆಂಬರ್ ತಿಂಗಳ 27 ಮತ್ತು 28 ರಂದು ಮುಖ್ಯಮಂತ್ರಿಯವರು ಈ ಮೆಗಾ ಯೋಜನೆಯ ಉದ್ಘಾಟನೆ ಮಾಡುವುದತರ ಬಗ್ಗೆ ಮಾಹಿತಿ ನೀಡಿದ ಜಲಸಂಪನ್ಮೂಲ ಸಚಿವ ಸಂಜಯ್ ಕುಮಾರ್ ಝಾ ಅವರು ಮುಖ್ಯಮಂತ್ರಿ ನಿತೀಶರ ದೂರದೃಷ್ಟಿ ಮತ್ತು ತಮ್ಮ ಇಲಾಖೆಯ ದೃಢಸಂಕಲ್ಪದಿಂದಾಗಿ ಈ ವಿಶಿಷ್ಟ ನೀರು ನಿರ್ವಹಣೆ ಯೋಜನೆಯನ್ನು ಕಾರ್ಯಗತಗೊಳಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಹಾಥೀದಹ್ ಘಾಟ್‌ನಿಂದ ಗಂಗಾಜಲ ಎತ್ತಲಾಗುವುದು:

ಪಾಟ್ನಾದ ಮೊಕಾಮಾದ ಹಾಥೀದಹ್ ಘಾಟ್‌ನಿಂದ ಗಂಗಾಜಲವನ್ನು ಲಿಫ್ಟ್ ಮಾಡಿ, ಪೈಪ್‌ಲೈನ್ ಮೂಲಕ ನಗರಗಳಿಗೆ ಸರಬರಾಜು ಮಾಡಲಾಗುವುದು. ಕೋವಿಡ್-19 ನಂತಹ ಸವಾಲುಗಳ ನಡುವೆಯೂ ಎಂಇಐಎಲ್ (MEIL) ದಾಖಲೆಯ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸಿದೆ. ಬಿಹಾರದ ಜನರಿಗೆ ಸೇವೆ ಸಲ್ಲಿಸಲು ಯೋಜನೆ ಸಿದ್ಧವಾಗಿದೆ. ಮೊದಲ ಹಂತದಲ್ಲಿ, ಹೈದರಾಬಾದ್ ಮೂಲದ ಎಂಇಐಎಲ್ ಸಂಸ್ಥೆಯು ಪಾಟ್ನಾದ ಮೊಕಾಮಾ ಪ್ರದೇಶದಲ್ಲಿ ಮೊದಲ ಇನ್​​ಟೇಕ್ ವೆಲ್ ಮತ್ತು ಪಂಪ್ ಹೌಸ್ ಅನ್ನು ನಿರ್ಮಿಸಿತು.

ಬೃಹತ್​ ಪೈಪ್‌ಲೈನ್ ಜಾಲದ ಮೂಲಕ ರಾಜ್‌ಗಿರ್‌ನಲ್ಲಿ ನಿರ್ಮಿಸಲಾದ ಟ್ಯಾಂಕ್‌ಗೆ ಹಾಥೀದಹ್ ನಿಂದ ನೀರನ್ನು ಕಳುಹಿಸಲಾಗುತ್ತದೆ. ಒಟ್ಟು ನಾಲ್ಕು ಪಂಪ್ ಹೌಸ್ ಗಳನ್ನು ನಿರ್ಮಿಸಲಾಗಿದೆ. ಅವು ಹಾಥೀದಹ್, ರಾಜ್‌ಗಿರ್, ತೇಟಾರ್ ಮತ್ತು ಗಯಾದಲ್ಲಿವೆ. ಯೋಜನೆಯು ರಾಜ್‌ಗಿರ್ (9.915 M. Cu.M), ತೇತಾರ್ (18.633 M. Cu.M), ಮತ್ತು ಗಯಾ (0.938 M. Cu.M) ನಲ್ಲಿ ಸಕ್ರಿಯ ಶೇಖರಣಾ ಸಾಮರ್ಥ್ಯದೊಂದಿಗೆ ಮೂರು ಶೇಖರಣಾ ಜಲಾಶಯಗಳನ್ನು ಹೊಂದಿದೆ.

ನೀರಿಗಾಗಿ 151 ಕಿ.ಮೀ. ಉದ್ದದ ಪೈಪ್‌ಲೈನ್!

ಈ ಜಲಾಶಯಗಳಿಂದ ರಾಜ್‌ಗಿರ್‌ನಲ್ಲಿ 24 ಎಂಎಲ್‌ಡಿ, ಮನ್‌ಪುರದಲ್ಲಿ 186.5 ಎಂಎಲ್‌ಡಿ ಮತ್ತು ಗಯಾದಲ್ಲಿ ಮೂರು ನೀರಿನ ಸಂಸ್ಕರಣಾ ಘಟಕಗಳಿಗೆ (ಡಬ್ಲ್ಯುಟಿಪಿ) ನೀರನ್ನು ಪಂಪ್ ಮಾಡಲಾಗುತ್ತದೆ. ಇದರ ಜೊತೆಗೆ, ಕಂಪನಿಯು 132 KV / 33 KV ಮತ್ತು 33 KV / 11 KV ಸಾಮರ್ಥ್ಯದ ಎರಡು ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಿದೆ. 151 ಕಿ.ಮೀ ಉದ್ದದ ಪೈಪ್ ಲೈನ್ ಹಾಕಲಾಗಿದೆ. ನಾಲ್ಕು ಸೇತುವೆಗಳು ಮತ್ತು ಒಂದು ರೈಲು ಸೇತುವೆಯನ್ನು ನಿರ್ಮಿಸಲಾಗಿದೆ.

ಹಿಂದಿಯಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: