ಜಯಲಲಿತಾ ಪುಣ್ಯತಿಥಿಯಂದು ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು WhoKilledJayalalitha ಹ್ಯಾಷ್​ಟ್ಯಾಗ್

| Updated By: Lakshmi Hegde

Updated on: Dec 05, 2020 | 6:56 PM

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹತ್ಯೆ ಮಾಡಿದ್ದು ಯಾರು ಎಂಬ ಪ್ರಶ್ನೆಯೊಂದಿಗೆ WhoKilledJayalalitha ಹ್ಯಾಷ್​ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.

ಜಯಲಲಿತಾ ಪುಣ್ಯತಿಥಿಯಂದು ಟ್ವಿಟರ್​ನಲ್ಲಿ ಟ್ರೆಂಡ್ ಆಯ್ತು WhoKilledJayalalitha ಹ್ಯಾಷ್​ಟ್ಯಾಗ್
ಜಯಲಲಿತಾ
Follow us on

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಹತ್ಯೆ ಮಾಡಿದ್ದು ಯಾರು ಎಂಬ ಪ್ರಶ್ನೆಯೊಂದಿಗೆ WhoKilledJayalalitha ಹ್ಯಾಷ್​ಟ್ಯಾಗ್ ಟ್ವಿಟರ್​ನಲ್ಲಿ ಟ್ರೆಂಡ್ ಆಗಿದೆ.

ಇವತ್ತು ಜಯಲಲಿತಾ ಅವರ ನಾಲ್ಕನೇ ವರ್ಷದ ಪುಣ್ಯತಿಥಿ. 2016ರಲ್ಲಿ ಜಯಲಲಿತಾ ನಿಧನರಾದಾಗ ಆಕೆಯ ಪಕ್ಷದ ಸಚಿವರೇ ಬೇರೆ ಬೇರೆ ಹೇಳಿಕೆಗಳನ್ನು ನೀಡಿದ್ದರು. ಅದೊಂದು ನಿಗೂಢ ಸಾವು ಎಂದು ಅಲ್ಲಿನ ಜನರು ವಾದಿಸುತ್ತಿದ್ದು ಜಯಲಲಿತಾ ಸಾವಿಗೆ ಕಾರಣ ಏನೆಂಬುದನ್ನು ಸ್ಪಷ್ಟಪಡಿಸಿ ಎಂದು ಈಗ ಮತ್ತೆ ಟ್ವೀಟಿಗರು ಒತ್ತಾಯಿಸಿದ್ದಾರೆ.

ಮೂರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಮಹಿಳೆಯ ಸಾವಿನ ಕಾರಣ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿರುವುದು ಅಚ್ಚರಿ ಎಂದು ಟ್ವೀಟಿಗರೊಬ್ಬರು ಹೇಳಿದ್ದಾರೆ.

 

Published On - 6:48 pm, Sat, 5 December 20