ದೆಹಲಿಯಲ್ಲಿ ಐದು ಶಂಕಿತ ಉಗ್ರರ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ, ತಪ್ಪಿದ ದುರಂತ

|

Updated on: Dec 07, 2020 | 5:53 PM

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ವಿಶೇಷ ಪೊಲೀಸ್​ ಪಡೆ ಶಖರ್​ಪುರ್​ಗೆ ತೆರಳಿತ್ತು . ಈ ವೇಳೆ ಕೊಠಡಿಯಲ್ಲಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಅವರನ್ನು ಬಂಧಿಸಲಾಗಿದೆ.

ದೆಹಲಿಯಲ್ಲಿ ಐದು ಶಂಕಿತ ಉಗ್ರರ ಬಂಧನ; ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ, ತಪ್ಪಿದ ದುರಂತ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಐದು ಶಂಕಿತ ಉಗ್ರರರನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಮುಂದೆ ನಡೆಯಬಹುದಾಗಿದ್ದ ದೊಡ್ಡ ದುರಂತವನ್ನು ಆರಂಭದಲ್ಲೇ ನಾಶ ಮಾಡಿದ್ದಾರೆ.

ದೆಹಲಿಯ ಶಖರ್​ಪುರ್​ ಭಾಗದಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಮೂರು ಉಗ್ರರು ಜಮ್ಮು-ಕಾಶ್ಮೀರ ಮೂಲದವರಾದರೆ ಇನ್ನಿಬ್ಬರು ಪಂಜಾಬ್​ನವರು ಎಂದು ತಿಳಿದು ಬಂದಿದೆ. ಆದರೆ, ಈ ಉಗ್ರರು ಯಾವ ಸಂಘಟನೆ ಜೊತೆ ಸಂಬಂಧ ಹೊಂದಿದ್ದರು ಎನ್ನುವ ವಿಚಾರ ಇನ್ನಷ್ಟೇ ಬಯಲಾಗಬೇಕಿದೆ.

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ವಿಶೇಷ ಪೊಲೀಸ್​ ಪಡೆ ಶಖರ್​ಪುರ್​ಗೆ ತೆರಳಿತ್ತು . ಈ ವೇಳೆ ಕೊಠಡಿಯಲ್ಲಿದ್ದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ನಂತರ ಅವರನ್ನು ಬಂಧಿಸಲಾಗಿದೆ. ಈ ಉಗ್ರರಿಂದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಶೌರ್ಯಚಕ್ರ ಪ್ರಶಸ್ತಿ ವಿಜೇತನ ಹತ್ಯೆಯಲ್ಲಿ ಭಾಗಿ?:

ಶಬ್ಬಿರ್​ ಅಹ್ಮದ್, ಅಯುಬ್​ ಪಠಾಣ್​, ರಿಯಾಜ್​, ಗುರ್ಜೀತ್​ ಸಿಂಗ್​ ಹಾಗೂ ಸುಖದೀಪ್​ ಸಿಂಗ್​ ಬಂಧಿತರು. ಶೌರ್ಯಚಕ್ರ ಪ್ರಶಸ್ತಿ ವಿಜೇತ ಬಲ್ವಿಂದರ್​ ಸಿಂಗ್​ ಹತ್ಯೆ ಬಂಧಿತರಲ್ಲೊಬ್ಬನ ಕೈವಾಡ ಇತ್ತು ಎನ್ನಲಾಗಿದೆ.

20 ದಿನಗಳ ಹಿಂದೆ ದೆಹಲಿಯಲ್ಲಿ ನಡೆದಿತ್ತು ಬಂಧನ:

ಕಳೆದ 20 ದಿನಗಳ ಹಿಂದೆ ದೆಹಲಿಯಲ್ಲಿ ಜೈಷ್​​-ಎ- ಮೊಹಮದ್​ ಸಂಘಟನೆಯ ಇಬ್ಬರು ಉಗ್ರರರನ್ನು ಬಂಧಿಸಲಾಗಿತ್ತು. ಇದಾದ ಬೆನ್ನಲ್ಲೇ ಈಗ ಐದು ಉಗ್ರರರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಹತರಾದ ಉಗ್ರರು ಮಸೂದ್ ಅಜರ್ ಸಹೋದರನ ಸಂಪರ್ಕದಲ್ಲಿದ್ದರು ! Slain terrorists were in touch with Masood Azhar’s brother

Published On - 5:43 pm, Mon, 7 December 20