ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 8 ರಿಂದ 10ರವರೆಗೆ ಆನ್‌ಲೈನ್ ಆಹಾರ ವಿತರಣೆಯನ್ನು ನಿಷೇಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಅವಧಿಯಲ್ಲಿ, ದೆಹಲಿ ಜನ ಆನ್‌ಲೈನ್‌ನಲ್ಲಿ ಆಹಾರವನ್ನು ಆರ್ಡರ್ ಮಾಡಲು ಸಾಧ್ಯವಾಗುವುದಿಲ್ಲ. ಸ್ವಿಗ್ಗಿ, ಅಮೆಜಾನ್ ಸೇರಿದಂತೆ ಇತರೆ ಆನ್‌ಲೈನ್ ವಿತರಣೆಯನ್ನು ತಡೆಹಿಡಿಯಲಾಗಿದೆ. ಇದರಿಂದಾಗಿ ಆನ್‌ಲೈನ್ ಆಹಾರ ಸೇವೆಗಳು ಲಭ್ಯವಿರುವುದಿಲ್ಲ. ಯಾವುದೇ ಆನ್‌ಲೈನ್ ವಿತರಣೆಯನ್ನು ಅನುಮತಿಸಲಾಗುವುದಿಲ್ಲ ಎಂದು ವಿಶೇಷ ಪೊಲೀಸ್ ಆಯುಕ್ತ ಎಸ್‌ಎಸ್ ಯಾದವ್ ಹೇಳಿದ್ದಾರೆ.
ಅದು ಆಹಾರವಾಗಲಿ ಅಥವಾ ಇತರ ಸರಕುಗಳ ವಿತರಣೆಯಾಗಲಿ, ಅದರ ಮೇಲೆ ನಿಷೇಧವಿರುತ್ತದೆ. ಸೆಪ್ಟೆಂಬರ್ 7 ರ ಮಧ್ಯರಾತ್ರಿಯಿಂದ ಸೆಪ್ಟೆಂಬರ್ 10 ರ ಮಧ್ಯರಾತ್ರಿಯವರೆಗೆ ದೆಹಲಿಯಲ್ಲಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಗುರುಗ್ರಾಮ್ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಸಂಚಾರ ನಿರ್ಬಂಧಗಳು ಮುಖ್ಯವಾಗಿ ಧೌಲಾ ಕುವಾನ್ ಮಾರ್ಗದ ಮೇಲೆ ಪರಿಣಾಮ ಬೀರುತ್ತವೆ. ಸೆಪ್ಟೆಂಬರ್ 8 ರಂದು ಮನೆಯಿಂದ ಕೆಲಸ ನೀತಿಯನ್ನು ಜಾರಿಗೆ ತರಲು ಗುರುಗ್ರಾಮದ ಕಂಪನಿಗಳಿಗೆ ಪೊಲೀಸರು ಸಲಹೆ ನೀಡಿದ್ದಾರೆ.
ಮತ್ತಷ್ಟು ಓದಿ: ಜಿ20 ಶೃಂಗಸಭೆ: ದೆಹಲಿಯ ಈ ಪ್ರಸಿದ್ಧ ಹೋಟೆಲ್ಗಳಲ್ಲಿ ಉಳಿಯಲಿದ್ದಾರೆ ಜೋ ಬೈಡನ್ ಸೇರಿದಂತೆ ಇತರೆ ವಿಶ್ವ ನಾಯಕರು
ದೆಹಲಿ ಸರ್ಕಾರವು ರಾಷ್ಟ್ರ ರಾಜಧಾನಿಯಲ್ಲಿ ಸೆಪ್ಟೆಂಬರ್ 8 ರಿಂದ 10 ರವರೆಗೆ ಸಾರ್ವಜನಿಕ ರಜೆ ಘೋಷಿಸಿದೆ. ಸೆಪ್ಟೆಂಬರ್ 8, 9 ಮತ್ತು 10 ರಂದು ತಮ್ಮ ನೌಕರರು ಮತ್ತು ಕಾರ್ಮಿಕರಿಗೆ ವೇತನದೊಂದಿಗೆ ರಜೆ ನೀಡುವಂತೆ ಸರ್ಕಾರವು ನಗರದ ಅಂಗಡಿಗಳು, ವ್ಯಾಪಾರಗಳು ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಸೂಚಿಸಿದೆ.
ಶೃಂಗಸಭೆಯ ಸಮಯದಲ್ಲಿ ದೆಹಲಿಯು ಹೈ ಅಲರ್ಟ್ ಆಗಿರುತ್ತದೆ. ದೆಹಲಿಯು ವಿಶ್ವ ನಾಯಕರಿಗೆ ಆತಿಥ್ಯ ನೀಡುತ್ತಿದೆ, ಆದ್ದರಿಂದ ನಗರದಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಈ ಸಮಯದಲ್ಲಿ, ಔಷಧಗಳನ್ನು ಹೊರತುಪಡಿಸಿ ಎಲ್ಲಾ ಆನ್‌ಲೈನ್ ಆಹಾರ ವಿತರಣಾ ಸೇವೆಗಳನ್ನು ನವದೆಹಲಿ ಜಿಲ್ಲೆಯಲ್ಲಿ ನಿಷೇಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Tue, 5 September 23