ಲಖನೌ: ತೀವ್ರ ರಕ್ತಸ್ರಾವದಿಂದ ಬಳಲಿ ನಿಸ್ತೇಜಳಾಗಿದ್ದ ಬಾಲಕಿಗೆ ಸಹಾಯ ಮಾಡದೆ ಆಕೆಯ ಸುತ್ತಲೂ ನಿಂತಿದ್ದ ಗಂಡಸರು ವಿಡಿಯೊ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲಗಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಕನೌಜ್ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನೂರಾರು ಮಂದಿ ಈ ಹೃದಯ ವಿದ್ರಾವಕ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 24 ಸೆಕೆಂಡುಗಳ ಕ್ಲಿಪ್ನಲ್ಲಿ ಯುವತಿಯು ನೆಲದ ಮೇಲೆ ಮಲಗಿ ದುರ್ಬಲವಾಗಿರು ತನ್ನ ಕೈಗಳನ್ನು ಅಸಹಾಯಕವಾಗಿ ಮೇಲೆತ್ತಿ ಸಹಾಯಕ್ಕಾಗಿ ಯಾಚಿಸುತ್ತಿದ್ದಾಳೆ. ಆದರೆ ಸ್ಥಳದಲ್ಲಿದ್ದ ಯಾರೊಬ್ಬರೂ ಆಕೆಯ ನೆರವಿಗೆ ಮುಂದೆ ಬಂದಿಲ್ಲ.
ಕೆಲವರು ಮಾತ್ರ ತುರ್ತಾಗಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದ ನಂತರವಷ್ಟೇ ಬಾಲಕಿಗೆ ವೈದ್ಯಕೀಯ ನೆರವು ಸಿಕ್ಕಿದೆ. ಪೊಲೀಸ್ ಹೊರಠಾಣೆಯ ಉಸ್ತುವಾರಿ ಸಿಬ್ಬಂದಿ ಮನೋಜ್ ಪಾಂಡೆ ಬಾಲಕಿಯನ್ನು ಆಟೊ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದರು. ಪ್ರಾಥಮಿಕ ಚಿಕಿತ್ಸೆಯ ನಂತರ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರಕ್ಕೆ ಕರೆದೊಯ್ಯಲಾಯಿತು.
ವೈರಲ್ ಆಗಿರುವ ವಿಡಿಯೊ ಹೀಗಿದೆ. ದುರ್ಬಲ ಬಾಲಕಿಯ ಹೆಸರು ಮತ್ತು ಆಕೆ ಅಂಥ ಅಸಹಾಯಕ ಸ್ಥಿತಿಗೆ ತಲುಪಲು ಏನು ಕಾರಣ ಎಂಬುದೂ ತಿಳಿದು ಬಂದಿಲ್ಲ. ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಿರುವ ಪೊಲೀಸರು ಆಕೆಯು ಗೆಳೆಯನೊಬ್ಬನ ಜೊತೆಗೆ ಗೆಸ್ಟ್ಹೌಸ್ಗೆ ಹೋಗುವುದನ್ನು ಪತ್ತೆ ಮಾಡಿದ್ದಾರೆ.
इस वीडियो को देख लीजिए सच में रूह कांप जाएगी, आँखों में आंसू आ जाएंगे, कितने हैवान हो चुके हैं लोग
12 साल की मासूम खून में लथपथ पड़ी तड़प रही है, मदद के लिए हाथ आगे बढ़ा रही है
लोग झुक-झुककर वीडियो बना रहे हैं
गौर से इन शक्लों को देखिए pic.twitter.com/Qf6x79Ryt6
— Nigar Parveen (@NigarNawab) October 24, 2022
Published On - 2:06 pm, Tue, 25 October 22