Democratic Azad Party: ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್

| Updated By: ರಶ್ಮಿ ಕಲ್ಲಕಟ್ಟ

Updated on: Sep 26, 2022 | 1:35 PM

ಗುಲಾಂ ನಬಿ ಆಜಾದ್ ಅವರು ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಹೊಸ ಪಕ್ಷದ ಹೆಸರನ್ನು ಘೋಷಣೆ ಮಾಡಿದ್ದಾರೆ

Democratic Azad Party: ಹೊಸ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಆಜಾದ್
ಗುಲಾಂ ನಬಿ ಆಜಾದ್
Follow us on

ಶ್ರೀನಗರ:  ಕಾಂಗ್ರೆಸ್‌ನಿಂದ ನಿರ್ಗಮಿಸಿ ಸುಮಾರು ಒಂದು ತಿಂಗಳ ನಂತರ ಹಿರಿಯ ನಾಯಕ ಗುಲಾಂ ನಬಿ ಆಜಾದ್ (Ghulam Nabi Azad) ಸೋಮವಾರ ತಮ್ಮ ಹೊಸ ಪಕ್ಷದ ಹೆಸರನ್ನು ಘೋಷಿಸಿದ್ದು, ಹೊಸ ಪಕ್ಷದ ಹೆಸರು ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ (Democratic Azad Party)ಎಂದು ಹೇಳಿದ್ದಾರೆ. ನಮ್ಮ ಪಕ್ಷಕ್ಕೆ “ವಯಸ್ಸಿನ ಮಿತಿಯಿಲ್ಲ” ಎಂದು ಒತ್ತಿ ಹೇಳಿದ ಆಜಾದ್ ಯುವಕರು ಮತ್ತು ಹಿರಿಯರು ಪಕ್ಷದಲ್ಲಿ ಸಹಬಾಳ್ವೆ ನಡೆಸುತ್ತಾರೆ ಎಂದು ಹೇಳಿದ್ದಾರೆ, ಆಜಾದ್ ಅವರು ಆಗಸ್ಟ್ 26 ರಂದು ಕಾಂಗ್ರೆಸ್ (Congress) ಜೊತೆಗಿನ ದಶಕಗಳ ಕಾಲದ ಒಡನಾಟವನ್ನು ಕೊನೆಗೊಳಿಸಿ ರಾಜೀನಾಮೆ ನೀಡಿದ್ದರು. ನನ್ನ ಹೊಸ ಪಕ್ಷಕ್ಕಾಗಿ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ನಮಗೆ ಕಳುಹಿಸಲಾಗಿದೆ. ಹಿಂದಿ ಮತ್ತು ಉರ್ದು ಮಿಶ್ರಿತ ಪದ’ಹಿಂದೂಸ್ತಾನಿ’. ಪಕ್ಷದ ಹೆಸರು ಪ್ರಜಾಸತ್ತಾತ್ಮಕ, ಶಾಂತಿಯುತ ಮತ್ತು ಸ್ವತಂತ್ರವಾಗಿರಬೇಕು ಎಂದು ನಾವು ಬಯಸಿದ್ದೇವೆ ಎಂದು ಆಜಾದ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ ಧ್ವಜ ಅನಾವರಣ


ಸಾಸಿವೆ, ಬಿಳಿ ಮತ್ತು ನೀಲಿ ಎಂಬ ಮೂರು ಬಣ್ಣಗಳನ್ನು ಹೊಂದಿರುವ ಪಕ್ಷದ ಧ್ವಜವನ್ನು ಅಜಾದ್ ಬಿಡುಗಡೆ ಮಾಡಿದ್ದಾರೆ. ಸಾಸಿವೆ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ, ಬಿಳಿ ಶಾಂತಿಯನ್ನು ಸೂಚಿಸುತ್ತದೆ ಮತ್ತು ನೀಲಿ ಸ್ವಾತಂತ್ರ್ಯ, ಮುಕ್ತ ಸ್ಥಳ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದವರೆಗಿನ ಮಿತಿಗಳನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ತೊರೆದ ನಂತರ  ಜಮ್ಮುವಿನಲ್ಲಿ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಆಜಾದ್ , ಸಂಪೂರ್ಣ ರಾಜ್ಯತ್ವದ ಮರುಸ್ಥಾಪನೆಯ ಮೇಲೆ ಕೇಂದ್ರೀಕರಿಸುವ ತನ್ನದೇ ಆದ ರಾಜಕೀಯ ಸಂಘಟನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು. ಜಮ್ಮು ಮತ್ತು ಕಾಶ್ಮೀರದ ಜನರು ಪಕ್ಷದ ಹೆಸರು ಮತ್ತು ಧ್ವಜವನ್ನು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದರು. ಕಾಂಗ್ರೆಸ್ ಪಕ್ಷದೊಂದಿಗಿನ ಐದು ದಶಕಗಳ ಕಾಲದ ಒಡನಾಟವನ್ನು ಮುರಿದುಕೊಂಡ ನಂತರ ಮಾತನಾಡಿದ ಆಜಾದ್, ನನ್ನ ಪಕ್ಷವು ಪೂರ್ಣ ರಾಜ್ಯತ್ವ, ಭೂಮಿಯ ಹಕ್ಕು ಮತ್ತು ಸ್ಥಳೀಯ ನಿವಾಸಕ್ಕೆ ಉದ್ಯೋಗವನ್ನು ಮರುಸ್ಥಾಪಿಸುವತ್ತ ಗಮನ ಹರಿಸುತ್ತದೆ ಎಂದು ಹೇಳಿದ್ದರು.

ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮ ರಾಜಕೀಯ ಸಂಘಟನೆಯ ಮೊದಲ ಘಟಕವನ್ನು ರಚಿಸಲಾಗುವುದು ಎಂದ ಆಜಾದ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜನರು ನಮ್ಮ (ನಾನು ಮತ್ತು ಪಕ್ಷ ತೊರೆದ ನನ್ನ ಬೆಂಬಲಿಗರ) ಮಾನಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ವ್ಯಾಪ್ತಿಯು ಕಂಪ್ಯೂಟರ್ ಟ್ವೀಟ್‌ಗಳಿಗೆ ಸೀಮಿತವಾಗಿದೆ. ಕಾಂಗ್ರೆಸ್ ಅನ್ನು ನಾವು ನಮ್ಮ ರಕ್ತದಿಂದ ನಿರ್ಮಿಸಿದ್ದೇವೆ, ಕಂಪ್ಯೂಟರ್‌ಗಳಿಂದ ಅಲ್ಲ, ಟ್ವಿಟರ್‌ನಿಂದ ಅಲ್ಲ. ಜನರು ನಮ್ಮನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ವ್ಯಾಪ್ತಿಯು ಕಂಪ್ಯೂಟರ್ ಮತ್ತು ಟ್ವೀಟ್‌ಗಳಿಗೆ ಸೀಮಿತವಾಗಿದೆ. ಅದಕ್ಕಾಗಿಯೇ ಕಾಂಗ್ರೆಸ್ ಎಲ್ಲಿಯೂ ನೆಲೆ ಕಾಣುವುದಿಲ್ಲ ಎಂದಿದ್ದಾರೆ.

Published On - 12:45 pm, Mon, 26 September 22