ದಿವಂಗತ ಪ್ರಧಾನಿ ನರಸಿಂಹ ರಾವ್​ಗೆ ಭಾರತ ರತ್ನ ನೀಡಲು ತೆಲಂಗಾಣ ಆಗ್ರಹ

  • Publish Date - 7:13 pm, Tue, 8 September 20
ದಿವಂಗತ ಪ್ರಧಾನಿ ನರಸಿಂಹ ರಾವ್​ಗೆ ಭಾರತ ರತ್ನ ನೀಡಲು ತೆಲಂಗಾಣ ಆಗ್ರಹ

ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ನೇತೃತ್ವದ ತೆಲಂಗಾಣ ಸರಕಾರವು ಕೇಂದ್ರ ಸರ್ಕಾರಕ್ಕೆ ಮನವಿಯೊಂದನ್ನು ಸಲ್ಲಿಸಿ ಮಾಜಿ ಪ್ರಧಾನ ಮಂತ್ರಿ ದಿವಂಗತ ಪಿ ವಿ ನರಸಿಂಹರಾವ್ ಅವರಿಗೆ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಮರಣೋತ್ತರವಾಗಿ ನೀಡಬೇಕೆಂದು ಕೋರಿದೆ.

ಈ ಕುರಿತು ತೆಲಂಗಾಣ ರಾಜ್ಯದ ವಿಧಾನಸಭೆಯಲ್ಲಿ ಇಂದು ನಿರ್ಣಯವೊಂದನ್ನು ಪ್ರಸ್ತಾಪಿಸಿ ನಂತರ ಅಂಗೀಕರಿಸಲಾಯಿತು. ಆದರೆ, ಎ ಐ ಎಮ್ ಐ ಎಮ್ ಪಕ್ಷದ ಸದಸ್ಯರು ಪಕ್ಷದ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಅವರ ನೇತೃತ್ವದಲ್ಲಿ ಪ್ರಸ್ತಾಪವನ್ನು ವಿರೋದಿಸಿದ್ದೂ ಅಲ್ಲದೆ ಕಲಾಪ ಬಹಿಷ್ಕರಿಸಿ ಸದನದಿಂದ ಹೊರನಡೆದರು. ಆಮೇಲೆ ಮಾಧ್ಯಮ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದ ಒವೈಸಿ,‘‘ ಮಾಜಿ ಪ್ರಧಾನ ಮಂತ್ರಿ ದಿವಂಗತ ಪಿ ವಿ ನರಸಿಂಹರಾವ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕೋರುವ ಚರ್ಚೆ ಮತ್ತು ಪ್ರಸ್ತಾವನೆಯನ್ನು ವಿರೋಧಿಸಿ ನಾವು ಕಲಾಪವನ್ನು ಬಹಿಷ್ಕರಿಸಿದ್ದೇವೆ. ಒಬ್ಬ ಪ್ರಧಾನ ಮಂತ್ರಿಯಾಗಿ ಅವರು ಅವರು ಬಾಬ್ರಿ ಮಸೀದಿ ಧ್ವಂಸ ಮಾಡುವುದನ್ನು ತಡೆಯುವಲ್ಲಿ ವಿಫಲರಾದರು. ಅವರ ಮತೀಯ ರಾಜಕಾರಣ ಎಲ್ಲರಿಗೂ ಗೊತ್ತಿರುವ ವಿಷಯವೇ,’’ ಎಂದು ಹೇಳಿದರು.

ದಕ್ಷಿಣ ಭಾರತ ಮೂಲದ ಮೊದಲ ಪ್ರಧಾನಿ ಮಂತ್ರಿ ಎಂಬ ಹೆಗ್ಗಳಿಕೆಯ ರಾವ್ ಅವರು, 1991 ರಿಂದ 1996ರವರೆಗೆ ರಾಷ್ಟ್ರದ ಒಂಭತ್ತನೇ ಪ್ರಧಾನಿಯಾಗಿ ಒಂದು ಅಲ್ಪಮತದ ಕಾಂಗ್ರೆಸ್ ಸರಕಾರವನ್ನು ಯಶಸ್ವೀಯಾಗಿ ಪೂರ್ಣಾವಧಿವರೆಗೆ ನಡೆಸಿದರು. ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಜಾರಿಗೊಳಿಸಿದ ಆರ್ಥಿಕ ಉದಾರೀಕರಣದಿಂದ ಭಾರತ ವಿದೇಶಿ ಮೂಲದ ಕಂಪನಿಗಳಿಗೆ ಬಾಗಿಲು ತೆರೆಯಿತು. ನಂತರದ್ದೆಲ್ಲ ಈಗ ಇತಿಹಾಸ.

Click on your DTH Provider to Add TV9 Kannada