ಇಬ್ಬರು ಬಾಲಕಿಯರು ಭಿಕ್ಷೆ ಬೇಡುತ್ತಾ ವಿದೇಶಿ ಪ್ರವಾಸಿಗರಿದ್ದ ಆಟೋಹತ್ತಿ 150 ಮೀಟರ್ನಷ್ಟು ದೂರ ಹೋಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಬಾಲಕಿಯರು ನಡೆದುಕೊಂಡಿರುವ ರೀತಿಗೆ ವಿದೇಶಿ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಪ್ರವಾಸಿಗರು ಅಸುರಕ್ಷಿತರಾಗಿದ್ದಾರೆ ಎನ್ನುವ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹೊರಬಿದ್ದಿದ್ದು ಅದರಲ್ಲಿ ಮನೆ, ಗೊತ್ತುಗುರಿ ಇಲ್ಲದ ಇಬ್ಬರು ಬಾಲಕಿಯರು ವಿದೇಶಿ ಪ್ರವಾಸಿಗರಿದ್ದ ಇ-ಆಟೋವನ್ನು ಹತ್ತಿ ಸುಮಾರು 150 ಮೀಟರ್ ದೂರ ಹೋಗಿದ್ದಾರೆ. ಅವರಿಗೆ ಹಣ ಕೊಡುವಂತೆ ಪೀಡಿಸಿದ್ದಾರೆ.
ಅವರು ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ, ಒಬ್ಬಳು ಆಟೋ ಹತ್ತಿಕೊಂಡಿದ್ದರೆ ಇನ್ನೊಬ್ಬಳು ಕೂಡ ಆಟೋ ಹತ್ತಲು ಪ್ರಯತ್ನಿಸುತ್ತಿದ್ದುದು ಕಂಡುಬಂದಿತ್ತು. ಹಣ ಕೊಡುವುದಿಲ್ಲ ಎಂದ ಮೇಲೂ ಅವರನ್ನು ಪೀಡಿಸಿದ್ದಾರೆ.
ಮತ್ತಷ್ಟು ಓದಿ: ಪ್ರೇಯಸಿಯೊಂದಿಗೆ ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ವೇಳೆ ಎಂಟ್ರಿ ಕೊಟ್ಟ ಗರ್ಭಿಣಿ ಪತ್ನಿ
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈಗಾಗಲೇ ಮಿಲಿಯನ್‌ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಬಾಲಕಿಯರು ಈ ರೀತಿ ನಡೆದುಕೊಳ್ಳುತ್ತಿದ್ದರೂ ಆಟೋ ಚಾಲಕ ಯಾವ ರೀತಿಯಲ್ಲೂ ಪ್ರತಿಕ್ರಿಯಿಸದಿರುವುದು ಮತ್ತಷ್ಟು ಬೇಸರದ ಸಂಗತಿಯಾಗಿದೆ.
Typical concern of every foreign tourist visiting Delhi, India. pic.twitter.com/l1Ihr39e1s
— Indian Tech & Infra (@IndianTechGuide) July 18, 2024
ಆನ್ಲೈನ್ನಲ್ಲಿ ಇಂತಹ ಸಾಕಷ್ಟು ವಿಡಿಯೋಗಳು ಹರಿದಾಡುತ್ತಿವೆ, ಕಳೆದ ವರ್ಷ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದ ವಿಡಿಯೋವೊಂದರಲ್ಲಿ ರಸ್ತೆಯಲ್ಲಿ ನಿಂತಿದ್ದ ವಿದೇಶಿ ಪ್ರವಾಸಿಗನ ಬಳಿಕ ಭಿಕ್ಷುಕರು ಹಣಕ್ಕಾಗಿ ಅವರನ್ನು ಪೀಡಿಸಿ ಓಡಿಸಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿತ್ತು.
ದೆಹಲಿಯ ಬೀದಿಗಳಲ್ಲಿ ಸೂರಿಲ್ಲದ , ಬೀದಿ ಬದಿಯಲ್ಲಿ ವಾಸಿಸುವ ಸುಮಾರು 70,000 ಮಕ್ಕಳಿದ್ದಾರೆ, ಅವರಲ್ಲಿ ಅರ್ಧಕ್ಕಿಂತ ಹೆಚ್ಚುಮಂದಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ