G20 Meeting: ಶ್ರೀನಗರದಲ್ಲಿ ಜಿ20 ಸಭೆ, ಉಗ್ರರ ದಾಳಿಯ ಎಚ್ಚರಿಕೆ ಹಿನ್ನೆಲೆ ಗಡಿಯಲ್ಲಿ ಬಿಗಿ ಬಂದೋಬಸ್ತ್​

|

Updated on: May 12, 2023 | 8:25 AM

ಶ್ರೀನಗರ(Srinagar)ದಲ್ಲಿ ಮೇ 22 ರಿಂದ 24ರವರೆಗೆ ನಡೆಯಲಿರುವ ಜಿ-20 ಸಮ್ಮೇಳನವನ್ನು ಶಾಂತಿಯುತವಾಗಿ ನಡೆಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

G20 Meeting: ಶ್ರೀನಗರದಲ್ಲಿ ಜಿ20 ಸಭೆ, ಉಗ್ರರ ದಾಳಿಯ ಎಚ್ಚರಿಕೆ ಹಿನ್ನೆಲೆ ಗಡಿಯಲ್ಲಿ ಬಿಗಿ ಬಂದೋಬಸ್ತ್​
ಶ್ರೀನಗರದಲ್ಲಿ ಭದ್ರತೆ
Image Credit source: The Hindu
Follow us on

ಶ್ರೀನಗರ(Srinagar)ದಲ್ಲಿ ಮೇ 22 ರಿಂದ 24ರವರೆಗೆ ನಡೆಯಲಿರುವ ಜಿ-20 ಸಮ್ಮೇಳನವನ್ನು ಶಾಂತಿಯುತವಾಗಿ ನಡೆಸಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಶ್ರೀನಗರದ ದಾಲ್ ಸರೋವರದ ದಡದಲ್ಲಿರುವ ಶೇರ್ ಕಾಶ್ಮೀರ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ (SKICC) ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ . ಈ ಸಭೆಗೆ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯ ಮೂಲಕ ಪಾಕಿಸ್ತಾನದ ಭಯೋತ್ಪಾದಕರನ್ನು ಒಳನುಸುಳಲು ಪ್ರಯತ್ನಿಸಬಹುದು.

ಈ ಹಿನ್ನೆಲೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಹೈ ಅಲರ್ಟ್ ಘೋಷಿಸಿದೆ. ಮಾಹಿತಿಯ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಐಎಸ್ಐ ಪಾಕಿಸ್ತಾನದ ಸೇನೆಯ ಕರ್ನಲ್ ಸುಲ್ತಾನ್ ಅವರಿಗೆ ವಹಿಸಿದೆ.

ಮತ್ತಷ್ಟು ಓದಿ: Jammu and Kashmir: ಭಯೋತ್ಪಾದಕರು ನಡೆಸಿದ ಬಾಂಬ್​​ ಸ್ಫೋಟದಲ್ಲಿ ಸೇನಾ ಸಿಬ್ಬಂದಿಗಳು ಹುತಾತ್ಮ

ಅದೇ ಸಮಯದಲ್ಲಿ, ಪಾಕಿಸ್ತಾನವು ಪಿಒಕೆಯಲ್ಲಿ ಐದು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. ಈ ನಿಯಂತ್ರಣ ಕೊಠಡಿಗಳನ್ನು ಭಿಂಬರ್, ನೀಲಂ ಕಣಿವೆ, ಲೀಪಾ ವ್ಯಾಲಿ ರಾವ್ಲಾಕೋಟ್, ಮುಜಫರಾಬಾದ್‌ನಲ್ಲಿ ಸ್ಥಾಪಿಸಲಾಗಿದೆ.
ಕಣಿವೆಯಲ್ಲಿ ಸೇನೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಕಳೆದ ಹಲವು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗಿರುವುದು ಗಮನಾರ್ಹ.
ಇದೀಗ ಕಣಿವೆಯಲ್ಲಿ ಸೇನೆ ದೊಡ್ಡ ಮಟ್ಟದ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಪ್ರಸ್ತುತ ಪೂಂಚ್‌ನಲ್ಲಿ ರಜೌರಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಇಲ್ಲಿನ ಅರಣ್ಯಗಳನ್ನು ಭಯೋತ್ಪಾದಕರು ತಮ್ಮ ಅಡಗುದಾಣವನ್ನಾಗಿ ಮಾಡಿಕೊಂಡಿದ್ದರು.

ಏಪ್ರಿಲ್ 20 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪೂಂಚ್ ದಾಳಿಯ ನಂತರ, ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಮೇ 5 ರಂದು ಕೂಡ ಎನ್‌ಕೌಂಟರ್‌ನಲ್ಲಿ ದೇಶದ ಐವರು ಯೋಧರು ಹುತಾತ್ಮರಾಗಿದ್ದರು. ಕಣಿವೆಯಲ್ಲಿ ಉಗ್ರರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ.

600 ಪೊಲೀಸರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ
ಜಿ2ಒ ಸಮ್ಮೇಳನ ಮತ್ತು ವಿದೇಶಿ ಅತಿಥಿಗಳ ಆತಿಥ್ಯಕ್ಕಾಗಿ ಉಧಂಪುರದಲ್ಲಿ 600 ಪೊಲೀಸರ ವಿಶೇಷ ತರಬೇತಿ ನಡೆಯುತ್ತಿದೆ. ಈ ಸೈನಿಕರು ಸಿವಿಲ್ ಡ್ರೆಸ್‌ನಲ್ಲಿ ಅತಿಥಿಗಳ ಸುತ್ತಲೂ ಇರುತ್ತಾರೆ. ಇದರೊಂದಿಗೆ NSG ಕಮಾಂಡೋಗಳು ಮತ್ತು ನೌಕಾಪಡೆಯ ಮಾರ್ಕೋಸ್ ಸ್ಕ್ವಾಡ್ ಅನ್ನು ಸಹ ನಿಯೋಜಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಶ್ರೀನಗರ ಮತ್ತು ಜಮ್ಮು ನಗರದಲ್ಲಿ ಹೆಚ್ಚುವರಿ ಪಡೆಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಗಡಿಯಲ್ಲಿ ಭದ್ರತೆಯನ್ನೂ ಬಿಗಿಗೊಳಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ