ಸುಪ್ರೀಂಕೋರ್ಟ್‌ನ ಮೊದಲ ನ್ಯಾಯಾಧೀಶೆ ಎಂ. ಫಾತಿಮಾ ಬೀವಿ ನಿಧನ

|

Updated on: Nov 23, 2023 | 3:02 PM

Justice Fathima Beevi: 1950 ರಲ್ಲಿ ವಕೀಲರಾಗಿ ದಾಖಲಾದ ಫಾತಿಮಾ ಬೀವಿ 1958 ರಲ್ಲಿ ಮುನ್ಸಿಫ್ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು 1968 ರಲ್ಲಿ ಉಪ ನ್ಯಾಯಾಧೀಶರಾಗಿ ಮತ್ತು 1972 ರಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ ಬಡ್ತಿ ಪಡೆದರು. 1974ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದರು.

ಸುಪ್ರೀಂಕೋರ್ಟ್‌ನ ಮೊದಲ ನ್ಯಾಯಾಧೀಶೆ ಎಂ. ಫಾತಿಮಾ ಬೀವಿ ನಿಧನ
ಫಾತಿಮಾ ಬೀವಿ
Follow us on

ಕೊಲ್ಲಂ ನವೆಂಬರ್ 23: ಸುಪ್ರೀಂಕೋರ್ಟ್‌ನ (Supreme Court) ಮೊದಲ ನ್ಯಾಯಾಧೀಶೆ ಹಾಗೂ ತಮಿಳುನಾಡಿನ ಮಾಜಿ ರಾಜ್ಯಪಾಲರಾದ  ಜಸ್ಟೀಸ್ ಎಂ. ಫಾತಿಮಾ ಬೀವಿ (Justice Fathima Beevi) ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಗುರುವಾರ ಬೆಳಗ್ಗೆ ಕೇರಳ ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಫಾತಿಮಾ ಬೀವಿ ಕೊನೆಯುಸಿರೆಳೆದಿದ್ದಾರೆ.ಪತ್ತನಂತಿಟ್ಟದಲ್ಲಿ ಅಣ್ಣಾವೀಟ್‌ನಲ್ಲಿ ಮೀರಾ ಸಾಹಿಬ್ ಮತ್ತು ಖದೀಜಾ ಬೀವಿಯವರ ಮಗಳಾಗಿ 1927 ರಲ್ಲಿ ಜನಿಸಿದ ಫಾತಿಮಾ ಬೀವಿ, ಪತ್ತನಂತಿಟ್ಟ ಕ್ಯಾಥೋಲಿಕ್ ಹೈಸ್ಕೂಲ್‌ನಲ್ಲಿ ಓದಿದ ನಂತರ ತಿರುವನಂತಪುರಂ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು.

ತಿರುವನಂತಪುರಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನೂ ಪಡೆದರು. 1950 ರಲ್ಲಿ ವಕೀಲರಾಗಿ ದಾಖಲಾದ ಫಾತಿಮಾ ಬೀವಿ 1958 ರಲ್ಲಿ ಮುನ್ಸಿಫ್ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು 1968 ರಲ್ಲಿ ಉಪ ನ್ಯಾಯಾಧೀಶರಾಗಿ ಮತ್ತು 1972 ರಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ ಬಡ್ತಿ ಪಡೆದರು.

1974ರಲ್ಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದರು. 1983ರಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾದರು. 1989 ರಲ್ಲಿ, ಅವರು ಸುಪ್ರೀಂಕೋರ್ಟ್‌ನಲ್ಲಿ ದೇಶದ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಮೂರು ವರ್ಷಗಳ ನಂತರ ಅವರು ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು.

ಇದನ್ನೂ ಓದಿ:  Rain Alert: ಕೇರಳ, ತಮಿಳುನಾಡಿನಲ್ಲಿ ಭಾರಿ ಮಳೆಯ ಮುನ್ಸೂಚನೆ, ಆರೆಂಜ್ ಅಲರ್ಟ್ ​, ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ

ಫಾತಿಮಾ ಬೀವಿ 1997 ರಿಂದ 2001 ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಈ ವರ್ಷ ಕೇರಳ ಸರ್ಕಾರವು ಫಾತಿಮಾ ಬೇವಿ ಅವರಿಗೆ ‘ಕೇರಳ ಪ್ರಭ’ ಪ್ರಶಸ್ತಿ ನೀಡಿ ಗೌರವಿಸಿದೆ. ಸಾಮಾಜಿಕ ಮತ್ತು ನಾಗರಿಕ ಸೇವಾ ಕ್ಷೇತ್ರದಲ್ಲಿನ ಕೊಡುಗೆಗಾಗಿ ಫಾತಿಮಾ ಬೀವಿ ಅವರಿಗೆ ‘ಕೇರಳಪ್ರಭಾ’ ಪ್ರಶಸ್ತಿಯನ್ನು ನೀಡಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:24 pm, Thu, 23 November 23