ಕಾಣೆಯಾಗಿದ್ದ ಭಾರತೀಯ ಯುವಕರು ಚೀನಾದಲ್ಲಿ ಪತ್ತೆ

ದೆಹಲಿ: ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದಾರೆ ಎಂದು ತಿಳಿದಿದ್ದ ಅರುಣಾಚಲ ಪ್ರದೇಶದ ಐವರು ಯುವಕರು ಇದೀಗ ಚೀನಾದಲ್ಲಿ ಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ಅಧಿಕಾರಿಗಳು ಇಂದು ಕಳಿಸಿದ್ದ ವಿಶೇಷ ಸಂದೇಶಕ್ಕೆ ಚೀನಾ ಸೈನ್ಯಾಧಿಕಾರಿಗಳು ಸ್ಪಂದಿಸಿದ್ದು ಯುವಕರು ತಮ್ಮ ಪ್ರದೇಶದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಯುವಕರು ಚೀನಾ ಗಡಿಗೆ ಅಂಟಿಕೊಂಡಿರುವ ರಾಜ್ಯದ ಮೇಲ್ಭಾಗದ ಸುಬನ್​ ಸಿರಿ ಜಿಲ್ಲೆಯಿಂದ ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಜೊತೆಗೆ, ಈ […]

ಕಾಣೆಯಾಗಿದ್ದ ಭಾರತೀಯ ಯುವಕರು ಚೀನಾದಲ್ಲಿ ಪತ್ತೆ

Updated on: Sep 08, 2020 | 8:29 PM

ದೆಹಲಿ: ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದಾರೆ ಎಂದು ತಿಳಿದಿದ್ದ ಅರುಣಾಚಲ ಪ್ರದೇಶದ ಐವರು ಯುವಕರು ಇದೀಗ ಚೀನಾದಲ್ಲಿ ಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಾರತೀಯ ಅಧಿಕಾರಿಗಳು ಇಂದು ಕಳಿಸಿದ್ದ ವಿಶೇಷ ಸಂದೇಶಕ್ಕೆ ಚೀನಾ ಸೈನ್ಯಾಧಿಕಾರಿಗಳು ಸ್ಪಂದಿಸಿದ್ದು ಯುವಕರು ತಮ್ಮ ಪ್ರದೇಶದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಯುವಕರು ಚೀನಾ ಗಡಿಗೆ ಅಂಟಿಕೊಂಡಿರುವ ರಾಜ್ಯದ ಮೇಲ್ಭಾಗದ ಸುಬನ್​ ಸಿರಿ ಜಿಲ್ಲೆಯಿಂದ ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿರುವ ಬಗ್ಗೆ ವರದಿಯಾಗಿತ್ತು. ಜೊತೆಗೆ, ಈ ಐವರನ್ನು ಚೀನಾ ಸೈನ್ಯವು ಅಪಹರಿಸಿದೆ ಎಂಬ ಮಾತು ಸಹ ಕೇಳಿಬಂದಿತ್ತು.

ಆದರೆ ಈಗ, ಯುವಕರು ಪತ್ತೆಯಾಗಿದ್ದು ಅವರನ್ನು ತಾಯ್ನಾಡಿಗೆ ಕರೆತರಲು ಪ್ರಕ್ರಿಯೆ ನಡೆಸಲಾಗುತ್ತಿದೆ. ಈ ಮಾಹಿತಿಯನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜಿಜು ಟ್ವೀಟ್​ ಮಾಡಿದ್ದಾರೆ.