ತಮಿಳುನಾಡಿನಲ್ಲಿ ಕುಂಭ ದ್ರೋಣ ಆರ್ಭಟ: ಐದು ಸಾವು, ಮುಂದಿನ ಮೂರು ಗಂಟೆಗಳಲ್ಲಿ ಭಾರಿ ಮಳೆ

| Updated By: ಆಯೇಷಾ ಬಾನು

Updated on: Nov 09, 2021 | 12:50 PM

ತಮಿಳುನಾಡಿನಲ್ಲಿ ಮುಂದಿನ ಮೂರು ಗಂಟೆಗಳು ಭಾರೀ ಮಳೆಯಾಗುವ ಮನ್ಸೂಚನೆ ಸಿಕ್ಕಿದ್ದು ಮುಂದಿನ 3 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಗುಡುಗು, ಗುಡುಗು ಸಹಿತ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ.

ತಮಿಳುನಾಡಿನಲ್ಲಿ ಕುಂಭ ದ್ರೋಣ ಆರ್ಭಟ: ಐದು ಸಾವು, ಮುಂದಿನ ಮೂರು ಗಂಟೆಗಳಲ್ಲಿ ಭಾರಿ ಮಳೆ
ತಮಿಳುನಾಡಿನಲ್ಲಿ ಮಳೆ
Follow us on

ತಮಿಳುನಾಡಿನಲ್ಲಿ ಕುಂಭ ದ್ರೋಣ ಮಳೆ(Tamil Nadu Rain) ಆರ್ಭಟ ಜೋರಾಗಿದೆ. ತಮಿಳುನಾಡಿನ ಹಲವೆಡೆ ಇಂದೂ ಕೂಡ ಭಾರಿ ಮಳೆ ಮುಂದುವರೆದಿದೆ. ತಮಿಳುನಾಡಿನಲ್ಲಿ ಭಾರಿ ಮಳೆಗೆ ಐವರು ಬಲಿಯಾಗಿದ್ದು 70ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಾಗೂ ಚೆನ್ನೈನಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಪರಿಹಾರ ಕೇಂದ್ರಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಆಶ್ರಯ ಪಡೆದಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಮುಂದಿನ ಮೂರು ಗಂಟೆಗಳು ಭಾರೀ ಮಳೆಯಾಗುವ ಮನ್ಸೂಚನೆ ಸಿಕ್ಕಿದ್ದು ಮುಂದಿನ 3 ಗಂಟೆಗಳಲ್ಲಿ ಹಲವು ಜಿಲ್ಲೆಗಳಲ್ಲಿ ಗುಡುಗು, ಗುಡುಗು ಸಹಿತ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದೆ. ಚೆನ್ನೈ, ಚೆಂಗಲ್ಪಟ್ಟು, ತಿರುವಳ್ಳೂರು, ಕಾಂಚೀಪುರಂ, ವಿಲ್ಲುಪುರಂ, ನಾಗಪಟ್ಟಿಣಂ, ಕಡಲೂರು, ಮೈಲಡುತುರೈ, ತಿರುವಾರೂರ್, ತಂಜಾವೂರು, ಪುದುಕೊಟ್ಟೈ, ರಾಮನಾಥಪುರಂ ಶಿವಗಂಗೈ, ದಕ್ಷಿಣ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

14 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ತಮಿಳುನಾಡಿನಲ್ಲಿ ಇನ್ನೂ 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಮಿಳುನಾಡಿನ 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಹಾಗೂ 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್‌ಪಟ್ಟು, ವಿಲ್ಲಿಪುರಂ, ಮೈಲಾಡುದುರೈ, ತಿರುನಲ್ವೇಲಿ, ತೆಂಕಾಸಿ, ರಾಮನಾಥಪುರಂ, ನಾಗಪಟ್ಟಣಂ, ವಿರುದುನಗರ, ಕಡಲೂರು, ಶಿವಗಾಣಗಿ, ಮಧುರೈ ಸೇರಿದಂತೆ 14 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ: Chennai Rains Highlights: ತಮಿಳುನಾಡಿನಲ್ಲಿ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತ; ಶಾಲೆಗಳಿಗೆ ರಜೆ ಘೋಷಣೆ

Published On - 8:52 am, Tue, 9 November 21