ಮಹದೇವ್ ಆ್ಯಪ್ ಪ್ರಕರಣದ ಎಫ್‌ಐಆರ್‌ನಲ್ಲಿ ಬಘೇಲ್ ಹೆಸರು; ರಾಜಕೀಯ ಪ್ರತೀಕಾರ ಎಂದ ಹಿರಿಯ ಕಾಂಗ್ರೆಸ್ ನಾಯಕ

|

Updated on: Mar 18, 2024 | 8:54 PM

ರಾಯ್‌ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಘೇಲ್, “ನನ್ನ ವಿರುದ್ಧ ಮಾರ್ಚ್ 4 ರಂದು EOW ನಿಂದ ಎಫ್‌ಐಆರ್ ದಾಖಲಿಸಲಾಗಿದೆ, ನಂತರ ಅದನ್ನು ವೆಬ್‌ಸೈಟ್‌ನಲ್ಲಿ ಏಕೆ ಪ್ರಕಟಿಸಿಲ್ಲ? ಒತ್ತಡಕ್ಕೆ ಮಣಿದು ನನ್ನ ಹೆಸರನ್ನು ಸೇರಿಸಲಾಯಿತು. ಇದರರ್ಥ ಬಿಜೆಪಿಯು ರಾಜನಂದಗಾಂವ್ ಮತ್ತು ಛತ್ತೀಸ್‌ಗಢ ಕ್ಷೇತ್ರವನ್ನು ಕಳೆದುಕೊಳ್ಳುವ ಭಯದಲ್ಲಿದೆ ಎಂದಿದ್ದಾರೆ.

ಮಹದೇವ್ ಆ್ಯಪ್ ಪ್ರಕರಣದ ಎಫ್‌ಐಆರ್‌ನಲ್ಲಿ ಬಘೇಲ್ ಹೆಸರು; ರಾಜಕೀಯ ಪ್ರತೀಕಾರ ಎಂದ ಹಿರಿಯ ಕಾಂಗ್ರೆಸ್ ನಾಯಕ
ಭೂಪೇಶ್ ಬಘೇಲ್
Follow us on

ರಾಯ್‌ಪುರ ಮಾರ್ಚ್ 18: ಮಹಾದೇವ್ ಆ್ಯಪ್ ಬೆಟ್ಟಿಂಗ್ ಹಗರಣದಲ್ಲಿ (Mahadev App betting scam) ತಮ್ಮ ವಿರುದ್ಧ ದಾಖಲಾಗಿರುವ ಆರ್ಥಿಕ ಅಪರಾಧ ವಿಭಾಗದ (EOW) ಪ್ರಥಮ ಮಾಹಿತಿ ವರದಿ (FIR) ಕುರಿತು ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ (Bhupesh Baghel), ಇದು ರಾಜಕೀಯ ಪ್ರತೀಕಾರವಾಗಿದ್ದು ಬಿಜೆಪಿ ನೇತೃತ್ವದ ಸರ್ಕಾರವು ನನ್ನ ಹೆಸರನ್ನು ಇದರಲ್ಲಿ ಬಲವಂತವಾಗಿ  ಸೇರಿಸಿದೆ ಎಂದಿದ್ದಾರೆ. ಭಾನುವಾರ ರಾಯ್‌ಪುರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಘೇಲ್, “ನನ್ನ ವಿರುದ್ಧ ಮಾರ್ಚ್ 4 ರಂದು EOW ನಿಂದ ಎಫ್‌ಐಆರ್ ದಾಖಲಿಸಲಾಗಿದೆ, ನಂತರ ಅದನ್ನು ವೆಬ್‌ಸೈಟ್‌ನಲ್ಲಿ ಏಕೆ ಪ್ರಕಟಿಸಿಲ್ಲ? ಒತ್ತಡಕ್ಕೆ ಮಣಿದು ನನ್ನ ಹೆಸರನ್ನು ಸೇರಿಸಲಾಯಿತು. ಇದರರ್ಥ ಬಿಜೆಪಿಯು ರಾಜನಂದಗಾಂವ್ ಮತ್ತು ಛತ್ತೀಸ್‌ಗಢ ಕ್ಷೇತ್ರವನ್ನು ಕಳೆದುಕೊಳ್ಳುವ ಭಯದಲ್ಲಿದೆ. ಏಕೆಂದರೆ ನನ್ನ ಅಭ್ಯರ್ಥಿಯು ರಾಜ್ಯಾದ್ಯಂತ ಪ್ರಭಾವ ಬೀರಬಹುದು ಎಂದು ಅವರಿಗೆ ತಿಳಿದಿದೆ ಎಂದಿದ್ದಾರೆ.

ಈ ಹಿಂದೆ ಇಂತಹ ಬೆಟ್ಟಿಂಗ್ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದು ನಮ್ಮ ಸರ್ಕಾರ. ಕಾಂಗ್ರೆಸ್ ಸರ್ಕಾರವು ಮಹಾದೇವ್ ಬೆಟ್ಟಿಂಗ್ ಆಪ್‌ಗೆ ಸಂಬಂಧಿಸಿದಂತೆ 72 ಎಫ್‌ಐಆರ್‌ಗಳನ್ನು ದಾಖಲಿಸಿದೆ ಮತ್ತು ಛತ್ತೀಸ್‌ಗಢ ಮತ್ತು ದೇಶಾದ್ಯಂತ 450 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದರಿಂದ ರಾಜನಂದಗಾಂವ್‌ನಲ್ಲಿ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಬಿಜೆಪಿಗೆ ನಷ್ಟವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.

“ಮಹಾದೇವ್ ಆ್ಯಪ್ ಅನ್ನು ಮುಚ್ಚುವಂತೆ ನಾವು ಗೂಗಲ್‌ಗೆ ಪತ್ರ ಬರೆದಿದ್ದೇವೆ. ಆದರೆ ಇನ್ನೂ ಸಾಕಷ್ಟು ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಸಕ್ರಿಯವಾಗಿವೆ. ಛತ್ತೀಸ್‌ಗಢದಲ್ಲಿ ನಾಲ್ಕು ತಿಂಗಳಿನಿಂದ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಅವರು ಏನು ಮಾಡುತ್ತಿದ್ದಾರೆ? ನಿಜವಾದ ಆರೋಪಿಗಳನ್ನು ಬಂಧಿಸಲು ಬಿಜೆಪಿಗೆ ಇಷ್ಟವಿಲ್ಲ. ಕಾನ್ಸುಲೇಟ್ ಜನರಲ್ ಸಮ್ಮುಖದಲ್ಲಿ ಶುಭಂ ಸೋನಿ ಪ್ರತಿಕ್ರಿಯೆ ನೀಡಿದರು, ಆಗ ಅವರನ್ನು ಏಕೆ ಬಂಧಿಸಲಿಲ್ಲ? ಆ ಆರೋಪಿಗಳನ್ನು ಭಾರತಕ್ಕೆ ಏಕೆ ಕರೆತರುತ್ತಿಲ್ಲ?” ಎಂದು ಬಘೇಲ್ ಪ್ರಶ್ನಿಸಿದ್ದಾರೆ.

200 ಕ್ಕೂ ಹೆಚ್ಚು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ, ಆದರೆ ಇವುಗಳನ್ನು ಬೇರೆಡೆಯಿಂದ ನಿರ್ವಹಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ‘ಕೆ ಕವಿತಾ ಎಎಪಿ ನಾಯಕರಿಗೆ ₹100 ಕೋಟಿ ಕೊಟ್ಟಿದ್ದಾರೆ’: ಜಾರಿ ನಿರ್ದೇಶನಾಲಯ

ರವಿ ಉಪ್ಪಲ್ ವಿರುದ್ಧ ನಾವು ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದೇವೆ. ಅವರನ್ನು ಹಿಡಿಯುವುದು ಭಾರತ ಸರ್ಕಾರದ ಜವಾಬ್ದಾರಿ. ಆದರೆ ಅವರು ಹಿಡಿಯಲಿಲ್ಲ ಬಘೇಲ್ ಆರೋಪಿಸಿದ್ದಾರೆ.

ಆ್ಯಪ್ ಅನ್ನು ಸ್ಥಗಿತಗೊಳಿಸುವಂತೆ ಗೂಗಲ್‌ಗೆ ಪತ್ರ ಬರೆದಿದ್ದು ನಮ್ಮ ಸರ್ಕಾರ ಎಂದು ಬಘೇಲ್ ಹೇಳಿದ್ದಾರೆ.

ಛತ್ತೀಸ್‌ಗಢ ಪೊಲೀಸರು ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಮಹಾದೇವ್ ಆನ್‌ಲೈನ್ ಬುಕ್ ಆ್ಯಪ್ ಹಗರಣದಲ್ಲಿ ಆರೋಪಿ ಎಂದು ಹೆಸರಿಸಿದ್ದು, ₹ 6,000 ಕೋಟಿ ಮೌಲ್ಯದ ಹಗರಣ ಅಂದಾಜಿಸಲಾಗಿದೆ. ಇದು ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕನಿಗೆ ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು. ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ವಂಚನೆ, ಕ್ರಿಮಿನಲ್ ಪಿತೂರಿ, ನಂಬಿಕೆಯ ಉಲ್ಲಂಘನೆ ಮತ್ತು ನಕಲಿಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳು ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಮತ್ತು 11 ರ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಬಘೇಲ್ ವಿರುದ್ಧ ಮಾರ್ಚ್ 4ರಂದು ಆರೋಪ ಹೊರಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ