ಕೌಶಲ್ಯಾಭಿವೃದ್ಧಿ ಪ್ರಕರಣದಲ್ಲಿ ಕಳೆದ ವಾರ ಬಂಧನಕ್ಕೊಳಗಾಗಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ TDP) ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರನ್ನು ಬೆಂಬಲಿಸಿ ಐಟಿ ವಲಯದ ಉದ್ಯೋಗಿಗಳು (Techies) ಹೈದರಾಬಾದ್‌ನ ಸೈಬರಾಬಾದ್ (Cyberabad, Hyderabad) ವಿಪ್ರೋ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಟಿಡಿಪಿ ಧ್ವಜಗಳು, ಫಲಕಗಳು ಮತ್ತು ಬ್ಯಾನರ್‌ಗಳನ್ನು ಎತ್ತಿಹಿಡಿದಿದ್ದರು, ‘ ನಾನು ನಮ್ಮ ನಾಯಕ ಸಿಬಿಎನ್ ಜೊತೆಗೆ ಇದ್ದೇನೆ. ಪ್ರಜಾಪ್ರಭುತ್ವವನ್ನು ಉಳಿಸಲು ಈ ಬಿಕ್ಕಟ್ಟಿನ ಸಮಯದಲ್ಲಿ ಒಗ್ಗಟ್ಟನ್ನು ವ್ಯಕ್ತಪಡಿಸಲು ನಾವೆಲ್ಲಾ ಇಲ್ಲಿ ಸೇರಿದ್ದೇವೆ ಎಂದು ಪ್ರತಿಭಟನಾಕಾರರು ಹೇಳಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರೊಂದಿಗೆ ಘರ್ಷಣೆಗಿಳಿದರು ಮತ್ತು ಈ ಪ್ರದೇಶದಲ್ಲಿ ಭಾರೀ ಟ್ರಾಫಿಕ್ ಜಾಮ್ ಕಂಡುಬಂದಿದ್ದರಿಂದ ಜನಸಂದಣಿಯನ್ನು ಚದುರಿಸಿದರು.
ಆಂಧ್ರಪ್ರದೇಶ ಹೈಕೋರ್ಟ್ (Andhra Pradesh High court) ಚಂದ್ರಬಾಬು ನಾಯ್ಡು ಅವರನ್ನು ತನ್ನ ಕಸ್ಟಡಿಗೆ ತೆಗೆದುಕೊಳ್ಳದಂತೆ ಸಿಐಡಿಗೆ (CID) ಆದೇಶಿಸಿ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 19 ಕ್ಕೆ ಮುಂದೂಡಿದೆ. ಮಂಗಳವಾರ ಎಸಿಬಿ ಕೋರ್ಟ್ ಚಂದ್ರಬಾಬು ನಾಯ್ಡು ಅವರ ಹೌಸ್ ರಿಮಾಂಡ್ ಅರ್ಜಿಯನ್ನು ವಜಾಗೊಳಿಸಿದ್ದು, ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ (Rajahmundry central jail) ಅವರಿಗೆ ಸಾಕಷ್ಟು ಭದ್ರತೆ ಇದೆ ಎಂದು ಹೇಳಿದೆ. ಎಸಿಬಿ ನ್ಯಾಯಾಲಯವು (ACB court) 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಂತರ ನಾಯ್ಡು ಅವರನ್ನು ಸೋಮವಾರ ರಾಜಮಂಡ್ರಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ