ಜಿ20 ಶೃಂಗಸಭೆ: ದೆಹಲಿಯ ಈ ಪ್ರಸಿದ್ಧ ಹೋಟೆಲ್​ಗಳಲ್ಲಿ ಉಳಿಯಲಿದ್ದಾರೆ ಜೋ ಬೈಡನ್ ಸೇರಿದಂತೆ ಇತರೆ ವಿಶ್ವ ನಾಯಕರು

ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಜಿ 20 ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ನಾಯಕರು, ರಾಜತಾಂತ್ರಿಕರು ಮತ್ತು ಅವರ ಪ್ರತಿನಿಧಿಗಳು ದೆಹಲಿಯಲ್ಲಿ ಉಪಸ್ಥಿತರಿರುತ್ತಾರೆ. ಇದುವರೆಗೆ ದೆಹಲಿಯಲ್ಲಿ ನಡೆಯಲಿರುವ ಜಿ20ಯ ಅತಿ ದೊಡ್ಡ ಕಾರ್ಯಕ್ರಮ ಇದಾಗಿದೆ.

ಜಿ20 ಶೃಂಗಸಭೆ: ದೆಹಲಿಯ ಈ ಪ್ರಸಿದ್ಧ ಹೋಟೆಲ್​ಗಳಲ್ಲಿ ಉಳಿಯಲಿದ್ದಾರೆ ಜೋ ಬೈಡನ್ ಸೇರಿದಂತೆ ಇತರೆ ವಿಶ್ವ ನಾಯಕರು
ಜೋ ಬೈಡನ್
Follow us
| Updated By: Digi Tech Desk

Updated on:Sep 05, 2023 | 10:49 AM

ದೆಹಲಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಜಿ 20 ಶೃಂಗಸಭೆ(G20 Summit)ಗೆ ಸಿದ್ಧತೆಗಳು ಭರದಿಂದ ಸಾಗಿವೆ. ಈ ಸಮ್ಮೇಳನದಲ್ಲಿ ಭಾಗವಹಿಸಲು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ನಾಯಕರು, ರಾಜತಾಂತ್ರಿಕರು ಮತ್ತು ಅವರ ಪ್ರತಿನಿಧಿಗಳು ದೆಹಲಿಯಲ್ಲಿ ಉಪಸ್ಥಿತರಿರುತ್ತಾರೆ. ಇದುವರೆಗೆ ದೆಹಲಿಯಲ್ಲಿ ನಡೆಯಲಿರುವ ಜಿ20ಯ ಅತಿ ದೊಡ್ಡ ಕಾರ್ಯಕ್ರಮ ಇದಾಗಿದೆ.

ವಿಶ್ವದ 43 ದೇಶಗಳ ಪ್ರತಿನಿಧಿಗಳು ಭಾರತದಲ್ಲಿ ಉಪಸ್ಥಿತರಿರುತ್ತಾರೆ 43 ದೇಶಗಳ ಮುಖ್ಯಸ್ಥರು, ಸಂಸ್ಥೆಗಳು ಮತ್ತು ಪ್ರಪಂಚದಾದ್ಯಂತದ ಅವರ ನಿಯೋಗಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. G20 ರಾಷ್ಟ್ರಗಳಲ್ಲದೆ, 9 ಇತರ ದೇಶಗಳ ಮುಖ್ಯಸ್ಥರು ಮತ್ತು 14 ಅಂತಾರಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಶೃಂಗಸಭೆಯಲ್ಲಿ ಅತಿಥಿಗಳಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ.

ಸೆಪ್ಟೆಂಬರ್ 7ಕ್ಕೆ ದೆಹಲಿ ತಲುಪಲಿದ್ದಾರೆ ಜೋ ಬೈಡನ್ ಜಿ 20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೆ..7ರಂದು ದೆಹಲಿ ತಲುಪಲಿದ್ದಾರೆ. ಅಧ್ಯಕ್ಷರಾದ ಬಳಿಕ ಜೋ ಬೈಡನ್ ಭಾರತಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬೈಡನ್ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಇದಾದ ಬಳಿಕ ಜೋ ಬೈಡನ್ ಸೆ.9 ಹಾಗೂ 10ರಂದು ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೈಡನ್​ ಐಟಿಸಿ ಮೌರ್ಯ ಹೋಟೆಲ್​ನಲ್ಲಿ ತಂಗಲಿದ್ದಾರೆ, ಐಟಿಸಿ ಮೌರ್ಯ ಹೋಟೆಲ್​ನ 14ನೇ ಮಹಡಿಯಲ್ಲಿ ಬೈಡನ್ ಉಳಿದುಕೊಳ್ಳಲಿದ್ದಾರೆ, ಸುಮಾರು 4,600 ಚದರಡಿ ವಿಸ್ತೀರ್ಣದ ರೂಂ ಅದಾಗಿದೆ.

ಇನ್ನೂ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಆಗಮಿಸಿದರೆ ತಾಜ್ ಪ್ಯಾಲೆಸ್​ ಹೋಟೆಲ್​ನಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಹೋಟೆಲ್ ಜೋ ಬೈಡನ್ ಉಳಿದುಕೊಳ್ಳಲಿರುವ ಹೋಟೆಲ್ ಪಕ್ಕದಲ್ಲಿಯೇ ಇದೆ.

ಮತ್ತಷ್ಟು ಓದಿ: G20 Summit: ಜಿ20 ಶೃಂಗಸಭೆ ಹಿನ್ನೆಲೆ ಎರಡು ದಿನಗಳ ಕಾಲ ಈ ಮೆಟ್ರೋ ನಿಲ್ದಾಣಗಳು ಬಂದ್

ಜಿ20 ಸಮಾವೇಶಕ್ಕೆ ಆಗಮಿಸಲಿರುವ ವಿದೇಶಿ ಅತಿಥಿಗಳಿಗೆ ಭರ್ಜರಿ ಆತಿಥ್ಯ ನೀಡಲಾಗುತ್ತಿದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ವಾಸ್ತವ್ಯಕ್ಕಾಗಿ ಹೋಟೆಲ್ ದಿ ಕ್ಲಾರಿಡ್ಜಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇದಲ್ಲದೇ, ಕನ್ನಾಟ್ ಪ್ಲೇಸ್‌ನಲ್ಲಿರುವ ಹೋಟೆಲ್ ದಿ ಇಂಪೀರಿಯಲ್‌ನಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಹೋಟೆಲ್ ಶಾಂಗ್ರಿ-ಲಾ ಇರೋಸ್‌ನಲ್ಲಿ ತಂಗಲಿದ್ದಾರೆ. ರಷ್ಯಾದ ನಿಯೋಗವು ಹೋಟೆಲ್ ದಿ ಒಬೆರಾಯ್‌ನಲ್ಲಿ ತಂಗಲಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಿ 20 ಸಮ್ಮೇಳನದಲ್ಲಿ ಭಾಗವಹಿಸುವುದಿಲ್ಲ.

ಒಮಾನಿ ನಿಯೋಗವು ದಿ ಒಬೆರಾಯ್ ಹೋಟೆಲ್ ಬಳಿ ಇರುವ ಲೋಧಿಯಲ್ಲಿ ತಂಗಲಿದೆ. ಟರ್ಕಿಯ ನಿಯೋಗವು ಗುರುಗ್ರಾಮದ ಟ್ರೈಡೆಂಟ್‌ನಲ್ಲಿ ತಂಗಲಿದೆ. ಹೋಟೆಲ್ ಲೆ ಮೆರಿಡಿಯನ್ ಕೆಲವು ಯುರೋಪಿಯನ್ ಯೂನಿಯನ್ ನಿಯೋಗ ಮತ್ತು ನೆದರ್ಲ್ಯಾಂಡ್ಸ್ ಮತ್ತು ನೈಜೀರಿಯಾದ ನಿಯೋಗಗಳಿಗೆ ವಸತಿ ಒದಗಿಸುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:39 pm, Mon, 4 September 23